ನವದೆಹಲಿ: ಚುನಾವಣೆಗಳನ್ನು ಮತ್ತಷ್ಟು ಪಾರದರ್ಶಕವಾಗಿ ನಡೆಸೋ ಸಂಬಂಧ, ಕೇಂದ್ರ ಚುನಾವಣಾ ಆಯೋಗ ( Election Commission of India -ECI) ಮಹತ್ವದ ಹೆಜ್ಜೆ ಇರಿಸಿದೆ. ಇದರ ಭಾಗವಾಗಿ ಚುನಾವಣೆಗಳಲ್ಲಿ ಅಭ್ಯರ್ಥಿಗಳ ನಗದು ವ್ಯವಹಾರಕ್ಕೆ ಕಡಿವಾಣ ಹಾಕಲು ಕೇಂದ್ರ ಚುನಾವಣಾ ಆಯೋಗ ಮುಂದಾಗಿದೆ.

ಇಂದಿನ ಇಡಿ ವಿಚಾರಣೆಗೆ ‘ಡಿ.ಕೆ ಶಿವಕುಮಾರ್’ ಗೈರು, ‘ಸಂಸದ ಡಿ.ಕೆ ಸುರೇಶ್’ ಹಾಜರ್ | DK Brothers

ಇನ್ನೂ ಇದರ ಭಾಗವಾಗಿ ಚುನಾವಣೆಯ ಸಂದರ್ಭದಲ್ಲಿ ಅಭ್ಯರ್ಥಿಗಳ ನಗದು ವೆಚ್ಚಕ್ಕಾಗಿ ನಿಗದಿ ಪಡಿಸಲಾಗಿದ್ದಂತ 10 ಸಾವಿರದಿಂದ 2 ಸಾವಿರ ರೂ ಗಳಿಗೆ ಇಳಿಕೆ ಮಾಡೋದಕ್ಕೆ ನಿರ್ಧರಿಸಿದೆ ಎನ್ನಲಾಗಿದೆ. ಈ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಸಲ್ಲಿಸಿರುವಂತ ಚುನಾವಣಾ ಆಯೋಗವು, ಇದಕ್ಕಾಗಿ ನೀತ-ನಿಯಮಗಳನ್ನು ತಿದ್ದುಪಡಿ ಮಾಡುವಂತೆಯೂ ಶಿಫಾರಸ್ಸು ಮಾಡಿದೆ.

ರಾಜ್ಯದ ‘ಸರ್ಕಾರಿ ನೌಕರ’ರಿಗೆ ಗುಡ್ ನ್ಯೂಸ್: ಶೀಘ್ರವೇ ‘ವೇತನ ಆಯೋಗ ರಚನೆ’

ಇದಲ್ಲದೇ ಚುನಾವಣೆಯಲ್ಲಿ ಪ್ರತಿ ಅಭ್ಯರ್ಥಿ ಚುನಾವಣಾ ವೆಚ್ಚ ನಿರ್ವಹಣಗೆ ಪ್ರತ್ಯೇಕ ಬ್ಯಾಂಕ್ ಖಾತೆ ತೆರೆಯುವಂತೆ ಶಿಫಾರಸ್ಸಿನಲ್ಲಿ ತಿಳಿಸಿದೆ. ಈ ಎಲ್ಲಾ ಶಿಫಾರಸ್ಸು ಜಾರಿಗೆ ಬಂದರೇ, ಚುನಾವಣೆಯಲ್ಲಿ ಅಭ್ಯರ್ಥಿಗಳ ನಗದು ವ್ಯವಹಾರಕ್ಕೆ ಬ್ರೇಕ್ ಬೀಳಲಿದ್ದು, ಅಕ್ರಮಕ್ಕೂ ಕಡಿವಾಣ ಹಾಕಿದಂತೆ ಆಗಲಿದೆ.

Share.
Exit mobile version