ಬೆಂಗಳೂರು : ಈ ಬಾರಿ ಚುನಾವಣೆಯಲ್ಲಿ ಯಶವಂತಪುರದಲ್ಲಿ ಜೆಡಿಎಸ್ ಗೆಲ್ಲದಿದ್ರೆ ನಾನು ರಾಜಕೀಯ ನಿವೃತ್ತಿ ಘೋಷಿಸುವೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದರು.
ಯಶವಂತಪುರದಲ್ಲಿ ನಡೆದ ಜೆಡಿಎಸ್ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಕುಮಾರಸ್ವಾಮಿ ಯಶವಂತಪುರ ಜೆಡಿಎಸ್ ಭದ್ರಕೋಟೆ. ನಮ್ಮ ಕೆಲವು ಸಮಸ್ಯೆಗಳಿಂದ ಈ ಹಿಂದೆ ನಮಗೆ ಹಿನ್ನಡೆಯಾಗಿದೆ. ಹಾಗಾಗಿ ನಾವು ಯಶವಂತಪುರ ಕ್ಷೇತ್ರದಲ್ಲಿ ಸೋತಿದ್ದೇವೆ ಅಷ್ಟೇ. ಕಡಿಮೆ ಅಂತರದಲ್ಲಿ ಯಶವಂತಪುರದಲ್ಲಿ ಸೋಲು ಆಗಿದೆ. ಜವರಾಯಿಗೌಡಗೆ ಚುನಾವಣೆ ಹೇಗೆ ನಡೆಸಬೇಕು ಎಂಬುದು ಗೊತ್ತಾಗಿಲ್ಲ ಎಂದರು.
ಜವರಾಯಿಗೌಡರೇ ಯಶವಂತಪುರ ಕ್ಷೇತ್ರದ ಉತ್ತಮ ಅಭ್ಯರ್ಥಿ. ಜವರಾಯಿಗೌಡ ಅಭ್ಯರ್ಥಿ ಆಗಬೇಕು. ಈ ಬಾರಿ ಚುನಾವಣೆಯಲ್ಲಿ ಯಶವಂತಪುರದಲ್ಲಿ ಜೆಡಿಎಸ್ ಗೆಲ್ಲದಿದ್ರೆ ನಾನು ರಾಜಕೀಯ ಬಿಟ್ಟು ಬಿಡ್ತೀನಿ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದರು.
ಮದುವೆಯ ಗುಟ್ಟು ಬಿಚ್ಚಿಟ್ಟ ಮಾಜಿ ಸಿಎಂ ಹೆಚ್ಡಿಕೆ
ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಇಂದು ಯಶವಂತಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಮ್ಮ ಮದುವೆಯ ಗುಟ್ಟು ಬಿಚ್ಚಿಟ್ಟಿದ್ದಾರೆ. ನಾವಿಬ್ಬರು ಮದುವೆ ಆಗುವಾಗ ಅನಿತಾ ಒಂದು ಕಂಡೀಷನ್ ಹಾಕಿದ್ದರು. ಮದುವೆಯಾದ ಮೇಲೆ ನಾನು ರಾಜಕೀಯಕ್ಕೆ ಹೋಗಬಾರದು ಎಂದು ಷರತ್ತು ಹಾಕಿದ್ದರು. ಆದರೆ ಮದುವೆಯಾದ ಅನಿತಾ ಅವರನ್ನೇ ಚುನಾವಣೆಗೆ ನಿಲ್ಲಿಸಿದ್ದೆ ಎಂದು ಕುಮಾರಸ್ವಾಮಿ ಹೇಳಿದರು.
ಮುಂದುವರೆದು ಮಾತನಾಡಿದ ಹೆಚ್ಡಿಕೆ ಯಶವಂತಪುರದಲ್ಲಿ ಸ್ಪರ್ಧಿಸಿ ಎಂಬ ಅಭಿಮಾನಿಗಳ ಮನವಿಗೆ ಪ್ರತಿಕ್ರಿಯೆ ನೀಡಿದ ಹೆಚ್ಡಿಕೆ ನಾನು ಸ್ಪರ್ಧಿಸಿದ್ರೆ ತಪ್ಪು ಸಂದೇಶ ರವಾನೆಯಾಗುತ್ತದೆ. ಜವರಾಯಿಗೌಡರೇ ಈ ಕ್ಷೇತ್ರದ ಅಭ್ಯರ್ಥಿ. ಅವರು ಗೆಲ್ಲುವುದು ಮುಖ್ಯವಾಗಿದೆ. ನೀವೆಲ್ಲರೂ ಸೇರಿ ಅವರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.
BREAKING NEWS : ತುಮಕೂರಿನಲ್ಲಿ ದೇಶದ ಅತಿದೊಡ್ಡ ‘ಹೆಲಿಕಾಪ್ಟರ್ ಕಾರ್ಖಾನೆ’ ಉದ್ಘಾಟಿಸಿದ ಪ್ರಧಾನಿ ಮೋದಿ