ವಾಹನ ಮಾಲೀಕರಿಗೆ ಬಹುಮುಖ್ಯ ಮಾಹಿತಿ : ಕೇಂದ್ರ ಸರ್ಕಾರದಿಂದ ಶೀಘ್ರವೇ ‘ಸ್ಕ್ರಾಪ್ ನಿಯಮ’ ಜಾರಿಗೆ – Kannada News Now


India

ವಾಹನ ಮಾಲೀಕರಿಗೆ ಬಹುಮುಖ್ಯ ಮಾಹಿತಿ : ಕೇಂದ್ರ ಸರ್ಕಾರದಿಂದ ಶೀಘ್ರವೇ ‘ಸ್ಕ್ರಾಪ್ ನಿಯಮ’ ಜಾರಿಗೆ

ನವದೆಹಲಿ : ವಾಹನ ಸವಾರರೇ ಗಮನಿಸಿ..ಇನ್ನುಮುಂದೆ ನೀವು ಹಳೆಯದಾದ ವಾಹನಗಳನ್ನು ಇಟ್ಟುಕೊಳ್ಳುವ ಹಾಗಿಲ್ಲ..ಹಳೆಯ ವಾಹನಗಳನ್ನು ಗುಜುರಿಗೆ ಹಾಕೋದು ಕಡ್ಡಾಯವಾಗಿರುತ್ತದೆ. ಹೌದು, ಇಂತಹದ್ದೊಂದು ಸ್ಕ್ರಾಪ್ ನಿಯಮವನ್ನು ಕೇಂದ್ರ ಸರ್ಕಾರ ಸದ್ಯದಲ್ಲೇ ಜಾರಿಗೆ ತರಲಿದೆಯಂತೆ.

ಸದ್ಯ ಈ ನಿಯಮವನ್ನು ಜಾರಿಗೆ ತರಲು ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ತುದಿಗಾಲಲ್ಲಿ ನಿಂತಿದ್ದಾರೆ. ಕಳೆದ 2 ವರ್ಷದಿಂದ ನಿರಂತರ ಹೋರಾಟ ನಡೆಸುತ್ತಿರುವ ನಿತಿನ್ ಗಡ್ಕರಿ ಶೀಘ್ರದಲ್ಲೇ ಸ್ಕ್ರಾಪ್ ನಿಯಮ ಜಾರಿಗೆ ತರುವುದಾಗಿ ಹೇಳಿದ್ದಾರೆ. ಇದಕ್ಕೆ ಇನ್ನೂ ಹಣಕಾಸು ಸಚಿವಾಲಯದಿಂದ ಗ್ರೀನ್ ಸಿಗ್ನಲ್ ಸಿಗಬೇಕಿದೆ.

ಲಾಕ್ ಡೌನ್ ಹಿನ್ನೆಲೆ ಈ ನಿಯಮ ಜಾರಿಗೆ ತರುವುದಕ್ಕೆ ತಡವಾಗಿದೆ, ಲಾಕ್ ಡೌನ್ ಮುಗಿದ ಬಳಿಕ ಭಾರತ ಹೊಸ ನಿಯಮಕ್ಕೆ ಸಾಕ್ಷಿಯಾಗಲಿದೆ. ಹೊಸ ನಿಯಮದಿಂದ ಭಾರತ ಹೊಸ ದಿಕ್ಕಿನಲ್ಲಿ ಸಂಚರಿಸಲಿದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.

ಏನಿದು ಸ್ಕ್ರಾಪ್ ಪಾಲಿಸಿ..?

ನಿಮ್ಮ 15 ವರ್ಷಕ್ಕಿಂತ ಹಳೆಯ ವಾಹನಗಳನ್ನು ಗುಜುರಿಗೆ ಕಡ್ಡಾಯವಾಗಿ ಹಾಕಬೇಕು, ದೇಶದಲ್ಲಿ 15 ವರ್ಷಕ್ಕಿಂತ ಮೇಲ್ಪಟ್ಟ ಲಕ್ಷಾಂತರ ವಾಹನಗಳು ಓಡಾಡುತ್ತಿದೆ, ಇದರಿಂದ ಮಾಲಿನ್ಯ ಹೆಚ್ಚಳವಾಗುತ್ತಿದೆ. ಆದ್ದರಿಂದ ಈ ಪಾಲಿಸಿ ಮೂಲಕ ಆಯಸ್ಸು ಹೆಚ್ಚಾದ ವಾಹನಗಳನ್ನು ಕಡ್ಡಾಯವಾಗಿ ಗುಜುರಿಗೆ ಹಾಕಬೇಕು, ಈ ಸಂದರ್ಭದಲ್ಲಿ ವಾಹನದ ಬಿಡಿ ಭಾಗಗಳ ಕಂಡೀಷನ್ ನೋಡಿ ಸರ್ಕಾರ ವಾಹನವನ್ನು ಗುಜುರಿಗೆ ನೀಡುವ ಮಾಲೀಕರಿಗೆ ಹಣ ನೀಡಲಿದೆ.