ನವದೆಹಲಿ: ಜನವರಿ 1, 2022 ರಿಂದ, ಪ್ರಸ್ತುತ ಸ್ವರೂಪದಲ್ಲಿ ಕಾರ್ಡ್ ಸಂಖ್ಯೆ ಮತ್ತು ಮುಕ್ತಾಯ ದಿನಾಂಕದಂತಹ ಗ್ರಾಹಕರ ಕಾರ್ಡ್ ವಿವರಗಳನ್ನು ಉಳಿಸಲು ಸಾಧ್ಯವಾಗುವುದಿಲ್ಲ ಎಂದು Google ಬಳಕೆದಾರರಿಗೆ ಮಾಹಿತಿ ನೀಡಿದೆ. ಪೇಮೆಂಟ್ ಅಗ್ರಿಗೇಟರ್ಸ್ (Payment Aggregators) ಮತ್ತು ಪೇಮೆಂಟ್ ಗೇಟ್‌ವೇಸ್ (Payment Gateways ) ಗಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (RBI) ಮಾರ್ಗಸೂಚಿಗಳನ್ನು Google ಪಾಲನೆ ಮಾಡಬೇಕಾಗಿರುವ ಹಿನ್ನಲೆಯಲ್ಲಿ, ಈ ನಿರ್ಧಾರಕ್ಕೆ ಬಂದಿದೆ. ಅನೇಕ ಬಳಕೆದಾರರು ಚಂದಾದಾರಿಕೆ (Subscription) ಆಧಾರಿತ ಸೇವೆಗಳಿಗೆ ಮಾಸಿಕ ಪಾವತಿಗಳನ್ನು ಮಾಡಲು ತಮ್ಮ Google Work ಖಾತೆ ಅಥವಾ Google Play ಖಾತೆಯಲ್ಲಿ ಕಾರ್ಡ್ ಸಂಖ್ಯೆಯನ್ನು ಉಳಿಸಿದ್ದಾರೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಹೊಸ ಕಾರ್ಡ್ ಶೇಖರಣಾ ನಿಯಮಗಳಿಂದಾಗಿ ಕಾರ್ಡ್ ವಿತರಕರು ಮತ್ತು ಕಾರ್ಡ್ ನೆಟ್‌ವರ್ಕ್‌ಗಳನ್ನು ಹೊರತುಪಡಿಸಿ ಯಾವುದೇ ಘಟಕ ಅಥವಾ ವ್ಯಾಪಾರಿಗಳು ಜನವರಿ 1, 2022 ರಿಂದ ಕಾರ್ಡ್ (card) ವಿವರಗಳನ್ನು ಅಥವಾ ಕಾರ್ಡ್-ಆನ್-ಫೈಲ್ (Card-on-file) ಅನ್ನು ಸಂಗ್ರಹಿಸಬಾರದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ (RBI) ನಿರ್ದೇಶಿಸಿದೆ. ಜನವರಿ 1, 2022 ರಿಂದ ಜಾರಿಗೆ ಬರುವಂತೆ, ಕಾರ್ಡ್ ವಿತರಕರು ಮತ್ತು ಕಾರ್ಡ್ ನೆಟ್‌ವರ್ಕ್‌ಗಳನ್ನು (Card Dealers and Card Network) ಹೊರತುಪಡಿಸಿ ಕಾರ್ಡ್ ವಹಿವಾಟು ಅಥವಾ ಪಾವತಿ ಸರಪಳಿಯಲ್ಲಿ ಯಾವುದೇ ಘಟಕವು ನಿಜವಾದ ಕಾರ್ಡ್ ಡೇಟಾವನ್ನು ಸಂಗ್ರಹಿಸಬಾರದು. ಈ ಹಿಂದೆ ಸಂಗ್ರಹಿಸಿದ ಅಂತಹ ಯಾವುದೇ ಡೇಟಾವನ್ನು ಡೀಲಿಟ್ ಮಾಡಬೇಕು ಅಂತ ಆರ್‌ಬಿಐ ತಿಳಿಸಿದೆ. ತಮ್ಮ Google One ಚಂದಾದಾರಿಕೆ ಅಥವಾ ಅವರ Google ಕ್ಲೌಡ್ ಕೆಲಸದ ಖಾತೆಗಳಿಗೆ ಪಾವತಿಸಲು ತಮ್ಮ ಕಾರ್ಡ್ ಮಾಹಿತಿಯನ್ನು ಉಳಿಸಿದ ಬಳಕೆದಾರರಿಗೆ, ಇದು ಹೊಸ ಸಮಸ್ಯೆಗಳನ್ನು ಉಂಟುಮಾಡಬಹುದು. ಡಿಸೆಂಬರ್ 31, 2021 ರ ನಂತರ ಪಾವತಿಗಳನ್ನು ಮಾಡಲು ಅದೇ ವೀಸಾ ಅಥವಾ ಮಾಸ್ಟರ್‌ಕಾರ್ಡ್ (Visa or MasterCard) ನೀಡಿದ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ (Debit or credit card) ಅನ್ನು ಬಳಸುವುದನ್ನು ಮುಂದುವರಿಸಲು, ಅವರು ತಮ್ಮ ಕಾರ್ಡ್ ವಿವರಗಳನ್ನು (Card Details) ಮರು-ನಮೂದಿಸಬೇಕು.
ಡಿಸೆಂಬರ್ 31, 2021 ರ ನಂತರ ಪಾವತಿಗಳನ್ನು ಮಾಡಲು ಇಲ್ಲವೇ ಅದೇ ವೀಸಾ ಅಥವಾ ಮಾಸ್ಟರ್‌ಕಾರ್ಡ್ (Visa or MasterCard) ನೀಡಿದ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ((Debit or credit card) ಅನ್ನು ಬಳಸುವುದನ್ನು ಮುಂದುವರಿಸಲು, ತಮ್ಮ ಕಾರ್ಡ್ ವಿವರಗಳನ್ನು ಮರು-ನಮೂದಿಸಬೇಕು ಮತ್ತು ಅಂತ್ಯದ ಮೊದಲು ಕನಿಷ್ಠ ಒಂದು ಖರೀದಿ ಅಥವಾ ಹಸ್ತಚಾಲಿತ ಪಾವತಿಯನ್ನು ಮಾಡಬೇಕು ಎಂದು Google ಹೇಳಿದೆ.