ಸುಭಾಷಿತ :

Saturday, December 7 , 2019 6:58 PM

ವಾಹನ ಮಾಲೀಕರಿಗೆ ಮಹತ್ವದ ಮಾಹಿತಿ : ಇನ್ಮುಂದೆ ಎಲ್ಲಾ ಸೇವೆಗಳಿಗೆ ಮೊಬೈಲ್ ನಂಬರ್ ಲಿಂಕ್ ಕಡ್ಡಾಯ!?


Thursday, December 5th, 2019 6:59 am

 

ನವದೆಹಲಿ : ವಾಹನ ಮಾಲೀಕರಿಗೆ ಕೇಂದ್ರ ಸರ್ಕಾರವು ಹೊಸ ನಿಯಮವೊಂದನ್ನು ಜಾರಿಗೆ ತರಲು ಮುಂದಾಗಿದ್ದು, ವಾಹನ ನೋಂದಣಿ, ಮಾಲಿನ್ಯ ಪ್ರಮಾಣೀಕರಣ, ನವೀಕರಣಕ್ಕೆ ವಾಹನದ ಮಾಲೀಕರು ಇನ್ಮುಂದೆ ನಂಬರ್ ರಿಜಿಸ್ಟಾರ್ ಅಥವಾ ಲಿಂಕ್ ಮಾಡಬೇಕು. ಈ ನಿಯಮ ಮುಂದಿನ ವರ್ಷ ಏಪ್ರಿಲ್ 1 ರಿಂದ ಆರಂಭವಾಗುವ ಸಾಧ್ಯತೆ ಇದೆ.

ಈ ನಿಯಮದ ಮೂಲಕ ವಾಹನಗಳ ಮಾಹಿತಿಯನ್ನು ಸಂಗ್ರಹಿಸಲು ಜಾರಿಗೆ ತರಲು ಮುಂದಾಗಿದೆ. ಈ ಬಗ್ಗೆ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಸಾರ್ವಜನಿಕರ ಅಭಿಪ್ರಾಯಕ್ಕೆ ಕರಡು ಅಧಿಸೂಚನೆಯನ್ನು ಹೊರಡಿಸಿದೆ. ಈ ಮೂಲಕ ಚಾಲನ ಪರವಾನಿಗೆ ಹಾಗೂ ವೆಹಿಕಲ್ ರಿಜಿಸ್ಟ್ರೇಶನ್ ಸರ್ಟಿಫಿಕೇಟ್ ವಿತರಿಸುವ ಕುರಿತು ಸಹಾಯಕವಾಗಲಿದೆ.

ಏಪ್ರಿಲ್ ನಿಂದ ಈ ನಿಯಮ ಜಾರಿಗೆ ಬರಲಿದ್ದು, ಪ್ರತಿ ವಾಹನ ಮಾಲೀಕರು ಮೊಬೈಲ್ ನಂಬರ್ ಲಿಂಕ್ ಮಾಡಬೇಕಾಗುತ್ತದೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions