ಸುಭಾಷಿತ :

Wednesday, April 1 , 2020 2:01 AM

`SBI’ ಬ್ಯಾಂಕ್ ಗ್ರಾಹಕರಿಗೆ ಇಲ್ಲಿದೆ ಮಹತ್ವದ ಮಾಹಿತಿ


Friday, February 21st, 2020 6:25 am

ನವದೆಹಲಿ : ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಬಹುಮುಖ್ಯ ಮಾಹಿತಿಯೊಂದನ್ನು ನೀಡಿದ್ದು, ಫೆಬ್ರವರಿ 28 ರೊಳಗೆ ಖಾತೆದಾರರು ಬ್ಯಾಂಕಿಗೆ ಕೆವೈಸಿ ವಿವರ ನೀಡದಿದ್ದರೆ ಖಾತೆ ಅಮಾನತುಗೊಳಿಸಲಾಗುತ್ತದೆ ಎಂದು ಎಸ್ ಬಿಐ ಹೇಳಿದೆ.

ಹೌದು, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೇಳಿರುವಂತೆ, ಬ್ಯಾಂಕುಗಳು ಎಲ್ಲಾ ಗ್ರಾಹಕರ ಕೆವೈಸಿಯನ್ನು ನಿಯತಕಾಲಿಕವಾಗಿ ನವೀಕರಸಬೇಕಾಗುತ್ತದೆ. ಅಲ್ಲದೇ ಕೆವೈಸಿ ಮಾಡಿಸುವಂತೆ ಸೂಚನೆ ನೀಡಿದೆ. ಹೀಗಾಗಿ ಎಸ್ ಬಿಐ ಇದೀಗ ಕೆವೈಸಿ ಪರಿಶೀಲನೆಯ ಕೊನೆಯ ದಿನಾಂಕದ ಮೊದಲು ನವೀಕರಿಸಲು ಖಾತೆದಾರರಿಗೆ ಮಹತ್ವದ ಸೂಚನೆ ನೀಡಿದೆ.

ಮನಿ ಲಾಂಡರಿಂಗ್ ತಡೆಗಟ್ಟುವಿಕೆ ಕಾಯ್ದೆ 2002 ಮತ್ತು ಮನಿ ಲಾಂಡರಿಂಗ್ ತಡೆಗಟ್ಟುವಿಕೆ (ದಾಖಲೆಗಳ ನಿರ್ವಹಣೆ) ನಿಯಮಗಳು, 2005 ರ ಪ್ರಕಾರ, ಕಾಲಕಾಲಕ್ಕೆ ಭಾರತ ಸರ್ಕಾರವು ತಿದ್ದುಪಡಿ ಮಾಡಿದಂತೆ ಮತ್ತು ಭಾರತ ಸರ್ಕಾರದಿಂದ ಸೂಚಿಸಲ್ಪಟ್ಟಂತೆ, ಬ್ಯಾಂಕುಗಳು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ವೆಬ್‌ಸೈಟ್‌ನಲ್ಲಿ ಹೇಳಿರುವಂತೆ, ಖಾತೆ ಆಧಾರಿತ ಸಂಬಂಧವನ್ನು ಸ್ಥಾಪಿಸುವ ಮೂಲಕ ಅಥವಾ ಅವರ ವಹಿವಾಟುಗಳನ್ನು ಮೇಲ್ವಿಚಾರಣೆ ಮಾಡುವ ಮೂಲಕ ವಹಿವಾಟು ನಡೆಸುವಾಗ ಕೆಲವು ಗ್ರಾಹಕ ಗುರುತಿನ ಕಾರ್ಯವಿಧಾನಗಳನ್ನು ಅನುಸರಿಸುವುದು ಅಗತ್ಯವಾಗಿರುತ್ತದೆ. ಈ ಆರ್‌ಬಿಐ ಮಾರ್ಗಸೂಚಿ 2020 ರ ಫೆಬ್ರವರಿ 28 ರೊಳಗೆ ಎಲ್ಲಾ ಭಾರತೀಯ ಬ್ಯಾಂಕುಗಳು ತಮ್ಮ ಕೆವೈಸಿಯನ್ನು ನವೀಕರಿಸಬೇಕಾಗಿದೆ ಮತ್ತು ಗ್ರಾಹಕರಿಗೆ ತಮ್ಮ ಕೆವೈಸಿ ಬಾಕಿ ಇದೆ ಎಂದು ತಿಳಿಸುವ ಸೂಚನೆ ಇದೆ. ಅದನ್ನು ಮಾಡಲು ವಿಫಲವಾದರೆ, ಬ್ಯಾಂಕುಗಳು ಭಾರಿ ದಂಡವನ್ನು ಎದುರಿಸಬೇಕಾಗುತ್ತದೆ ಅಂತ ಹೇಳಿದೆ.

ಕೆವೈಸಿ ವಿವರ ಕೊಡವ ಗ್ರಾಹಕರು ಈ ಕೆಳಗಿನ ದಾಖಲೆಗಳನ್ನು ತೋರಿಸುವಂತೆ ಎಸ್ ಬಿಐ ಹೇಳಿದೆ

  1.  ಮೊಬೈಲ್ ನಂಬರ್
  2. ಪಾಸ್ ಪೋರ್ಟ್
  3. ಡ್ರೈವಿಂಗ್ ಲೈಸೆನ್ಸ್
  4. ಆಧಾರ್ ಕಾರ್ಡ್
  5. ಪಾನ್ ಕಾರ್ಡ್
  6. ಎನ್ ಪಿಆರ್
  7. ವೋಟರ್ ಐಡಿ ಕಾರ್ಡ್

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions