ದಕ್ಷಿಣ ಕನ್ನಡ: ಶಾಲಾ-ಕಾಲೇಜು ಆವರಣದಲ್ಲಿ ವಸ್ತ್ರ ಸಂಹಿತೆಯನ್ನು ರಾಜ್ಯ ಸರ್ಕಾರ ಜಾರಿಗೊಳಿಸಿತ್ತು. ಸರ್ಕಾರದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದು, ಶಾಲಾ-ಕಾಲೇಜು ಆವರಣದಲ್ಲಿ ಧಾರ್ಮಿಕ ಉಡುಪು ಧರಿಸಿ ಬರೋದಂತೆ ಖಡಕ್ ಆದೇಶದಲ್ಲಿ ಸೂಚಿಸಿತ್ತು. ಆದ್ರೇ.. ಈ ನಿಯಮವನ್ನು ಪದೇ ಪದೇ ಮೀರಿ, ಹಿಜಾಬ್ ಧರಿಸಿಯೇ ಬಂದಂತ 6 ವಿದ್ಯಾರ್ಥಿನಿಯರನ್ನು ಕಾಲೇಜಿನಿಂದ ಅಮಾನತಗೊಳಿಸಿರೋ ಘಟನೆ ಪುತ್ತೂರಿನಲ್ಲಿ ನಡೆದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆಯ ಕಾಲೇಜಿಗೆ, ಕೋರ್ಟ್ ಆದೇಶವಿದೆ. ಹಿಜಾಬ್ ತೆಗೆದಿರಿಸಿ ಕಾಲೇಜು ತರಗತಿಗೆ ಹಾಜರಾಗುವಂತೆ ಪ್ರಾಂಶುಪಾಲರು, ಉಪನ್ಯಾಸಕರು ಸೂಚಿಸಿದ್ದರು. ಆದ್ರೇ.. ಆ 6 ವಿದ್ಯಾರ್ಥಿನಿಯರು ಮಾತ್ರ ಕೋರ್ಟ್ ಆದೇಶ, ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರ ಸೂಚನೆಗೆ ಡೋಂಟ್ ಕೇರ್ ಎಂಬುದಾಗಿ ಹಿಜಾಬ್ ಧರಿಸಿಯೇ ಕಾಲೇಜಿಗೆ ಆಗಮಿಸುತ್ತಿದ್ದರು.
ಈ ಹಿನ್ನಲೆಯಲ್ಲಿ ಪ್ರಾಂಶುಪಾಲರು, ಉಪನ್ಯಾಸಕರು ಸಭೆ ನಡೆಸಿ, ಕೋರ್ಟ್ ಆದೇಶ, ಶಿಕ್ಷಣ ಇಲಾಖೆಯ ಆದೇಶವನ್ನು ಧಿಕ್ಕರಿಸಿ, ತರಗತಿಗೆ ಹಿಜಾಬ್ ಧರಿಸಿಯೇ ಬರುತ್ತಿರುವಂತ ವಿದ್ಯಾರ್ಥನಿಯಗಳನ್ನು ಕಾಲೇಜಿನಿಂದ ಅಮಾನತುಗೊಳಿಸೋ ತೀರ್ಮಾನವನ್ನು ಕೈಗೊಂಡಿದ್ದಾರೆ. ಹೀಗಾಗಿ ಕೋರ್ಟ್ ಆದೇಶವನ್ನು ಧಿಕ್ಕರಿಸಿ, ಹಿಜಾಬ್ ಧರಿಸಿ ಕಾಲೇಜಿಗೆ ಆಗಮಿಸುತ್ತಿದ್ದಂತ 6 ವಿದ್ಯಾರ್ಥಿನಿಯರನ್ನು ಉಪ್ಪನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಅಮಾನತುಗೊಳಿಸಲಾಗಿದೆ.