ನವದೆಹಲಿ : ಕೇಂದ್ರ ಬಜೆಟ್ ಬಗ್ಗೆ ಪ್ರತಿಪಕ್ಷಗಳು ವಾಗ್ದಾಳಿ ನಡೆಸ್ತೀವೆ. ಅದ್ರಂತೆ, ಸಧ್ಯ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಜೆಟ್ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಮುಂಬರುವ ಚುನಾವಣೆಯನ್ನ ಗಮನದಲ್ಲಿಟ್ಟುಕೊಂಡು ಈ ನೀತಿ ಮಾಡಲಾಗಿದೆ ಎಂದು ಟೀಕಿಸಿದರು. ನನಗೆ ಅರ್ಧ ಗಂಟೆ ಸಮಯ ನೀಡಿದ್ರೆ ಉತ್ತಮ ಬಜೆಟ್ ಜನರ ಮುಂದೆ ತರುತ್ತಾರೆ ಎಂದು ವ್ಯಂಗ್ಯವಾಡಿದರು.
ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮಮತಾ, ಇದೊಂದು ಜನವಿರೋಧಿ ಬಜೆಟ್ ಆಗಿದ್ದು, ಬಡವರಿಗೆ ಇದರಿಂದ ಏನೂ ಲಾಭವಿಲ್ಲ. ಆದಾಯ ತೆರಿಗೆ ಸ್ಲ್ಯಾಬ್ಗಳಲ್ಲಿ ಬದಲಾವಣೆ ಮಾಡುವುದರಿಂದ ಯಾರಿಗೂ ಪ್ರಯೋಜನವಿಲ್ಲ ಎಂದು ಸ್ಪಷ್ಟಪಡಿಸಿದರು.
ಇನ್ನು ಈ ಬಜೆಟ್ ಕೇವಲ ಅವಕಾಶವಾದವನ್ನ ತೋರಿಸುತ್ತದೆ, ಇದು ಜನವಿರೋಧಿಯಲ್ಲ, ಬಡವರಿಗೆ ಪ್ರಯೋಜನವಾಗುವುದಿಲ್ಲ, ಇದು ಒಂದು ವರ್ಗದ ಜನರಿಗೆ ಮಾತ್ರ ಪ್ರಯೋಜನವನ್ನು ನೀಡುವುದಿಲ್ಲ, ಇದು ನಿರುದ್ಯೋಗ ಸಮಸ್ಯೆಯನ್ನು ಪರಿಹರಿಸುವುದಿಲ್ಲ. ಇದು ಕೇವಲ 2024 ರ ಲೋಕಸಭೆಯನ್ನು ಗಮನದಲ್ಲಿಟ್ಟುಕೊಂಡು ಮಾಡಿದ ಬಜೆಟ್. ವಿಧಾನಸಭಾ ಚುನಾವಣೆ, ಇದು ಜನರಿಗೆ ಯಾವುದೇ ವಿಶ್ವಾಸವನ್ನ ನೀಡುವುದಿಲ್ಲ ಎಂದರು.
BREAKING NEWS : ಅಕ್ರಮ ‘PSI’ ನೇಮಕಾತಿ ಪ್ರಕರಣ : ಮತ್ತೋರ್ವ ಆರೋಪಿ ಅರೆಸ್ಟ್