*ವಸಂತ ಬಿ ಈಶ್ವರಗೆರೆ
ಬೆಂಗಳೂರು: ರಾಜ್ಯಾಧ್ಯಂತ ಮೇ.16ರಿಂದ ಶಾಲಾ-ಕಾಲೇಜು ( School and College ) ಆರಂಭಗೊಂಡಿವೆ. ಎಲ್ ಕೆಜಿ, ಯುಕೆಯ ಮಕ್ಕಳಿಗೆ ಜೂನ್.1ರಿಂದ ಶಾಲೆಗಳು ಆರಂಭಗೊಂಡಿವೆ. ಈ ಮಕ್ಕಳ ಶಾಲಾ ದಾಖಲಾತಿಗೆ ಆಧಾರ್ ಸಂಖ್ಯೆ ಕೂಡ ಪ್ರಮುಖ ಪಾತ್ರವಹಿಸಲಿದೆ. ಬಹುತೇಕ 5 ವರ್ಷದೊಳಗಿನ ಮಕ್ಕಳ ಪೋಷಕರಿಗೆ ಆಧಾರ್ ಕಾರ್ಡ್ ( Children Aadhar Card ) ಎಲ್ಲಿ ಮಾಡಿಸಬೇಕು ಎಂಬುದೇ ಬಹುದೊಡ್ಡ ಗೊಂದಲವಾಗಿದೆ. ಹಾಗಾದ್ರೇ.. ನಿಮ್ಮ 5 ವರ್ಷದ ಮಕ್ಕಳಿಗೆ ಆಧಾರ್ ಕಾರ್ಡ್ ಎಲ್ಲಿ ಮಾಡಿಕೊಡಲಾಗುತ್ತದೆ.? ಅದಕ್ಕೆ ಬೇಕಾದಂತ ದಾಖಲೆಗಳು ಏನು ಎನ್ನುವ ಬಗ್ಗೆ ಮಾಹಿತಿಗಾಗಿ ಮುಂದೆ ಓದಿ..
ಶಾಲೆಗಳು ಆರಂಭವಾಗುತ್ತಿದ್ದಂತೆ ಮಕ್ಕಳ ಪೋಷಕರಿಗೆ ತಮ್ಮ ಮಗುವಿಗೆ ಸಂಬಂಧಿಸಿದಂತ ಆಧಾರ್ ಕಾರ್ಡ್ ಮಾಡಿಸುವ ಚಿಂತೆ ಕೂಡ ಎದುರಾಗಲಿದೆ. 5 ವರ್ಷದೊಳಗಿನ ಮಕ್ಕಳ ಆಧಾರ್ ಕಾರ್ಡ್ ಅನ್ನು ರಾಜ್ಯದ ಯಾವುದೇ ತಾಲೂಕು, ಜಿಲ್ಲಾ, ನಾಡಕಚೇರಿ ಸೇರಿದಂತೆ ಬೇರೆ ಯಾವುದೇ ಕೇಂದ್ರಗಳಲ್ಲಿ ಮಾಡುವುದಿಲ್ಲ. 5 ವರ್ಷದೊಳಗಿನ ಮಕ್ಕಳ ಆಧಾರ್ ಕಾರ್ಡ್ ಮಾಡೋ ಸೌಲಭ್ಯವನ್ನು ಕೇಂದ್ರ ಸರ್ಕಾರ ಕೇವಲ ಅಂಚೆ ಕಚೇರಿಗೆ ಮಾತ್ರವೇ ಅವಕಾಶ ನೀಡಿದೆ.
ಬೆಂಗಳೂರಿಗರೇ ಗಮನಿಸಿ: ‘ನಾಯಿ ಕಚ್ಚಿ’ದವರಿಗೆ ಸಿಗಲಿದೆ 2 ರಿಂದ 10 ಸಾವಿರ ಪರಿಹಾರ
5 ವರ್ಷದೊಳಗಿನ ಮಕ್ಕಳಿಗೆ ಆಧಾರ್ ಕಾರ್ಡ್ ಏಲ್ಲಿ ಮಾಡಿ ಕೊಡಲಾಗುತ್ತದೆ.?
5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಪೋಸ್ಟ್ ಆಫೀಸ್ ನಲ್ಲಿ ( Post Office ) ಮಾತ್ರವೇ ಆಧಾರ್ ಕಾರ್ಡ್ ಮಾಡುವಂತ ಸೌಲಭ್ಯವನ್ನು ನೀಡಲಾಗಿದೆ. ಹೀಗಾಗಿ ಮಕ್ಕಳ ಪೋಷಕರು ಕಡ್ಡಾಯವಾಗಿ ನಿಮ್ಮ ಸಮೀಪದ ಪೋಸ್ಟ್ ಆಫೀಸ್ ಗೆ ತೆರಳಿ ಮಕ್ಕಳ ಆಧಾರ್ ಕಾರ್ಡ್ ಮಾಡಿಸಬೇಕಾಗುತ್ತದೆ. ಇದರ ಬದಲಾಗಿ ನಾಡಕಾಚೇರಿ, ತಾಲೂಕು ಕಚೇರಿಗಳಲ್ಲಿ 5 ವರ್ಷದೊಳಗಿನ ಮಕ್ಕಳ ಆಧಾರ್ ಕಾರ್ಡ್ ಮಾಡಲಾಗುವುದಿಲ್ಲ.
ಮಕ್ಕಳ ಆಧಾರ್ ಕಾರ್ಡ್ ಮಾಡಿಸಲು ಬೇಕಾದ ದಾಖಲೆಗಳು
ಅಂಚೆ ಕಚೇರಿಯಲ್ಲಿ 5 ವರ್ಷದೊಳಗಿನ ಮಕ್ಕಳ ಆಧಾರ್ ಕಾರ್ಡ್ ಮಾಡಿಕೊಡಲಾಗುತ್ತದೆ. ನಿಮ್ಮ ಸಮೀಪದ ಪೋಸ್ಟ್ ಆಫೀಸ್ ಗೆ ತೆರಳಿ ಆಧಾರ್ ಕಾರ್ಡ್ ಮಾಡಿ ಕೊಡಲಾಗುತ್ತಾ ಎನ್ನುವುದನ್ನು ವಿಚಾರಿಸಿ. ನಿಮ್ಮ ಹಳ್ಳಿ, ಹೋಬಳಿ ಮಟ್ಟದ ಅಂಚೆ ಕಚೇರಿಯಲ್ಲಿ ಮಾಡದೇ ಇದ್ದರೇ, ತಾಲೂಕು ಕೇಂದ್ರಗಳಲ್ಲಿನ ಅಂಚೆ ಕಚೇರಿಯಲ್ಲಿ ಮಕ್ಕಳ ಆಧಾರ್ ಕಾರ್ಡ್ ಮಾಡಿಕೊಡಲಾಗುತ್ತದೆ.
ಇನ್ನೂ ಮಕ್ಕಳ ಆಧಾರ್ ಕಾರ್ಡ್ ಮಾಡಿಸೋದಕ್ಕಾಗಿ ಪೋಷಕರು ತಪ್ಪದೇ ನಿಮ್ಮ ಮಗುವಿನ ಓರಿಜಿನಲ್ ಬರ್ತ್ ಸರ್ಟಿಫಿಕೇಟ್ ( Birth Certificate ) ಕೊಂಡೊಯ್ಯಬೇಕು. ಅಲ್ಲದೇ ತಂದೆ ಅಥವಾ ತಾಯಿಯ ಆಧಾರ್ ಓರಿಜಿನಲ್ ಪ್ರತಿಯನ್ನು ಕೊಂಡೊಯ್ಯಬೇಕು. ಮಕ್ಕಳ ಬರ್ತ್ ಸರ್ಟಿಫಿಕೇಟ್ ಅನ್ನು ಆಧಾರ್ ನೊಂದಣಿ ಕೇಂದ್ರದ ಸಿಬ್ಬಂದಿಗಳು ನಿಮಗೆ ಸ್ಕ್ಯಾನ್ ಮಾಡಿ ವಾಪಾಸ್ ನೀಡುತ್ತಾರೆ. ಪೋಷಕರ ಆಧಾರ್ ಸಂಖ್ಯೆಯನ್ನು ನಮೂದಿಸಿ ಆ ವಿಳಾಸಕ್ಕೆ ಮಕ್ಕಳ ಆಧಾರ್ ಕಾರ್ಡ್ ಕಳುಹಿಸಿಕೊಡಲಾಗುತ್ತದೆ.
ಫೀಸ್ ಎಷ್ಟು.?
ಮಕ್ಕಳ ಆಧಾರ್ ಕಾರ್ಡ್ ಮಾಡಿಸೋದಕ್ಕೆ ಅಂಚೆ ಕಚೇರಿಯಲ್ಲಿ ಯಾವುದೇ ಫೀಸ್ ಪಡೆಯುವುದಿಲ್ಲ. ನೀವು ಜಸ್ಟ್ ನಿಮ್ಮ ಮಗುವಿನ ಬರ್ತ್ ಸರ್ಟಿಫಿಕೇಟ್ ಹಾಗೂ ನಿಮ್ಮ ಆಧಾರ್ ಕಾರ್ಡ್ ಒರಿಜಿನಲ್ ಪ್ರತಿಯನ್ನು ಕೊಂಡೊಯ್ದರೆ ಸಾಕು, ಕೆಲವೇ ನಿಮಿಷಗಳಲ್ಲಿ ನಿಮ್ಮ 5 ವರ್ಷದೊಳಗಿನ ಮಗುವಿನ ಆಧಾರ್ ಕಾರ್ಡ್ ನೋಂದಣಿ ( Aadhar Card Enrolment ) ಮಾಡಿಸಿ ಬರಬಹುದಾಗಿದೆ.
ಎಷ್ಟು ದಿನಕ್ಕೆ ಆಧಾರ್ ಕಾರ್ಡ್ ಲಭ್ಯ.?
ಮಕ್ಕಳಿಗೆ ಹೊಸದಾಗಿ ಆಧಾರ್ ಕಾರ್ಡ್ ಮಾಡಿಸಿದ ನಂತ್ರ 30 ದಿನಗಳ ಒಳಗಾಗಿ ನಿಮ್ಮ ಮಗುವಿನ ಆಧಾರ್ ಕಾರ್ಡ್ ಹಾರ್ಡ್ ಕಾಫಿ, ನೀವು ನೀಡಿದಂತ ವಿಳಾಸಕ್ಕೆ ಪೋಸ್ಟ್ ನಲ್ಲಿ ಬರಲಿದೆ. ಕೆಲವೊಮ್ಮೆ ಇನ್ನೂ ಹೆಚ್ಚು ದಿನಗಳನ್ನು ತೆಗೆದುಕೊಳ್ಳಲಿದೆ.