ಮಂಡ್ಯ : ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಮೋದಿ ಹೇಳಿದ್ದರು. ಆದರೆ ಮೋದಿ ಆಡಳಿತದಲ್ಲಿ ದೇಶದಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚಾಯಿತು. ಯುವಕರು ಉದ್ಯೋಗ ಕೊಡಿ ಎಂದು ಕೇಳಿದರೆ ಪಕೋಡ ಮಾರಿ ಅಂದರು. ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ ಎಂದು ಹೇಳಿದರು ಮಾಡಿದ್ದಾರಾ? ಎಂದು ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಸಿಎಂ ಸಿದ್ದರಾಮಯ್ಯ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು ರೈತರನ್ನು ಬೀದಿಗೆ ನಿಲ್ಲಿಸಿದರು ಹರಿದರು ಜಮೀನು ಮಾಡಿಕೊಂಡು ಬಿಕಾರಿಯಾಗುವಂತೆ ಮಾಡಿದ್ದಾರೆ ದೆಹಲಿ ಗಡಿಯಲ್ಲಿ ರೈತರು ವರ್ಷದವರೆಗೆ ಪ್ರತಿಭಟನೆ ಮಾಡಿದ್ದರು ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಿದೆ ಬಡವರ ಬದುಕು ಕಷ್ಟವಾಗಿದೆ ಇದಕ್ಕಾಗಿ ನಾವು ರಾಜ್ಯದಲ್ಲಿ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ಮಾಡಿದ್ದೇವೆ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಲೋಕಸಭಾ ಚುನಾವಣೆಯಲ್ಲಿ ಜನ ನೀಡುವ ತೀರ್ಪು ಮಹತ್ವದ್ದು 2014ರ ಮೇ 26 ರಿಂದ ನರೇಂದ್ರ ಮೋದಿಯವರು ಪ್ರಧಾನಿಯಾಗಿದ್ದಾರೆ.2004 ರಿಂದ 2014ರ ವರೆಗೆ ಡಾಕ್ಟರ್ ಮನಮೋಹನ್ ಸಿಂಗ್ ಪ್ರಧಾನಮಂತ್ರಿಯಾಗಿದ್ದರು. ಡಾಕ್ಟರ್ ಮನಮೋಹನ್ ಸಿಂಗ್ ದೇಶ ಕಂಡ ದೊಡ್ಡ ಆರ್ಥಿಕ ತಜ್ಞರು. ಭಾರತವನ್ನು ಅಭಿವೃದ್ಧಿ ಹೊತ್ತ ಮುನ್ನಡೆಸಲು ಡಾಕ್ಟರ್ ಮನಮೋಹನ್ ಸಿಂಗ್ ಶ್ರಮಿಸಿದ್ದರು ಎಂದರು.

ಮೋದಿ ಈಗ ಉಚಿತವಾಗಿ 5 ಕೆಜಿ ಅಕ್ಕಿ ಕೊಡುತ್ತೇವೆ ಅಂತಿದ್ದಾರೆ. ಆದರೆ ಆಹಾರ ಭದ್ರತಾ ಕಾಯ್ದೆ ಜಾರಿಗೆ ತಂದಿದ್ದು ಡಾ. ಸಿಂಗ್. ಡಾ. ಮನಮೋಹನ್ ಸಿಂಗ್ ಸರ್ಕಾರದ ವಿರುದ್ಧ ಬಿಜೆಪಿ ಸುಳ್ಳು ಆರೋಪ ಮಾಡಿತ್ತು. 2014ರಲ್ಲಿ ಮೋದಿ ದೇಶದ ಜನರಿಗೆ ಭ್ರಮೆ ಹುಟ್ಟಿಸುವ ಕೆಲಸ ಮಾಡಿದ್ರು.ಬಿಜೆಪಿ ಅಧಿಕಾರಕ್ಕೆ ಬಂದರೆ ನೂರು ದಿನದಲ್ಲಿ ಕಪ್ಪು ಹಣ ವಾಪಸ್ ತರುತ್ತೇವೆ. ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂಪಾಯಿ ಹಣ ಹಾಕುವುದಾಗಿ ಪ್ರಚಾರ ಮಾಡಿದ್ದರು.ಅಧಿಕಾರಕ್ಕೆ ಬಂದು ಹತ್ತು ವರ್ಷವಾದರೂ ಕೂಡ ವಿದೇಶದಿಂದ ಯಾವುದೇ ಕಪ್ಪು ಹಣ ತರಲಿಲ್ಲ.

Share.
Exit mobile version