ಬೆಂಗಳೂರು : ಭೇದ ಭಾವವಿಲ್ಲದೆ ಪ್ರತಿಯೊಬ್ಬರನ್ನೂ ಸಮಾನ ಆರೈಕೆ ಮಾಡುವ, ರೋಗಿಯ ಪ್ರಾಣ ರಕ್ಷಣೆಗಾಗಿ ಹಗಲಿರುಳೆನ್ನದೆ ದುಡಿಯುತ್ತಿರುವ ನಾಡಿನ ಸಮಸ್ತ ವೈದ್ಯ ಸಮೂಹಕ್ಕೆ ರಾಷ್ಟ್ರೀಯ ವೈದ್ಯರ ದಿನಕ್ಕೆ ಸಿಎಂ ಸಿದ್ದರಾಮಯ್ಯ ಶುಭಾಶಯ ಕೋರಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಸಿಎಂ ಸಿದ್ದರಾಮಯ್ಯ, ತಾಯಿ ಜನ್ಮ ನೀಡಿದರೆ, ವೈದ್ಯರು ಪುನರ್ಜನ್ಮ ನೀಡುವರು. ಇದೇ ಕಾರಣಕ್ಕೆ ವೈದ್ಯವೃತ್ತಿಯನ್ನು ಇತರೆ ಎಲ್ಲಾ ವೃತ್ತಿಗಳಿಗಿಂತ ಅತ್ಯಂತ ಶ್ರೇಷ್ಠವೆಂದು ಭಾವಿಸಲಾಗುತ್ತಿದೆ. ತನ್ನ ಬಳಿ ಬರುವ ವ್ಯಕ್ತಿ ಬಡವನೊ – ಶ್ರೀಮಂತನೊ, ಮೇಲ್ಜಾತಿಯೊ – ಕೆಳಜಾತಿಯೊ, ಸ್ವಧರ್ಮವೊ – ಪರ ಧರ್ಮವೊ ಈ ಯಾವುದರ ಭೇದ ಭಾವವಿಲ್ಲದೆ ಪ್ರತಿಯೊಬ್ಬರನ್ನೂ ಸಮಾನ ಆರೈಕೆ ಮಾಡುವ, ರೋಗಿಯ ಪ್ರಾಣ ರಕ್ಷಣೆಗಾಗಿ ಹಗಲಿರುಳೆನ್ನದೆ ದುಡಿಯುತ್ತಿರುವ ನಾಡಿನ ಸಮಸ್ತ ವೈದ್ಯ ಸಮೂಹಕ್ಕೆ ರಾಷ್ಟ್ರೀಯ ವೈದ್ಯರ ದಿನದ ಶುಭಾಶಯಗಳು. ವೈದ್ಯರ ಸೇವೆ – ಸಮರ್ಪಣಾಭಾವವನ್ನು ಈ ದಿನ ನಾವೆಲ್ಲರೂ ಅತ್ಯಂತ ಗೌರವದಿಂದ ಸ್ಮರಿಸೋಣ ಎಂದು ಹೇಳಿದ್ದಾರೆ.

Share.
Exit mobile version