ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ( Karnataka State Road Transport Corporation – KSRTC ) ಪ್ರಯಾಣಿಕರ ಸುರಕ್ಷತೆ ಬಗ್ಗೆ ಇನ್ನಿಲ್ಲದ ಎಚ್ಚರಿಕೆ ವಹಿಸುತ್ತಿದೆ. ಈ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುವಂತ ಚಾಲಕ, ನಿರ್ವಾಹಕ ಸಿಬ್ಬಂದಿಗಳು ಕೂಡ ಪ್ರಯಾಣಿಕರ ಬಗ್ಗೆ ಅಷ್ಟೇ ಕಾಳಜಿ, ಮುತುವರ್ಜಿಯನ್ನು ವಹಿಸುತ್ತಿದ್ದಾರೆ. ಇದಕ್ಕೂ ಮಿಗಿಲಾಗಿ, ಕೆ ಎಸ್ ಆರ್ ಟಿ ಸಿ ಬಸ್ ನಿರ್ವಾಹಕನ ( KSRTC Bus Conductor ) ಈ ಕರ್ತವ್ಯ ಪ್ರಜ್ಞೆ ಹಾಗೂ ಪ್ರಯಾಣಿಕರ ಸುರಕ್ಷತೆ ಮಾತ್ರ ಅಚ್ಚರಿ ಮೂಡಿಸುವಂತಿದೆ. ಅಷ್ಟಕ್ಕೂ ಏನದು ಘಟನೆ ಅನ್ನೋ ಬಗ್ಗೆ ಮುಂದೆ ಓದಿ..

ದಿನಾಂಕ 10.07.2022 ರಂದು ಮಂಗಳೂರು ಎರಡನೇ ಘಟಕದ ಮಾರ್ಗಸೂಚಿ ಸಂಖ್ಯೆ 177/178ರ ಕ್ಲಬ್ ಕ್ಲಾಸ್ ವೋಲ್ವೋ ಸಂಖ್ಯೆ ಕೆಎ01 ಎಫ್ 268 ಬೆಂಗಳೂರು ನಿಂದ ಮಂಗಳೂರಿಗೆ ಬರುತ್ತಿರುವಾಗ ಉಪ್ಪಿನಂಗಡಿಯ ಗಡಿಯಾರದ ಬಳಿ ಮುಂಜಾನೆ 5:00 ಸುಮಾರಿಗೆ ಸೀಟ್ ನಂಬರ್ 27ರ ಪ್ರಯಾಣಿಕ ತುರ್ತಾಗಿ ನೈಸರ್ಗಿಕ ಕರೆಗೆ ಹೋಗಬೇಕೆಂದು ತಿಳಿಸಿದಾಗ ವಾಹನದ ಚಾಲಕ ಮತ್ತು ನಿರ್ವಾಹಕರು ವಾಹನವನ್ನು ರಸ್ತೆಯ ಎಡ ಬದಿಯಲ್ಲಿ ನಿಲ್ಲಿಸಿ ಅವಕಾಶ ಮಾಡಿಕೊಟ್ಟಿರುತ್ತಾರೆ.

PM Svanidhi Scheme : ‘ಬೀದಿ ಬದಿ ವ್ಯಾಪಾರಿ’ಗಳಿಗೆ ಸಿಹಿಸುದ್ದಿ ನೀಡಿದ ಮೋದಿ ಸರ್ಕಾರ.!

ಸುಮಾರು ಐದು ನಿಮಿಷದ ನಂತರ ಸೀಟ್ ನಂಬರ್ 28ರ ಪ್ರಯಾಣಿಕರು ಸಹ ನೈಸರ್ಗಿಕ ಕರೆಗಾಗಿ ಹೋಗುವುದಾಗಿ ತಿಳಿಸಿ ಅವರು ಸಹ ವಾಹನದಿಂದ ಇಳಿದು ಹೋಗಿರುತ್ತಾರೆ. ಸುಮಾರು 10 ನಿಮಿಷದ ನಂತರ ಸದರಿ ಪ್ರಯಾಣಿಕರು ಬಾರದಿರುವ ಹಿನ್ನೆಲೆಯಲ್ಲಿ ಅವರಿಗೆ ಪೋನ್ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದಾಗ ಅದು ಸ್ವಿಚ್ ಆಫ್ ಆಗಿರುವುದನ್ನು ತಿಳಿದ ಸದರಿ ವಾಹನದ ನಿರ್ವಾಹಕರಾದ ಶ್ರೀ ಅಶೋಕ್ಕ್ ಜಾದವ್ . ಬಿಲ್ಲೆ ಸಂಖ್ಯೆ 2338 ರವರು ಘಟಕಕ್ಕೆ ದೂರವಾಣಿ ಮೂಲಕ ವಿಷಯವನ್ನು ತಿಳಿಸಿದ್ದು . ಘಟಕದ ಸೂಚನೆಯ ಮೇರೆಗೆ ಸುಮಾರು 15 ನಿಮಿಷಗಳವರೆಗೆ ಸಹ ಪ್ರಯಾಣಿಕರು ಹಾಗೂ ಸ್ಥಳೀಯರ ನೆರವಿನೊಂದಿಗೆ ಸುತ್ತಮುತ್ತ ಸ್ಥಳಗಳನ್ನು ಪರಿಶೀಲಿಸಿ ಅವರು ಸಿಗದಿರುವ ಹಿನ್ನೆಲೆಯಲ್ಲಿ ಘಟಕದ ಸೂಚನೆಯಂತೆ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಬಸ್ಸಿನಲ್ಲಿರುವ ಎಲ್ಲಾ ಪ್ರಯಾಣಿಕರಿಗೆ ತಮ್ಮ ಲಗೇಜ್ ಗಳನ್ನು ಪರಿಶೀಲಿಸುವಂತೆ ತಿಳಿಸುತ್ತಾರೆ.

ಎಲ್ಲಾ ಪ್ರಯಾಣಿಕರು ತಮ್ಮ ಲಗೇಜ್ ಗಳು ಸರಿಯಾಗಿದೆ ಎಂದು ತಿಳಿಸಿದ ಹಿನ್ನೆಲೆಯಲ್ಲಿ ವಾಹನವನ್ನು ಘಟಕಕ್ಕೆ ತೆಗೆದುಕೊಂಡು ಬಂದಿರುತ್ತಾರೆ ಅದೇ ದಿನ ಬೆಳಿಗ್ಗೆ 10:00 ಗಂಟೆಯ ಸುಮಾರಿಗೆ ಸೀಟ್ ನಂಬರ್ 9ರ ಪ್ರಯಾಣಿಕರಾದ ಲಕ್ಷ್ಮಿ ಅವರು ನಿರ್ವಾಹಕರಿಗೆ ಕರೆ ಮಾಡಿ ತಮ್ಮ ಬ್ಯಾಗಿನ ಒಳಗಡೆ ಇಟ್ಟಿದ್ದ ಸುಮಾರು ಎರಡುವರೆ ಲಕ್ಷದ ಚಿನ್ನ ಮತ್ತು ಹಣ ಕಳೆದು ಹೋಗಿರುವುದಾಗಿ ತಿಳಿಸಿರುತ್ತಾರೆ.

PM Svanidhi Scheme : ‘ಬೀದಿ ಬದಿ ವ್ಯಾಪಾರಿ’ಗಳಿಗೆ ಸಿಹಿಸುದ್ದಿ ನೀಡಿದ ಮೋದಿ ಸರ್ಕಾರ.!

ಈ ಮಾಹಿತಿಯನ್ನು ಘಟಕಕ್ಕೆ ತಿಳಿಸಿ, ಘಟಕದ ಸೂಚನೆಯಂತೆ ಅವರಿಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ತಿಳಿಸಿದ್ದು ನಂತರ ಸದರಿ ಪ್ರಯಾಣಿಕರು ಹಾಗೂ ನಿರ್ವಾಹರೊಂದಿಗೆ ಘಟಕದಲ್ಲಿ ಅದೇ ಬಸ್ಸಿನ ಟ್ರಿಪ್ ಶೀಟ್ ಅನ್ನು ಪರಿಶೀಲಿಸಿ ಉಪ್ಪಿನಂಗಡಿ ಬಳಿ ಇಳಿದು ಹೋದ ಪ್ರಯಾಣಿಕರ ದೂರವಾಣಿಗೆ ಕರೆ ಮಾಡಿದಾಗ ಅದು ಸ್ವಿಚ್ ಆಫ್ ಆಗಿದ್ದು ಇದರಿಂದ ಅನುಮಾನಗೊಂಡು ಅವರ ಫೋನ್ ನಂಬರ್ ಅನ್ನು ಅವತಾರ್ ಬುಕಿಂಗ್ನಲ್ಲಿ ಟ್ರ್ಯಾಕ್ ಮಾಡಿ ಪರಿಶೀಲಿಸಿದಾಗ ಅವರು ಸತತವಾಗಿ ಕ್ಲಬ್ ಕ್ಲಾಸ್ ವೋಲ್ವೋ ವಾಹನದಲ್ಲಿ ಪ್ರಯಾಣಿಸಿರುವುದು ಕಂಡುಬಂದು ಅವರ ಎಲ್ಲ ಪ್ರಯಾಣದ ವಿವರಗಳನ್ನು ಹಣ ಕಳೆದುಕೊಂಡ ಪ್ರಯಾಣಿಕರಿಗೆ ನೀಡಿ ದೂರು ನೀಡುವಂತೆ ತಿಳಿಸಲಾಗಿರುತ್ತದೆ. ಸದರಿ ಪ್ರಯಾಣಿಕರು ಹಣ ಮತ್ತು ಒಡವೆ ಕಳೆದು ಹೋಗಿರುವ ಬಗ್ಗೆ ಪುತ್ತೂರು ಹಾಗೂ ಬೆಂಗಳೂರಿನಲ್ಲಿ ದೂರನ್ನು ಸಹ ನೀಡಿರುತ್ತಾರೆ.

ಈ ಘಟನೆ ಹಸಿಯಾಗಿರೋ ಮುನ್ನವೇ, ದಿನಾಂಕ 12.11.2022 ರಂದು ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ರಾತ್ರಿ ಸುಮಾರು 9:45ಕ್ಕೆ ಮಾಗ೯ಸೂಚಿ ಸಂಖ್ಯೆ 63/64ರ ವಾಹನ ಕೆಎ01ಎಫ್ 9356 ನ್ನು ಮಂಗಳೂರಿಗೆ ತೆರಳಲು ಫ್ಲಾಟ್ ಫಾರಂ ಗೆ ಹಾಕಿ ನಿರ್ವಾಹಕರಾದ ಶ್ರೀ ಅಶೋಕ್ ಜಾದವ್ ರವರು ಟ್ರಿಪ್ ಶೀಟನ್ನು ಪರಿಶೀಲಿಸುತ್ತಿರುವಾಗ ಸೀಟ್ ನಂಬರ್ 29. 30 ಪ್ರಯಾಣಿಕರು ಬೇಗನೆ ಬಂದು ವಾಹನವನ್ನು ಏರಿ ತಮ್ಮ ಸೀಟಿನಲ್ಲಿ ಕುಳಿತಿರುತ್ತಾರೆ.

BIGG NEWS: ‘ಪತಂಜಲಿ’ಯ 5 ಉತ್ಪನ್ನಗಳ ಮೇಲಿನ ನಿಷೇಧವನ್ನು ಹಿಂಪಡೆದ ಉತ್ತರಾಖಂಡ ಸರ್ಕಾರ | Ramdev’s Patanjali

ಆ ಪ್ರಯಾಣಿಕರು ಬಸ್ ಹಾಗೂ ಇತರ ಪ್ರಯಾಣಿಕರ ಚಲನವಲನಗಳನ್ನು ಗಮನಿಸುತ್ತಿರುವುದನ್ನು ನೋಡಿದ ನಿರ್ವಾಹಕರು ಅನುಮಾನಗೊಂಡು ಅವರ ಹತ್ತಿರ ಹೋಗಿ ಪರಿಶೀಲಿಸಿದಾಗ ಅವರು ಈ ಹಿಂದೆ ಉಪ್ಪಿನಂಗಡಿಯಲ್ಲಿ ಪ್ರಯಾಣಿಕರ ಹಣ ಹಾಗೂ ಒಡವೆ ಕದ್ದು ಇಳಿದಹೋದ ಪ್ರಯಾಣಿಕರೆ ಆಗಿರುವುದನ್ನು ಗಮನಿಸಿ, ಅವರಿಗೆ ಯಾವುದೇ ರೀತಿಯ ಅನುಮಾನ ಬಾರದಂತೆ ಕೂಡಲೇ ಘಟಕಕ್ಕೆ ಮಾಹಿತಿ ನೀಡಿರುತ್ತಾರೆ.

ಘಟಕದ ಸೂಚನೆಯಂತೆ ಈ ವಿಷಯವನ್ನು ಅಲ್ಲಿನ ಸಂಚಾರ ನಿಯಂತ್ರಿಕರಿಗೆ ಹಾಗೂ ಭದ್ರತಾ ಸಿಬ್ಬಂದಿಗಳಿಗೆ ಮಾಹಿತಿ ನೀಡಿ ಪೊಲೀಸ್ ಅಧಿಕಾರಿಗಳು ವಾಹನಕ್ಕೆ ಬಂದ ನಂತರ ಕೆಬಿಎಸ್ ನ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಆ ಇಬ್ಬರು ಪ್ರಯಾಣಿಕರನ್ನು ಉಪ್ಪಾರಪೇಟೆ ಪೊಲೀಸ್ ಠಾಣೆಗೆ ಹಸ್ತಾಂತರಿಸಿ ಅವರಿಗೆ ಈ ಹಿಂದೆ ನಡೆದ ಘಟನೆಯ ವಿವರವನ್ನು ತಿಳಿಸಿರುತ್ತಾರೆ.

BIGG NEWS: ಪ್ರಸಿದ್ಧ ಫುಟ್ಬಾಲ್ ಕ್ಲಬ್ ‘ಲಿವರ್ ಪೂಲ್’ ಖರೀದಿಗೆ ‘ಮುಖೇಶ್ ಅಂಬಾನಿ’ ಬಿಡ್ | Mukesh Ambani enters race to buy Liverpool

ಈ ಹಿಂದೆ ಸಂಸ್ಥೆಯ ಬಸ್ಸಿನಲ್ಲಿ ಹಣ ಮತ್ತು ಒಡವೆಯನ್ನು ಕಳೆದುಕೊಂಡ ಶ್ರೀಮತಿ ಲಕ್ಷ್ಮಿ ಅವರಿಗೆ ಹಾಗೂ ಪುತ್ತೂರು ಪೊಲೀಸ್ ಠಾಣೆಗೆ ಮತ್ತು ಮಂಗಳೂರಿನ ಕದ್ರಿ ಪೊಲೀಸ್ ಠಾಣೆಗೆ ಮಾಹಿತಿಯನ್ನು ಸಹ ನೀಡಲಾಗಿದೆ ಈ ಹಿಂದೆ ಬಸ್ಸಿನಲ್ಲಿ ಕಳ್ಳತನ ಮಾಡಿ ಮಾರ್ಗ ಮಧ್ಯೆ ಇಳಿದು ಹೋದ ಪ್ರಯಾಣಿಕರ ಮುಖ ಚಹರೆಯನ್ನು ನೆನಪಿನಲ್ಲಿಟ್ಟುಕೊಂಡು ಅದೇ ಪ್ರಯಾಣಿಕರು ಸುಮಾರು ನಾಲ್ಕು ತಿಂಗಳ ನಂತರ ಬಸ್ಸಿಗೆ ಬಂದಾಗ ಅವರನ್ನು ಗುರುತಿಸಿ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ ನಿರ್ವಾಹಕ ಅಶೋಕ್ ಜಾದವ್ ಅವರಿಗೆ ಕೆ ಎಸ್ ಆರ್ ಟಿ ಸಿಯ ಎಂ.ಡಿ ವಿ‌.ಅನ್ಬುಕುಮಾರ್ ಅಭಿನಂದನೆಗಳನ್ನು ಸಲ್ಲಿಸಿದ್ದು,‌ ನಿಗಮದ ಚಾಲನಾ ಸಿಬ್ಬಂದಿಗಳ ಕಾರ್ಯತತ್ಪರತೆ ಮತ್ತು ಪ್ರಯಾಣಿಕ ಸ್ನೇಹಿ ಕೆಲಸವು ಪ್ರಯಾಣಿಕರಲ್ಲಿ ಸಂಸ್ಥೆಯ ಬಗ್ಗೆ ವಿಶ್ವಾಸಾರ್ಹತೆಯನ್ನು ಮೂಡಿಸುವಲ್ಲಿ ಸಹಕರಿಸಿದೆ. ನಮ್ಮ ಸಿಬ್ಬಂದಿಗಳು ನಮ್ಮ ಹೆಮ್ಮೆ ಮತ್ತು ಗೌರವವೆಂದು ತಿಳಿಸಿದ್ದಾರೆ.

ಈಗ ಹೇಳಿ ನಿಜಕ್ಕೂ ಇದೇ ಅಲ್ವಾ KSRTC ಬಸ್ ನಿರ್ವಾಹಕನ  ಕರ್ತವ್ಯ ಪ್ರಜ್ಞೆ, ಪ್ರಯಾಣಿಕರ ಸುರಕ್ಷತೆ ಅಂದರೆ? ಈ ನಿರ್ವಾಹಕನ ಕಾರ್ಯಕ್ಕೆ ನಮ್ಮದು ಒಂದು ಹ್ಯಾಟ್ಸ್ ಆಫ್.

Share.
Exit mobile version