‘IMA’ ಬಹುಕೋಟಿ ವಂಚನೆ ಪ್ರಕರಣ ; 28 ಮಂದಿ ವಿರುದ್ಧ ಪೂರಕ ಚಾರ್ಜ್ ಶೀಟ್ ಸಲ್ಲಿಸಿದ CBI – Kannada News Now


India

‘IMA’ ಬಹುಕೋಟಿ ವಂಚನೆ ಪ್ರಕರಣ ; 28 ಮಂದಿ ವಿರುದ್ಧ ಪೂರಕ ಚಾರ್ಜ್ ಶೀಟ್ ಸಲ್ಲಿಸಿದ CBI

ನವದೆಹಲಿ: ಐಎಂಎ ಕಂಪನಿಯ ಬಹುಕೋಟಿ ರೂಪಾಯಿ ವಂಚನೆ ಪ್ರಕರಣ ಸಂಬಂಧ ತನಿಖೆಗಿಳಿದಿರುವ ಸಿಬಿಐ ಅಧಿಕಾರಿಗಳು 28 ಮಂದಿ ವಿರುದ್ಧ ಪೂರಕ ಚಾರ್ಜ್​​ಶೀಟ್​ ದಾಖಲಿಸಿದ್ದಾರೆ.

ಕಂಪನಿಯ ಎಂಡಿ ಹಾಗೂ ಸಿಇಒ ಮೊಹಮದ್​ ಮನ್ಸೂರ್ ಖಾನ್​ ಸೇರಿ ಅನೇಕ ಹಿರಿಯ ಅಧಿಕಾರಿಗಳೂ ಆರೋಪಿಗಳಾಗಿದ್ದಾರೆ. ಈ ಸಂಬಂಧ ಬೆಂಗಳೂರಿನ ಸಂಬಂಧಿತ ನ್ಯಾಯಾಲಯದಲ್ಲಿ ಪೂರಕ ದೋಷಾರೋಪ ಪಟ್ಟಿ ಸಲ್ಲಿಕೆ ಆಗಿದೆ.

ಐಜಿಪಿ ಹೇಮಂತ್ ನಿಂಬಾಳ್ಕರ್​, ಎಸ್​ಪಿ ಅಜಯ್​ ಹಿಲೊರಿ, ಡಿವೈಎಸ್​ಪಿ ಇ.ಬಿ. ಶ್ರೀಧರ, ಇನ್​ಸ್ಪೆಕ್ಟರ್ ಎಂ. ರಮೇಶ್​, ಎಸ್​ಐ ಪಿ.ಗೌರಿಶಂಕರ್​ ಸೇರಿದಂತೆ ಹಲವರ ಹೆಸರನ್ನು ಸಿಬಿಐ ಅಧಿಕಾರಿಗಳು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ.

ಕೊರೊನಾ ಲಸಿಕೆಯ ನಿರೀಕ್ಷೆಯಲ್ಲಿದ್ದವರಿಗೆ ಸಿಹಿಸುದ್ದಿ: ಡಿಸೆಂಬರ್ ವೇಳೆಗೆ ಲಸಿಕೆ ಸಿದ್ಧ..!




error: Content is protected !!