ಬೆಂಗಳೂರು : ಮೈಸೂರಿನಲ್ಲಿ ನಡೆದ ಸಾಧನ ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷರನ್ನ ಹೆಸರನ್ನು ಸಿಎಂ ಸಿದ್ದರಾಮಯ್ಯ ಯಾಕೆ ಹೇಳಲಿಲ್ಲ? ಡಿಕೆ ಶಿವಕುಮಾರ್ ಗೆ ಶಾಸಕರ ಬೆಂಬಲ ಇಲ್ಲವೆಂದು ಹೀಯಾಳಿಸಿದರು. ಮನೆಯಲ್ಲಿದ್ದವರ ಹೆಸರು ಹೇಳಬೇಕಾ ಎಂದು ಸಿಎಂ ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಅವರನ್ನು ಅವಮಾನಿಸಿದರು. ಡಿಕೆ ಶಿವಕುಮಾರ್ ಅವರನ್ನು ಮುಳುಗಿಸಲು ಹಳ್ಳ ತೋಡಿ ಗುದ್ದಲಿ ಪೂಜೆ ನಡೆಸಲಾಗಿದೆ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಈ ವಿಚಾರವಾಗಿ ಮಾತನಾಡಿದ ಅವರು, ಕಾಂಗ್ರೆಸ್ ನಡುವೆ ತಂದಿಕ್ಕಲು ಬಿಜೆಪಿಗೆ ಏನು ಇಲ್ಲ. ಕಿತಾಪತಿ ಮಾಡಲು ಕಾಂಗ್ರೆಸ್ನವರೇ ಇದ್ದಾರೆ. ಕಾಂಗ್ರೆಸ್ ಪಕ್ಷದಲ್ಲೇ ಮಸಾಲೆ ಅರಿಯುತ್ತಿದ್ದಾರೆ. ಕೋಳಿ ಕುಯ್ಯುವುದು ಒಂದು ಮಾತ್ರ ಬಾಕಿ ಇದೆ. ನಮ್ಮ ಮೇಲೆ ಯಾಕೆ ಗೂಬೆ ಕೂರಿಸುತ್ತೀರಿ? ಎಂದು ಡಿಕೆ ಶಿವಕುಮಾರ್ ಹೆಸರು ಹೇಳದೆ ಸಿಎಂ ಸಿದ್ದರಾಮಯ್ಯ ನಡೆಗೆ ವ್ಯಂಗ್ಯವಾಡಿದರು.
ಪವರ್ ಶೇರಿಂಗ್ ಹೊಡೆದಾಟ ಅಂತಿಮ ಚರಣಕ್ಕೆ ಬಂದಿದೆ. ಮ್ಯಾಚ್ ಸೆಮಿ ಫೈನಲ್ ಮುಗಿದು ಫೈನಲ್ ಗೆ ಬಂದಿದೆ. ಪವರ್ ಶೇರಿಂಗ್ ಆಟವೇ ಮೈಸೂರಿನಲ್ಲಿ ನಡೆದ ಸಾಧನಾ ಸಮಾವೇಶ. ಸಮಾವೇಶಕ್ಕೆ ಲಕ್ಷಾಂತರ ಜನರನ್ನು ಸೇರಿಸುವ ಅಗತ್ಯವೇನಿತ್ತು? ಸಿಎಂ ಸಿದ್ದರಾಮಯ್ಯ ಫೋಟೋ ಇಟ್ಟುಕೊಂಡು ಘೋಷಣೆ ಕೂಗಿಸಿದರು. ಡಿಸಿಎಂ ಡಿಕೆ ಶಿವಕುಮಾರ್ ಗೆ ಅವಮಾನ ಮಾಡಲೆಂದೆ ಈ ಒಂದು ಸಾಧನ ಸಮಾವೇಶ ಮಾಡಲಾಗಿದೆ ಎಂದರು.
ಡಿಕೆ ಶಿವಕುಮಾರ್ ಕಾಂಗ್ರೆಸ್ ನಲ್ಲಿ ಎರಡನೇ ದರ್ಜೆಯ ನಾಗರಿಕ. ಮೈಸೂರಿನಲ್ಲಿ ಡಿಕೆ ಶಿವಕುಮಾರ್ ಅವರನ್ನು ಮುಳುಗಿಸುವ ಗುದ್ದಲಿ ಪೂಜೆ ನಡೆದಿದೆ. ಡಿಸಿಎಂ ಡಿಕೆ ಶಿವಕುಮಾರ್ ಗೆ ಹಳ್ಳತೋಡಿ ಮುಳುಗಿಸುವ ಗುದ್ದಲಿ ಪೂಜೆ ನಡೆದಿದೆ. ಡಿಕೆ ಶಿವಕುಮಾರ್ ಗೆ ಎಷ್ಟು ಸರ್ಕಾರ ಬೆಂಬಲವಿದೆ ಎಂದು ಯಾರು ಕೇಳಿದರು? ಯಾರೂ ಕೇಳದೆ ಸಿಎಂ ಯಾಕೆ ದೆಹಲಿಯಲ್ಲಿ ಹೇಳಿದರು ಡಿಕೆ ಶಿವಕುಮಾರ್ ಗೆ ಶಾಸಕರ ಬೆಂಬಲವಿಲ್ಲ ಎಂದು ಸಿಎಂ ಹೇಳಿಕೆ ಕೊಟ್ಟಿದ್ಯಾಕೆ? ಎಂದು ವಿಪಕ್ಷ ನಾಯಕ ಆರ್ ಅಶೋಕ್ ಪ್ರಶ್ನಿಸಿದರು.