ಸುಭಾಷಿತ :

Saturday, December 7 , 2019 6:58 PM

ತಿಂಗಳಿಗೆ 3000 ರೂ. `ಪಿಂಚಣಿ’ ಪಡೆಯಲು ಇಲ್ಲಿದೆ ಮಹತ್ವದ ಮಾಹಿತಿ


Thursday, December 5th, 2019 6:05 am

ಬೆಂಗಳೂರು : ಪ್ರಧಾನಮಂತ್ರಿ ಶ್ರಮಯೋಗಿ ಮಾನ್ ದನ್ ಯೋಜನೆಯಡಿ ವರ್ತಕರು ಮತ್ತು ಸ್ವಯಂ ಉದ್ಯೋಗಿಗಳ ರಾಷ್ಟ್ರೀಯ ಪಿಂಚಣಿ ಯೋಜನೆ ನೋಂದಣಿಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರ ನವೆಂಬರ್ 30 ರಿಂದ ಡಿ. 6 ರ ವರೆಗೆ ಪಿಂಚಣಿ ಸಪ್ತಾಹ ಆರಂಭಿಸಿದೆ.

ದೇಶಾದ್ಯಂತ 3.5 ಲಕ್ಷ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಆಧಾರ್, ಬ್ಯಾಂಕ್ ಅಥವಾ ಜನಧನ್ ಖಾತೆ ಮಾಹಿತಿ ನೀಡಿದರೆ ಕೇವಲ 2 ರಿಂದ 3 ನಿಮಿಷದಲ್ಲಿ ನೋಂದಣಿ ಮಾಡಿಸಬಹುದು.

ಯೋಜನೆಯಡಿ ಕನಿಷ್ಠ 55 ರಿಂದ 200 ರೂ. ಪ್ರತಿ ತಿಂಗಳು ಕಟ್ಟಬೇಕು. ₹ 15,000ಕ್ಕಿಂತ ಕಡಿಮೆ ಆದಾಯವುಳ್ಳ ಅಸಂಘಟಿತ ವರ್ಗಕ್ಕೆ ಮೆಗಾ ಪಿಂಚಣಿ ಯೋಜನೆ ಅನ್ವಯಿಸಲಿದೆ. ಅರುವತ್ತು ವರ್ಷಗಳ ಬಳಿಕ ಇವರಿಗೆ ₹ 3000 ಪಿಂಚಣಿ ಸಿಗುತ್ತದೆ. ಈ ಯೋಜನೆಗೆ ಪ್ರಧಾನ ಮಂತ್ರಿಗಳ ಶ್ರಮಯೋಗಿ ಮಾನ್ ಧನ್ ಯೋಜನೆ ಎಂದು ಹೆಸರಿಡಲಾಗಿದೆ. ಐದು ವರ್ಷಗಳಲ್ಲಿ ವಿಶ್ವದಲ್ಲೇ ಅತಿ ದೊಡ್ಡ ಪಿಂಚಣಿ ಯೋಜನೆ ಇದಾಗಲಿದೆ.

ಈ ಯೋಜನೆಯಿಂದ ಅಸಂಘಟಿಕ ಕಾರ್ಮಿಕರಿಗೆ ಲಾಭವಾಗಲಿದೆ. ಒಟ್ಟು 10 ಕೋಟಿ ಕಾರ್ಮಿಕರ ಈ ಯೋಜನೆಯ ಲಾಭ ಪಡೆಯಲಿದ್ದಾರೆ. ಮನೆಗೆಲಸದವರು, ರಿಕ್ಷಾವಾಲಾಗಳು ಮುಂತಾದ ಅಸಂಘಟಿತ ಕಾರ್ಮಿಕರಿಗೆ ಈ ಯೋಜನೆ ಅನ್ವಯವಾಗಲಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions