ಬೆಂಗಳೂರು: ವಿವಿಧ ಕಾರಣಗಳಿಂದಾಗಿ ಕೆ ಎಸ್ ಆರ್ ಟಿ ಸಿ ನಿಗಮದಿಂದ ಕರೆಯಲಾಗಿದ್ದಂತ ಚಾಲಕ-ಕಂ-ನಿರ್ವಾಹಕ ಹುದ್ದೆಗಳ ನೇಮಕಾತಿಗೆ ಆಯ್ಕೆಗೊಂಡಿದ್ದಂತವರಿಗೆ, ಮೂಲ ದಾಖಲಾತಿಗಳ ಪರಿಶೀಲನೆ ನಡೆಸಲಾಗಿತ್ತು. ಈಗ ಈ ಮೂಲದಾಖಲಾತಿಗಳ ಪರಿಶೀಲನೆಗೆ ಹಾಜರಾಗದಿದ್ದಂತ ಅಭ್ಯರ್ಥಿಗಳಿಗೆ ಮತ್ತೊಂದು ಅವಕಾಶ ನೀಡಲಾಗಿದೆ.

ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಕರಾರಸಾ ನಿಗಮದಲ್ಲಿ ಜಾಹೀರಾತು ಸಂ.1/2020 ದಿನಾಂಕ: 14-02-2020 ರನ್ವಯ ಚಾಲಕ-ಕಂ-ನಿರ್ವಾಹಕ ಹುದ್ದೆಯ ಮೂಲ ದಾಖಲಾತಿ / ದೇಹದಾರ್ಢ್ಯತೆ ಪರಿಶೀಲನೆಯನ್ನು ಕರಾರಸಾ ನಿಗಮದ ಕೇಂದ್ರ ಕಛೇರಿಯಲ್ಲಿ ನಡೆಸಲಾಗುತ್ತಿದೆ ಎಂದಿದೆ.

ಸದರಿ ಮೂಲ ದಾಖಲಾತಿ ಪರಿಶೀಲನೆಗೆ ಗೈರು ಹಾಜರಾದ ಅಭ್ಯರ್ಥಿಗಳಿಗೆ ಮತ್ತೊಂದು ಅವಕಾಶ ನೀಡುವುದು ಸೂಕ್ತವೆಂದು ನಿರ್ಧರಿಸಿ ದಿನಾಂಕ: 02-07-2024 ರಿಂದ  ಅವಕಾಶ ನೀಡಿ ಈ ಕೆಳಗಿನಂತೆ ದಿನಾಂಕ ನಿಗಧಿಪಡಿಸಲಾಗಿದೆ ಎಂದು ತಿಳಿಸಿದೆ.

ದಿನಾಂಕ ಅರ್ಜಿ ಸಂಖ್ಯೆ
ರಿಂದ ವರೆಗೆ
02.07.2024 D2000009 D2004188
03.07.2024 D2004194 D2008643
04.07.2024 D2008645 D2013204
05.07.2024 D2013207 D2017706
06.07.2024 D2017708 D2021784
08.07.2024 D2021786 D2025935
09.07.2024 D2025944 D2029997
10.07.2024 D2030003 D2033674
11.07.2024 D2033675 D2044974
12.07.2024 ಗೈರುಹಾಜರಿ ಹಾಗೂ ಉಳಿದ ಇತರೆ ಎಲ್ಲಾ ಅಭ್ಯರ್ಥಿಗಳು
13.07.2024

ಅದರಂತೆ ಗೈರುಹಾಜರಾದ ಅಭ್ಯರ್ಥಿಗಳಿಗೆ ಎಸ್.‌ ಎಂ.ಎಸ್‌ ಮೂಲಕ ಮಾಹಿತಿ ನೀಡಿದ್ದು, ನಿಗಮದ ಅಧಿಕೃತ ವೆಬ್-ಸೈಟ್ ಆದ ksrtcjobs.karnataka.gov.in ರಿಂದ ಅಂತಿಮ ಕರೆಪತ್ರವನ್ನು ಡೌನ್‌ ಲೋಡ್‌ ಮಾಡಿಕೊಂಡು ಅಗತ್ಯ ಮೂಲ ದಾಖಲಾತಿಗಳೊಂದಿಗೆ ನಿಗಧಿತ ದಿನಾಂಕ ಅಥವಾ ದಿ:13-07-2024 ರೊಳಗಾಗಿ ತಪ್ಪದೇ ಹಾಜರಾಗಲು ಸೂಚಿಸಲಾಗಿದೆ. ಇದು ಅಂತಿಮ ಅವಕಾಶವಾಗಿದ್ದು, ತದನಂತರ ಬಂದಲ್ಲಿ ಪರಿಗಣಿಸಲಾಗುವುದಿಲ್ಲ ಎಂಬುದಾಗಿ ತಿಳಿಸಿದೆ.

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿ, ರಾಜೀನಾಮೆ ನೀಡುವವರೆಗೂ ಹೋರಾಟ: ಆರ್‌.ಅಶೋಕ್

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿ, ರಾಜೀನಾಮೆ ನೀಡುವವರೆಗೂ ಹೋರಾಟ: ಆರ್‌.ಅಶೋಕ್

Share.
Exit mobile version