ಮೈಸೂರು : ಮೈಸೂರಿನಲ್ಲಿ ಜನರಿಗೆ ಭಾರೀ ಉಪಟಳ ನೀಡುತ್ತಿದ್ದ ಪುಂಡಾನೆಯನ್ನು 4 ವರ್ಷದ ಬಳಿಕ ಅರಣ್ಯ ಇಲಾಖೆ ಸಿಬ್ಬಂದಿಗಳು ಇಂದು ಸೆರೆ ಹಿಡಿದಿದ್ದಾರೆ.

4 ವರ್ಷಗಳಿಂದ ಅರಣ್ಯ ಇಲಾಖೆ ಸಿಬ್ಬಂದಿಗೂ ಸಿಗದೇ ಜನರಿಗೆ ಕಾಟ ಕೊಡುತ್ತಿದ್ದ ಪುಂಡಾನೆಯನ್ನು 5 ಆನೆಗಳ ಮೂಲಕ ಕಾರ್ಯಾಚರಣೆ ನಡೆಸಿ ಅರಣ್ಯ ಇಲಾಖೆ ಸಿಬ್ಬಂದಿಗಳು ಇಂದು ಸೆರೆ ಹಿಡಿದಿದ್ದಾರೆ.

ಇಂದು ಬೆಳಗ್ಗೆಯಿಂದ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು ಅಭಿಮನ್ಯು, ಪ್ರಶಾಂತ, ಗಣೇಶ, ಕರ್ನಾಟಕ, ಭೀಮಾ ಸೇರಿದಂತೆ ಒಟ್ಟು ಐದು ಸಾಕಾನೆಗಳ ಮೂಲಕ ಪುಂಡಾನೆಯನ್ನು ಸೆರೆ ಹಿಡಿಯಲಾಗಿದೆ. ಸೆರೆ ಸಿಕ್ಕ ಆನೆಯನ್ನು ಕೊಡಗಿನ ದುಬಾರೆ ಕ್ಯಾಂಪ್ ಗೆ ಬಿಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಸಾಂದರ್ಭಿಕ ಚಿತ್ರ

BIGG NEWS : ನಾಳೆ ದೇವನಹಳ್ಳಿಯ ಆವತಿ ಬೆಟ್ಟಕ್ಕೆ ಅಮಿತ್ ಶಾ ಭೇಟಿ : 500 ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜನೆ

BIGG NEWS : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೆ ‘ಚಿರತೆ’ ದಾಳಿ : ಆತಂಕದಲ್ಲಿ ಜನ |Leopard attack

Share.
Exit mobile version