ಬೆಂಗಳೂರು : ಈಗ ಒಳ್ಳೆಯ ಆಡಳಿತ ಕೊಟ್ಟರೆ ಮುಂದೆ ಪಕ್ಷಕ್ಕೆ ಅನುಕೂಲ ಆಗಲಿದೆ. 2028 ರ ಚುನಾವಣೆಗೆ ಈಗಿನ ಒಳ್ಳೆಯ ಆಡಳಿತ ಅನುಕೂಲ ಆಗಲಿದೆ ಅಕಸ್ಮಾತ್ ಒಳ್ಳೆಯ ಆಡಳಿತ ಕೊಡಲಿಲ್ಲ ಅಂದರೆ ರಾಜಕಾರಣಿಗಳ ಭವಿಷ್ಯ ಜನರ ಕೈಯಲ್ಲಿ ಇರುತ್ತದೆ ಎಂದು ಕೆ.ಎನ್ ರಾಜಣ್ಣ ಸಿಎಂ ಡಿಕೆ ಶಿವಕುಮಾರ್ ಗೆ ಸಲಹೆ ಕೊಟ್ಟಿದ್ದರೆ.
ಖಾತೆ ಕ್ಯಾತೆಯ ಬಗ್ಗೆ ಮಾರಿ ಸಚಿವ ಕೆ ಎನ್ ರಾಜಣ್ಣ ಕೆಂಡಮಂಡಲವಾಗಿದ್ದು, BDA BMRDA ಇಲ್ಲಾಂದ್ರೆ ಖಾತೆ ಬೇಡ ಅಧಿಕಾರ ವಹಿಸಿಕೊಳ್ಳಲ್ಲ ಅಂತ ಕೃಷ್ಣ ಭೈರೇಗೌಡ ಹೇಳಿದ್ದಾರೆ. ಯಾರಿಗೆ ಯಾವ ಕಾಯಿಲೆ ಇದೆಯೋ ಅದಕ್ಕೆ ಏನೇನು ಔಷಧಿಗಳು ಬರುತ್ತವೆಯೋ ನೋಡೋಣ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಇನ್ನೂ ಡಿಕೆ ಶಿವಕುಮಾರ್ ಗೆ ಸಾಕಷ್ಟು ಸವಾಲಿದೆ ಎನ್ನುವ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು ಜಿಬಿಎ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆ ಬರುತ್ತದೆ ಅನುದಾನ ವಿಷಯದಲ್ಲಿ ರಾಜ್ಯಕ್ಕೆ ಮೊದಲಿನಿಂದಲೂ ಅನ್ಯಾಯ ಆಗಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ಮಾಡಲೇಬೇಕು. ಸ್ಥಳೀಯ ಸಂಸ್ಥೆ ಚುನಾವಣೆ ತಡ ಮಾಡಿದರೆ ಸಮಸ್ಯೆಯಾಗುತ್ತದೆ ಡಿಸೆಂಬರ್ ಬಳಿಕ ಚುನಾವಣೆ ಮೇಲೆ ಶಾಸಕರ ಗಮನ ಹೋಗುತ್ತದೆ ಇಲ್ಲಿ ರಾಜಕಾರಣ ಮಾಡುವುದಕ್ಕೆ ಯಾರು ಹೋಗುವುದಿಲ್ಲ ಹೀಗಾಗಿ ಶಾಸಕರು ಗಮನಹರಿಸಲೇಬೇಕು.








