ಬೆಂಗಳೂರು: 40% ಸರ್ಕಾರದಲ್ಲಿ ಜನ ಸಾಮಾನ್ಯರಿಗೆ ಬದುಕಿದ್ದಾಗಲೂ ಸಂಕಟ, ಬದುಕು ಮುಗಿಸಿದ ಮೇಲೂ ಸಂಕಷ್ಟ. ಕೋವಿಡ್‌ನಿಂದ ( Covid19 ) ಹಿಡಿದು ಪ್ರವಾಹ, ರಸ್ತೆ ಗುಂಡಿಗಳವರೆಗೂ ಇದು ಸಾಬೀತಾಗುತ್ತಲೇ ಇದೆ. ಬೆಂಗಳೂರಿನ ಮಹದೇವಪುರ ಕ್ಷೇತ್ರದಲ್ಲಿ ನೀರಿನಲ್ಲಿ ಶವಯಾತ್ರೆ. ಇದು ಲಿಂಬಾವಳಿ ಮಾಡೆಲ್ಲಾ ಅಥವಾ ಬೊಮ್ಮಾಯಿ ( Bommai ) ಮಾಡೆಲ್ಲಾ ಬಿಜೆಪಿ ( BJP ) ಉತ್ತರಿಸಬೇಕು ಎಂಬುದಾಗಿ ಕರ್ನಾಟಕ ಕಾಂಗ್ರೆಸ್ ( Karnataka Congress ) ಕಿಡಿಕಾರಿದೆ.

ಈ ಬಗ್ಗೆ ಸರಣಿ ಟ್ವಿಟ್ ಮಾಡಿದ್ದು, ಬಿಬಿಎಂಪಿಯಲ್ಲಿ ಕಮಿಷನ್ ದರ 40% ನಿಂದ 50% ಏರಿಕೆಯಾಗಿರುವುದರಿಂದ ಆಗುವ ಪ್ರಯೋಜನಗಳು. ಬೆಂಗಳೂರಿನಲ್ಲಿ ಮೀನುಗಾರಿಕೆ ನಡೆಸಬಹುದು, ಬೆಂಗಳೂರಿನ ರಸ್ತೆಗಳಲ್ಲಿ ದೋಣಿಗಳನ್ನು ಚಲಾಯಿಸಬಹುದು, ಹೌಸ್‌ಬೋಟ್ ಮೂಲಕ ಪ್ರವಾಸೋದ್ಯವನ್ನು ಉತ್ತೇಜಿಸಬಹುದು, ಖರ್ಚಿಲ್ಲದೆ ರಸ್ತೆಗುಂಡಿಗಳನ್ನು ಮಳೆ ನೀರಿನ ಮೂಲಕ ಮುಚ್ಚಬಹುದು ಎಂದು ವಾಗ್ಧಾಳಿ ನಡೆಸಿದೆ.

ಬಸವರಾಜ ಬೊಮ್ಮಾಯಿ ( Basavaraj Bommai ) ಅವರು ‘ಯುಪಿ ಮಾಡೆಲ್’ ಜಪಿಸುತ್ತಿದ್ದರ ಪರಿಣಾಮ ಕರ್ನಾಟಕವೂ ಉತ್ತರ ಪ್ರದೇಶದಂತಾಗುತ್ತಿದೆ. ಕಳೆದ ಒಂದು ವರ್ಷದಲ್ಲಿ ರಾಜ್ಯದಲ್ಲಿ ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳು ಏರಿಕೆಯಾಗಿವೆ, ಅದರಲ್ಲೂ ಬೆಂಗಳೂರಿನದ್ದು ( Bengaluru ) ಸಿಂಹಪಾಲು. ಗಾರ್ಡನ್ ಸಿಟಿಯನ್ನು ಕ್ರೈಮ್ ಸಿಟಿಯನ್ನಾಗಿಸಿದ್ದು ( Crime City ) ಬೊಮ್ಮಾಯಿಯವರ ಒಂದು ವರ್ಷದ ಸಾಧನೆಯೇ? ಎಂದು ಪ್ರಶ್ನಿಸಿದೆ.

Share.
Exit mobile version