ನವದೆಹಲಿ : ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅರ್ಹ ರೈತರು ಕಡ್ಡಾಯ ಇಕೆವೈಸಿಯನ್ನ ಪೂರ್ಣಗೊಳಿಸಲು ಈಗ ಕೇವಲ 3 ದಿನಗಳು ಮಾತ್ರ ಉಳಿದಿವೆ ಅನ್ನೋದನ್ನ ಗಮನಿಸಬೇಕು. ಈ ಗಡುವಿನೊಳಗೆ ನೀವು ಇಕೆವೈಸಿಯನ್ನ ತಪ್ಪಿಸಿಕೊಂಡರೆ, ಈ ಯೋಜನೆಯ ಮುಂದಿನ ಕಂತು ಖಾತೆ ಸೇರದೇ ಇರಬೋದು. ಯಾಕಂದ್ರೆ, ಕಡ್ಡಾಯ ಇಕೆವೈಸಿಯನ್ನು ಪೂರ್ಣಗೊಳಿಸಲು ಆಗಸ್ಟ್ 31ರ ಗಡುವನ್ನು ನಿಗದಿಪಡಿಸಲಾಗಿದೆ. ಹಾಗಾಗಿ ಇನ್ನೂ ತಮ್ಮ ಇಕೆವೈಸಿ ಔಪಚಾರಿಕತೆಗಳನ್ನ ಪೂರ್ಣಗೊಳಿಸದ ರೈತರು ನಿಗದಿತ ಗಡುವಿನೊಳಗೆ ಅದನ್ನ ಮಾಡಬೇಕಾಗುತ್ತದೆ.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ, ಕಡ್ಡಾಯ ಇಕೆವೈಸಿಯನ್ನ ಪೂರ್ಣಗೊಳಿಸಲು ಸರ್ಕಾರವು ಈ ಹಿಂದೆ ಜುಲೈ 31, 2022ರ ಗಡುವನ್ನ ನಿಗದಿಪಡಿಸಿತ್ತು. ಆದ್ರೆ, ಈ ಕಾರಣದಿಂದಾಗಿ, ಹೆಚ್ಚಿನ ರೈತರು ಇಕೆವೈಸಿಯನ್ನ ಸಮಯಕ್ಕೆ ಸರಿಯಾಗಿ ಮಾಡಲು ವಿಫಲರಾದರು.

ಪಿಎಂಕಿಸಾನ್ʼನ ಅಧಿಕೃತ ವೆಬ್ ಸೈಟ್ ಪ್ರಕಾರ ಕವೈಸಿ ಪೂರ್ಣಗೊಳಿಸಲು ಈ ಮೂರರಲ್ಲಿ ಒಂದನ್ನ ಬಳಸಬೋದು. ಅಂದ್ಹಾಗೆ, ಪಿಎಂಕಿಸಾನ್ ನೋಂದಾಯಿತ ರೈತರಿಗೆ ಇಕೆವೈಸಿ ಕಡ್ಡಾಯವಾಗಿದೆ.

* ಒಟಿಪಿ ಆಧಾರಿತ ಇಕೆವೈಸಿ ಪಿಎಂಕಿಸಾನ್ ಪೋರ್ಟಲ್‌ನಲ್ಲಿ ಲಭ್ಯವಿದೆ.
* ಬಯೋಮೆಟ್ರಿಕ್ ಆಧಾರಿತ ಇಕೆವೈಸಿಗಾಗಿ ಹತ್ತಿರದ ಸಿಎಸ್ಸಿ ಕೇಂದ್ರಗಳನ್ನ ಸಂಪರ್ಕಿಸಬಹುದು.
* ನಿಮ್ಮ ಆಧಾರ್ ಸಂಖ್ಯೆಯನ್ನ ಬಳಸಿಕೊಂಡು ಒಟಿಪಿ ಆಧಾರಿತ ಇಕೆವೈಸಿ ಲಿಂಕ್ ಕ್ಲಿಕ್ ಮಾಡುವ ಮೂಲಕ ಕೆವೈಸಿ ಪೂರ್ಣಗೊಳಿಸಬೋದು.

ಅಂದ್ಹಾಗೆ, ಎಲ್ಲಾ ಪಿಎಂಕಿಸಾನ್ ಫಲಾನುಭವಿಗಳಿಗೆ ಇಕೆವೈಸಿ ಗಡುವನ್ನ ಆಗಸ್ಟ್ 31, 2022 ರವರೆಗೆ ವಿಸ್ತರಿಸಲಾಗಿದೆ.

Share.
Exit mobile version