ಕಲಬುರಗಿ : ಹಾಡಹಗಲೇ ಮಹಿಳೆಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಕೊಲೆ ಮಾಡಿದ ಘಟನೆ ನಗರದ ಹಾಗರಗಾ ರಸ್ತೆಯಲ್ಲಿ ನಡೆದಿದೆ.
ಸ್ಕೂಟಿಯಲ್ಲಿ ಹೋಗುತ್ತಿದ್ದ ಮಹಿಳೆಯನ್ನು ಕೊಲೆ ಮಾಡಲಾಗಿದ್ದು, ಮೃತಪಟ್ಟ ಮಹಿಳೆಯನ್ನು ಮುಜತ್ ಸುಲ್ತಾನ್ (35) ಎಂದು ಗುರುತಿಸಲಾಗಿದೆ.
ಹಂತಕರು ಮೊದಲು ಮಜತ್ ಸ್ಕೂಟಿಗೆ ಕಾರಿನಿಂದ ಡಿಕ್ಕಿ ಹೊಡೆಸಿದ್ದು, ಕೆಳಗೆ ಬಿದ್ದ ಮಜತ್ ಮೇಲೆ ಏಳಲು ಹೋದಾಗ ಆಕೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾರೆ. ವಿಶ್ವವಿದ್ಯಾಲಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಬೆಂಗಳೂರಿನ HRBR ಲೇಔಟ್ನಲ್ಲಿ ʼರಾತ್ರೋರಾತ್ರಿ ಬಸ್ ನಿಲ್ದಾಣವೇ ನೆಲಸಮ ʼ:
ಬೆಂಗಳೂರು : ಸಿಲಿಕಾನ್ ಸಿಟಿಯ ಕಲ್ಯಾಣನಗರದ ಎಚ್ಆರ್ಬಿಆರ್ ಲೇಔಟ್ನಲ್ಲಿ ಬಿಬಿಎಂಪಿಯಿಂದ ಅನುಮತಿಯಿಲ್ಲದೇ ಬಸ್ ನಿಲ್ದಾಣ ಇದ್ದಕ್ಕಿದ್ದಂತೆ ಕಣ್ಮರೆಯಾಗಿದ್ದು, ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.ಈ ಬಸ್ ನಿಲ್ದಾಣವೂ ಸುಮಾರು 1990 ರಿಂದ ಪ್ರಯಾಣಿಕರು ಸದಾ ಬಳಕೆಯನ್ನು ಮಾಡುತ್ತಿದ್ದರು. ಈ ಬಸ್ ನಿಲ್ದಾಣಕ್ಕೆ 1990ರಲ್ಲಿ ಲಯನ್ಸ್ ಕ್ಲಬ್ ವತಿಯಿಂದ ಅನುಮತಿ ಪಡೆದು ಶೆಲ್ಟರ್ ನಿರ್ಮಿಸಲಾಗಿತ್ತು. ಇದೀಗ ಮಳೆ, ಬಿಸಿಲಿನಿಂದ ರಕ್ಷಣೆ ಪಡೆಯುತ್ತಿದ್ದ ಪ್ರಯಾಣಿಕ ಬಸ್ ನಿಲ್ದಾಣ ಇದ್ದಕ್ಕಿದ್ದಂತೆ ʼರಾತ್ರೋರಾತ್ರಿ ವಾಣಿಜ್ಯ ಕಟ್ಟಡದ ಎದುರಿಗೆ ಇದ್ದ ಕಾರಣಕ್ಕಾಗಿ ಎತ್ತಂಗಡಿ ಮಾಡಿದ್ದನ್ನು ಕಂಡು ಶಾಕ್ ಆಗಿದ್ದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ನಗರದಲ್ಲಿ ಸುಮಾರು 3 ಸಾವಿರಕ್ಕೂ ಹೆಚ್ಚು ಬಸ್ ನಿಲ್ದಾಣಗಳಿವೆ. ರಸ್ತೆ, ಮೆಟ್ರೋ ಕಾಮಗಾರಿ ನಡೆಯುವಾಗ ತಾತ್ಕಾಲಿಕವಾಗಿ ಬಸ್ ನಿಲ್ದಾಣಗಳನ್ನು ಸ್ಥಳಾಂತರ ಮಾಡಲಾಗುತ್ತದೆ. ಆದ್ರೆ ಚ್ಆರ್ಬಿಆರ್ ಲೇಔಟ್ನಲ್ಲಿ ʼರಾತ್ರೋರಾತ್ರಿ ಬಸ್ ನಿಲ್ದಾಣವೇ ಇಲ್ಲದಂತೆ ಆಗಿರುವುದನ್ನು ಕಂಡ ಸ್ಥಳೀಯ ಸಿಟ್ಟಿಗೆದ್ದಿದ್ದಾರೆ. ಕ್ಷೇತ್ರದ ಸ್ಥಳೀಯ ಕಲ್ಯಾಣನಗರದ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದಿಂದ ಬಾಣಸವಾಡಿ ಪೊಲೀಸ್ ಠಾಣೆ, ಬಿಬಿಎಂಪಿ ಮುಖ್ಯ ಆಯುಕ್ತ ಹಾಗೂ ಶಾಸಕರಿಗೆ ದೂರು ನೀಡಿದ್ದು ಶೀಘ್ರದಲ್ಲೇ ಮತ್ತೆ ಪ್ರಯಾಣಿಕರ ತಂಗುದಾಣವನ್ನು ಸ್ಥಾಪಿಸಲು ಪಟ್ಟು ಹಿಡಿದಿದ್ದಾರೆ.
BREAKING NEWS: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೆ ಲಘು ಭೂಕಂಪ | Earthquake in Dehli