ಬೆಂಗಳೂರು: ರಾಜ್ಯ ಸರ್ಕಾರಿ ನೌಕರರು ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನು ದಿನಾಂಕ 31-12-2022ರೊಳಗಾಗಿ ಪಾಸ್ ಮಾಡುವುದು ಕಡ್ಡಾಯವಾಗಿದೆ. ಈ ದಿನಾಂಕದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂಬುದಾಗಿ ರಾಜ್ಯ ಸರ್ಕಾರ ಸ್ಪಷ್ಟ ಪಡಿಸಿದೆ.
ಮೊದಲ ಮಹಿಳಾ ರಾಷ್ಟ್ರಪತಿ, ಪ್ರಧಾನಿ, ಲೋಕಸಭೆ ಸ್ಪೀಕರ್ ಎಲ್ಲರೂ ಕೂಡ ಕಾಂಗ್ರೆಸ್ ನವರೇ – ಬಿಜೆಪಿಗೆ ಕಾಂಗ್ರೆಸ್ ಟಾಂಗ್
ಈ ಕುರಿತಂತೆ ರಾಜ್ಯ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದು, ದಿನಾಂಕ 05-05-2022ರಲ್ಲಿ ಕರ್ನಾಟಕ ನಾಗರಿಕ ಸೇವಾ ( ಕಂಪ್ಯೂಟರ್ ಸಾಕ್ಷರತಾ ) ಪರೀಕ್ಷೆ ನಿಯಮಗಳು 2021ರ ನಿಯಮ 3(ಬಿ)ಕ್ಕೆ ಮಾಡಿರುವ ತಿದ್ದು ಪಡಿ ಅನ್ವಯ ದಿನಾಂಕ 31-12-2022ರೊಳಗೆ ಕಂಪ್ಯೂಟರ್ ಸಾಕ್ಷರತೆ ಪರೀಕ್ಷೆ ಪಾಸ್ ಮಾಡುವುದು ಕಡ್ಡಾಯವೆಂದು ತಿಳಿಸಿದ್ದಾರೆ.
ನಾಡದ್ರೋಹಿ ಸಚಿವ ಉಮೇಶ್ ಕತ್ತಿ ಸಂಪುಟದಿಂದ ವಜಾ ಮಾಡಿ – ದಿನೇಶ್ ಗುಂಡೂರಾವ್ ಆಗ್ರಹ
ಈ ಹಿನ್ನಲೆಯಲ್ಲಿ ಈ ದಿನಾಂಕದಲ್ಲಿ ಯಾವುದೇ ಬದಲಾವಣೆ ಇಲ್ಲ. ಇದಕ್ಕಾಗಿ ಹೆಚ್ಚುವರಿ ಅನುದಾನ ಕೂಡ ಕಿಯೋನಿಕ್ಸ್ ಕೋರಬಾರದು. ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನು ದಿನಾಂಕ 01-04-2022 ರಿಂದ 31-12-2022ರೊಳಗೆ ಮಾತ್ರ ವಿಸ್ತರಿಸಲು ಸರ್ಕಾರ ಆದೇಶಿಸಿದೆ ಎಂದಿದ್ದಾರೆ.