ಬೆಂಗಳೂರು : ಗ್ರೀನ್ ಸಿಟಿ ಎಂದೇ ಪ್ರಸಿದ್ಧ ಪಡೆದ  ಸಿಲಿಕಾನ್‌ ಸಿಟಿ ಬೆಂಗಳೂರಿಗೆ ಕಪ್ಪು ಚುಕ್ಕೆಯೊಂದು ಬರುವ ವಾತಾವರಣ ನಿರ್ಮಾಣವಾಗಿದ್ದು, ದಿಢೀರನೇ ಗಣನೀಯಮಟ್ಟಕ್ಕೆ ವಾಯುಮಾಲಿನ್ಯ  ಏರಿಕೆಯಾಗಿದ್ದು, ಒಂದೇ ವರ್ಷದಲ್ಲಿ ಶೇ. 40ರಷ್ಟು ವಾಯುಮಾಲಿನ್ಯ ಹೆಚ್ಚಾಗಿದೆ ಎಂದು ಕರ್ನಾಟಕ ರಾಜ್ಯ ವಾಯುಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ)  ಅಧ್ಯಯನದ ಮೂಲಕ ಅಧಿಕೃತ ಮಾಹಿತಿ ಬಹಿರಂಗವಾಗಿದೆ.

BIG NEWS : BBMP ಅಧಿಕಾರಿಗಳ ನಿರ್ಲಕ್ಷ್ಯ..? ಕಾರು, ಬೈಕ್‍ಗಳ ಮೇಲೆ ಒಣ ಮರದ ರೆಂಬೆ ಬಿದ್ದು ಅವಾಂತರ : ಸ್ಪಾಟ್‍ನಲ್ಲೇ ಜೀವ ಬಲಿ ಗ್ಯಾರಂಟಿ

ಬೆಂಗಳೂರು ನಗರದ ಚಳಿಗಾಲ ಆರಂಭವಾಗುತ್ತಿದ್ದಂತೆ ವಾತಾವರಣ ತಣ್ಣಗಿದ್ದಷ್ಟೂ ಗಾಳಿಯ ಗುಣಮಟ್ಟ ಕುಸಿತಗೊಂಡಿದೆ ಅಕ್ಟೋಬರ್ ತಿಂಗಳ ಕೊನೆಯ ವಾರದಲ್ಲಿ ಚಳಿಗಾಲದ ಲಕ್ಷಣಗಳು ಆರಂಭವಾಗುತ್ತಿದ್ದಂತೆಯೇ ವಾಯು ಮಾಲಿನ್ಯ ಪ್ರಮಾಣ ಕೂಡಾ ಹೆಚ್ಚಾಗಿದೆ. ವಾಯು ಗುಣಮಟ್ಟ ಸೂಚ್ಯಂಕದ ಮೇಲೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ನಿಗಾ ವಹಿಸುತ್ತದೆ.

ಬೆಂಗಳೂರಲ್ಲಿ ಪ್ರಸ್ತಕ 2022ದ ನವೆಂಬರ್ ತಿಂಗಳ 30 ದಿನಗಳ ಅಧ್ಯಯನ ಪ್ರಕಾರ AQI (ವಾಯು ಗುಣಮಟ್ಟ ಸೂಚ್ಯಂಕ) 93 ಆಗಿದೆ. ಇದೇ ಅವಧಿಯಲ್ಲಿ ಕಳೆದ ವರ್ಷ AQI 66ನಷ್ಟು ದಾಖಲಾಗಿದೆ. ಅಂದರೆ ಒಂದೇ ವರ್ಷಕ್ಕೆ ಶೇ. 40ರಷ್ಟು ವಾಯುಮಾಲಿನ್ಯ ಏರಿಕೆ ಆಗಿದೆ.

BIG NEWS : BBMP ಅಧಿಕಾರಿಗಳ ನಿರ್ಲಕ್ಷ್ಯ..? ಕಾರು, ಬೈಕ್‍ಗಳ ಮೇಲೆ ಒಣ ಮರದ ರೆಂಬೆ ಬಿದ್ದು ಅವಾಂತರ : ಸ್ಪಾಟ್‍ನಲ್ಲೇ ಜೀವ ಬಲಿ ಗ್ಯಾರಂಟಿ

ಬೆಂಗಳೂರು ಸಿಟಿ ಜಂಕ್ಷನ್, ಹೆಬ್ಬಾಳ, ಮೈಸೂರು ರಸ್ತೆ, ಸಾಣೆಗುರುವನಹಳ್ಳಿ, ನಿಮ್ಹಾನ್ಸ್, ಜಯನಗರ ಹಾಗೂ ಸಿಲ್ಕ್ ಬೋರ್ಡ್‌ನಲ್ಲಿರುವ ಏಳು ನಿರ್ವಹಣಾ ನಿಲ್ದಾಣ‌ಗಳ ಸಹಾಯದಿಂದ AQI ಅಳೆತೆ ಮಾಡಲಾಗಿದೆ. ಅಕ್ಟೋಬರ್ ಮತ್ತು ಜನವರಿ ತಿಂಗಳ ನಡುವೆ ಕಳಪೆ ಗಾಳಿಯ ಗುಣಮಟ್ಟ ಕಂಡು ಬಂದಿದೆ. ಪ್ರತಿ ವರ್ಷ ರಾಜ್ಯ ವಾಯುಮಾಲಿನ್ಯ ನಿಯಂತ್ರಣ ಮಂಡಳಿಯು ಮಾಲಿನ್ಯ ಹೆಚ್ಚಳವನ್ನು ಗಮನಿಸುತ್ತದೆ ಎಂದು ಮಂಡಳಿಯ ಡೇಟಾದ ಉಸ್ತುವಾರಿ ಜಯಪ್ರಕಾಶ್ ಮಾಹಿತಿ ನೀಡಿದ್ದಾರೆ.

BIG NEWS : BBMP ಅಧಿಕಾರಿಗಳ ನಿರ್ಲಕ್ಷ್ಯ..? ಕಾರು, ಬೈಕ್‍ಗಳ ಮೇಲೆ ಒಣ ಮರದ ರೆಂಬೆ ಬಿದ್ದು ಅವಾಂತರ : ಸ್ಪಾಟ್‍ನಲ್ಲೇ ಜೀವ ಬಲಿ ಗ್ಯಾರಂಟಿ

ಅಕ್ಟೋಬರ್‌ ನಂತರ ಚಳಿಗಾಲ ಆರಂಭವಾಗುತ್ತಿದ್ದಂತೆ ನಗರದ ವಾಯು ಗುಣಮಟ್ಟ ಸೂಚ್ಯಂಕ ಮೇಲ್ವಿಚಾರಣೆ ಮಾಡಲಾಗಿದೆ. ಅದರನ್ವಯ ಮಂಡಳಿಗೆ ಬಂದ ವರದಿಯು ನಗರ ನಿವಾಸಿಗಳ ಆರೋಗ್ಯ ಕಾಳಜಿ ವಹಿಸುವಂತೆ ಎಚ್ಚರಿಸುತ್ತಿದೆ.

BIG NEWS : BBMP ಅಧಿಕಾರಿಗಳ ನಿರ್ಲಕ್ಷ್ಯ..? ಕಾರು, ಬೈಕ್‍ಗಳ ಮೇಲೆ ಒಣ ಮರದ ರೆಂಬೆ ಬಿದ್ದು ಅವಾಂತರ : ಸ್ಪಾಟ್‍ನಲ್ಲೇ ಜೀವ ಬಲಿ ಗ್ಯಾರಂಟಿ

ವರದಿ ಪ್ರಕಾರ, ನಗರದಲ್ಲಿ ಗಾಳಿ ಗುಣಮಟ್ಟ ಮಧ್ಯಮ ಮತ್ತು ಅತ್ಯಂತ ಕಳಪೆ ಮಧ್ಯದಲ್ಲಿ ಇದೆ. ಚಳಿಗಾಲಕ್ಕೆ ಸಂಬಂಧಿಸಿದ ನೈಸರ್ಗಿಕ ಪರಿಸ್ಥಿತಿಗಳ ಹೊರತಾಗಿ ಹೆಚ್ಚಾದ ವಾಹನಗಳ ಹೊಗೆಯಿಂದ ಉಸಿರಾಡಲು ಶುದ್ಧ ಗಾಳಿ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ

ಹೀಗಾಗಿ ಸಿಲಿಕಾನ್‌ ಸಿಟಿಯ ಜನರು ವಾಯುಮಾಲಿನ್ಯ ತಗ್ಗಿಸುವ ನಿಟ್ಟಿನಲ್ಲಿ ಹಲವು ರೀತಿಯಲ್ಲಿ ಎಚ್ಚರಿಕೆ  ಕ್ರಮಗಳನು ವಹಿಸಬೇಕಾಗಿದೆ. ಇದರಿಂದ ಹಲವು ಗಂಭೀರ ಕಾಯಿಲೆಗಳನ್ನು ಎದುರಾಗುವ ಸಾಧ್ಯತೆಗಳು ಇದೆ

Share.
Exit mobile version