ಬೆಂಗಳೂರು: ಜೂನ್.24ರಿಂದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-3 ಆರಂಭಗೊಳ್ಳಲಿದೆ. ಈ ಪರೀಕ್ಷೆಗೆ ರಾಜ್ಯಾಧ್ಯಂತ 75,995 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ.

ಈ ಬಗ್ಗೆ ಶಾಲಾ ಶಿಕ್ಷಣ ಇಲಾಖೆಯಿಂದ ಮಾಹಿತಿ ನೀಡಿದ್ದು ದ್ವಿತೀಯ ಪಿಯು ಪರೀಕ್ಷೆ-3 ದಿನಾಂಕ 24-06-2024ರಿಂದ ಆರಂಭಗೊಂಡು, 05-07-2024ರವರೆಗೆ ನಡೆಯಲಿದೆ ಎಂದು ತಿಳಿಸಿದೆ.

ದ್ವಿತೀಯ ಪಿಯುಸಿ ಪರೀಕ್ಷೆ-3ಗೆ ಕಲಾ ವಿಭಾಗದಲ್ಲಿ 19,113 ವಿದ್ಯಾರ್ಥಿಗಳು, 11,698 ವಿದ್ಯಾರ್ಥಿನಿಯರು ಸೇರಿದಂತೆ 30,811 ಮಂದಿ ನೋಂದಾಯಿಸಿಕೊಂಡಿದ್ದಾರೆ ಅಂತ ಹೇಳಿದೆ.

ವಿಜ್ಞಾನ ವಿಭಾಗದಲ್ಲಿ 19,783 ವಿದ್ಯಾರ್ಥಿಗಳು, ವಾಣಿಜ್ಯ ವಿಭಾಗದಲ್ಲಿ 25,401 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 44,358 ಹುಡುಗರು, 31,637 ಹುಡುಗಿಯರು ಸೇರಿ 75,995 ವಿದ್ಯಾರ್ಥಿಗಳು ಪರೀಕ್ಷೆ-3ಕ್ಕೆ ನೋಂದಾಯಿಸಿಕೊಂಡಿದ್ದಾರೆ.

ದ್ವಿತೀಯ ಪಿಯುಸಿ ಪರೀಕ್ಷೆ-3 ರಾಜ್ಯದ 248 ಕೇಂದ್ರಗಳಲ್ಲಿ ನಡೆಯಲಿದೆ. ಈ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕಣ್ಗಾವಲು ಇರಿಸಲಾಗಿದೆ. ಅಲ್ಲದೇ ಜಿಲ್ಲಾ ಮತ್ತು ತಾಲ್ಲೂಕು ಹಂತದಲ್ಲಿ ವಿಚಕ್ಷಣದಳಗಳನ್ನು ರಚಿಸಲಾಗಿದೆ ಅಂತ ತಿಳಿಸಿದೆ.

BREAKING : ಪರೀಕ್ಷೆಗಳನ್ನ ಪಾರದರ್ಶಕ, ಸುಗಮವಾಗಿ ನಡೆಸಲು ಕೇಂದ್ರದಿಂದ ‘ಉನ್ನತ ಮಟ್ಟದ ಸಮಿತಿ’ ರಚನೆ

BREAKING : ʻCBSEʼ ಕಂಪಾರ್ಟ್ಮೆಂಟ್ ಪರೀಕ್ಷೆ ವೇಳಾಪಟ್ಟಿ ಪ್ರಕಟ : ಈ ರೀತಿ ಚೆಕ್‌ ಮಾಡಿಕೊಳ್ಳಿ

Share.
Exit mobile version