ನವದೆಹಲಿ : ಫಿಫಾ ವಿಶ್ವಕಪ್ 2026ರ ಅರ್ಹತಾ ಸುತ್ತಿನ 3ನೇ ಸುತ್ತಿಗೆ ಅರ್ಹತೆ ಪಡೆಯಲು ರಾಷ್ಟ್ರೀಯ ತಂಡ ವಿಫಲವಾದ ನಂತರ ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ (AIFF) ಭಾರತೀಯ ಫುಟ್ಬಾಲ್ ತಂಡದ ಮುಖ್ಯ ಕೋಚ್ ಇಗೊರ್ ಸ್ಟಿಮಾಕ್ ಅವರನ್ನ ವಜಾಗೊಳಿಸಲು ನಿರ್ಧರಿಸಿದೆ.

ಅಂದ್ಹಾಗೆ, ಕತಾರ್ ವಿರುದ್ಧದ ಕೊನೆಯ ಪಂದ್ಯದಲ್ಲಿ ಭಾರತ 2-1 ಗೋಲುಗಳಿಂದ ಸೋಲನುಭವಿಸಿದ್ದು, ಇದರ ಪರಿಣಾಮವಾಗಿ ರಾಷ್ಟ್ರೀಯ ತಂಡವು ಕುವೈತ್ ಮತ್ತು ಅಫ್ಘಾನಿಸ್ತಾನವನ್ನ ಒಳಗೊಂಡ ಗುಂಪಿನಲ್ಲಿ ಮೂರನೇ ಸ್ಥಾನ ಪಡೆಯಿತು. ಕುವೈತ್ ವಿರುದ್ಧದ ಕೊನೆಯ ಪಂದ್ಯದ ನಂತರ ಸುನಿಲ್ ಛೆಟ್ರಿ ಅಂತರರಾಷ್ಟ್ರೀಯ ಫುಟ್ಬಾಲ್ನಿಂದ ನಿವೃತ್ತರಾದ ಕೆಲವೇ ವಾರಗಳ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಹಿರಿಯ ಅಧಿಕಾರಿಗಳು ಭಾನುವಾರ ವರ್ಚುವಲ್ ಸಭೆ ನಡೆಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಎಐಎಫ್ಎಫ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

 

 

ಕಲ್ಯಾಣ ಕರ್ನಾಟಕ ಜನತೆಗೆ ಮತ್ತೊಂದು ಗುಡ್ ನ್ಯೂಸ್: ಶೀಘ್ರವೇ ಕಲಬುರ್ಗಿಯ ಜಯದೇವ ಆಸ್ಪತ್ರೆ ಲೋಕಾರ್ಪಣೆ

ಬೊಮ್ಮಾಯಿ ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಇಳಿಕೆಯಿಂದ 15,000 ಕೋಟಿ ನಷ್ಟ: ಸಿಎಂ ಸಿದ್ಧರಾಮಯ್ಯ

‘ಪೂರ್ವಾಂಚಲ್ ಸಹಕಾರಿ ಬ್ಯಾಂಕಿ’ನ ಪರವಾನಗಿಯನ್ನು ‘RBI ರದ್ದು’

Share.
Exit mobile version