ಬೆಂಗಳೂರು: ಕರ್ನಾಟಕ ಸರ್ಕಾರಿ ಜೀವ ವಿಮೆ, ವೇತನ ಬಿಲ್ಲುಗಳಲ್ಲಿ ಕಡ್ಡಾಯ ಜೀವ ವಿಮೆ ಕಂತುಗಳನ್ನು ಕಡಿತಗೊಳಿಸುವ ಕುರಿತು ಆದೇಶವನ್ನು ಹೊರಡಿಸಿದೆ.

ಆದೇಶದಲ್ಲಿ ರ್ನಾಟಕ ರಾಜ್ಯ ಸರ್ಕಾರಿ ನೌಕರರ ಕಡ್ಡಾಯ ಜೀವ ವಿಮಾ ನಿಯಮಾವಳಿಗಳ ನಿಯಮ 8 ರಂತೆ ಪ್ರತಿಯೊಬ್ಬ ರಾಜ್ಯ ಸರ್ಕಾರಿ ನೌಕರ/ಅಧಿಕಾರಿಯು ಅವರು ಹೊಂದಿರುವ ಹುದ್ದೆಯ ವೇತನ ಶ್ರೇಣಿಯ ಸರಾಸರಿ ವೇತನದ ಕನಿಷ್ಠ ಶೇ. 6.5 ರಷ್ಟು ಮಾಸಿಕ ವಿಮಾ ಕಂತಿಗೆ ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯಲ್ಲಿ ಕಡ್ಡಾಯವಾಗಿ ಜೀವವಿಮೆ ಪಡೆಯುವುದು ಕಡ್ಡಾಯವಾಗಿರುತ್ತದೆ. ವೇತನವನ್ನು ಸೆಳೆಯುವಾಗ ವೇತನ ಬಟಾವಾಡೆ ಅಧಿಕಾರಿಗಳು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಕಡ್ಡಾಯ ಜೀವ ವಿಮಾ ನಿಯಮಾವಳಿಗಳ ನಿಯಮ 8ನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಿರುತ್ತಾರೆ.
ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಕಡ್ಡಾಯ ಜೀವ ವಿಮಾ ನಿಯಮಾವಳಿಗಳ ನಿಯಮ 8ರ

ಅನ್ವಯ ಕನಿಷ್ಠ ವಿಮಾ ಕಂತನ್ನು ಕಡಿತಗೊಳಿಸಿರುವುದನ್ನು ಖಚಿತ ಪಡಿಸಿಕೊಳ್ಳುವಂತೆ ಸೂಚಿಸಿರುತ್ತಾರೆ. ಹಾಗೂ ಖಜಾನೆಗೆ ಕಡಿತ ಗೊಳಿಸದ ಬಿಲ್ಲುಗಳನ್ನು ಆಕ್ಷೇಪಸಿ ಹಿಂದಿರುಗಿಸುವಂತೆ ಸೂಚಿಸಿರುತ್ತಾರೆ.

ಆದ್ದರಿಂದ ದಿನಾಂಕ:31.03.2024 ಕ್ಕೆ 50 ವರ್ಷ ವಯಸ್ಸು ಪೂರ್ಣಗೊಂಡಿರುವ ಪೊಲೀಸ್ ಅಧಿಕಾರಿ/ಸಿಬ್ಬಂದಿರವರುಗಳನ್ನು ಹೊರತುಪಡಿಸಿ ಉಳಿದ ಪೊಲೀಸ್ ಅಧಿಕಾರಿ/ಸಿಬ್ಬಂದಿರವರುಗಳು ಕಡ್ಡಾಯ ಜೀವ ವಿಮಾ ನಿಯಮಾವಳಿಗಳ ನಿಯಮ 6 ರಂತೆ ಪ್ರತಿಯೊಬ್ಬ ಅಧಿಕಾರಿ/ಸಿಬ್ಬಂದಿಯು ಅವರು ಹೊಂದಿರುವ ಹುದ್ದೆಯ ವೇತನ ಶ್ರೇಣಿಯ ಸರಾಸರಿ ವೇತನದ ಕನಿಷ್ಠ ಶೇ. 6.5 ರಷ್ಟು ಮಾಸಿಕ ವಿಮಾ ಕಂತಿಗೆ ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯಲ್ಲಿ ಕಡ್ಡಾಯವಾಗಿ ಜೀವವಿಮೆ ಪಡೆದು ಅದರ ವಿವರವನ್ನು ಈ ಕಛೇರಿಗೆ ದಿನಾಂಕ: 28/04/2024ರ ಒಳಗಾಗಿ ಸಲ್ಲಿಸಲು ಸೂಚಿಸಿದೆ ತಪ್ಪಿದಲ್ಲಿ ಸದರಿಯವರುಗಳ 04/2024ರ ವೇತವನ್ನು ತಡೆಹಿಡಿಯಲಾಗುವುದೆಂದು ಈ ಮೂಲಕ ಸೂಚಿಸಿದೆ.

 

Share.
Exit mobile version