ನವದೆಹಲಿ: ಬೆಂಗಳೂರಿನ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ( Edga Maidhana ) ಹೈಕೋರ್ಟ್ ಗಣೇಶೋತ್ಸವ ಆಚರಣೆಗೆ ( Ganesh Festival ) ಅನುಮತಿ ನೀಡಿದಂತ ವಿವಾದ ಸಂಬಂಧ ಸುಪ್ರೀಂ ಕೋರ್ಟ್ ಗೆ ( Supreme Court ) ಮೇಲ್ಮನವಿ ಸಲ್ಲಿಸಲಾಗಿತ್ತು. ಈ ಅರ್ಜಿಯ ವಿಚಾರವಾಗಿ ದ್ವಿಸದಸ್ಯ ಪೀಠದಿಂದ ಮಧ್ಯಂತರ ಆದೇಶ ಹೊರಡಿಸಲು ನಕಾರ ವ್ಯಕ್ತ ಪಡಿಸಿದ ಕಾರಣ, ಇದೀಗ ಸುಪ್ರೀ ಕೋರ್ಟ್ ನ ಸಿಐಜೆ ನೇತೃತ್ವದ ತ್ರಿಸದಸ್ಯ ಪೀಠಕ್ಕೆ ವರ್ಗಾವಣೆಯಾಗಿದೆ.

BIG BREAKING NEWS: ಮುರುಘಾ ಶ್ರೀ ವಿರುದ್ಧ ಪೋಕ್ಸೋ ಕೇಸ್: ನ್ಯಾಯಾಲಯಕ್ಕೆ ಸಂತ್ರಸ್ತ ಬಾಲಕಿಯರು ಹಾಜರ್, ಹೇಳಿಕೆ ದಾಖಲು ಆರಂಭ | Murugha Mutt Swamiji

ಇಂದು ಕರ್ನಾಟಕ ಹೈಕೋರ್ಟ್ ಬೆಂಗಳೂರಿನ ಚಾಮರಾಜಪೇಟೆಯಲ್ಲಿನ ಈದ್ಗಾ ಮೈದಾನದಲ್ಲಿ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅವಕಾಶ ನೀಡಿ ಆದೇಶಿಸಿದ್ದಂತ ಆದೇಶ ಪ್ರಶ್ನಿಸಿ, ವಕ್ಫ್ ಬೋರ್ಡ್ ನಿಲ್ಲ ಸಲ್ಲಿಸಲಾಗಿದ್ದಂತ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆಗೆ ಕೈಗೆತ್ತಿಕೊಳ್ಳಲಾಗಿತ್ತು.

BIGG NEWS : ಭಾರತದ ಆತ್ಮಹತ್ಯೆ ಪ್ರಕರಣಗಳಲ್ಲಿ ʼಕರ್ನಾಟಕಕ್ಕೆ ಐದನೇ ಸ್ಥಾನ ʼ : NCRB ಅಂಕಿ – ಅಂಶಗಳು ಬಹಿರಂಗ

ಸುಪ್ರೀಂ ಕೋರ್ಟ್ ನ ದ್ವಿಸದಸ್ಯ ನ್ಯಾಯಪೀಠವು, ಈದ್ಗಾ ಮೈದಾನದಲ್ಲಿ ಕರ್ನಾಟಕ ಹೈಕೋರ್ಟ್ ನೀಡಿದ್ದಂತ ಗಣೇಶೋತ್ಸವ ಆಚರಣೆಗೆ ಮಧ್ಯಂತರ ಆದೇಶದ ಮೂಲಕ ತಡೆ ನೀಡಲು ನಿರಾಕರಿಸಿತ್ತು. ಹೀಗಾಗಿ ಈಗ ಸುಪ್ರೀಂ ಕೋರ್ಟ್ ನ ಸಿಐಜೆ ನೇತೃತ್ವದ ತ್ರಿಸದಸ್ಯ ಪೀಠಕ್ಕೆ ವರ್ಗಾವಣೆಗೊಂಡಿದೆ.

BIGG NEWS : ‘IDBI ಬ್ಯಾಂಕ್‌’ನಲ್ಲಿನ ‘ಸರ್ಕಾರದ ಷೇರು’ ಮಾರಾಟಕ್ಕೆ ಸಕಲ ಸಿದ್ಧತೆ ; ಶೀಘ್ರ ‘ಪ್ರಾಥಮಿಕ ಬಿಡ್’ ಆಹ್ವಾನ

ಇದೀಗ ಈದ್ಗಾ ಮೈದಾನ ವಿವಾದದ ಕೇಸ್ ಸುಪ್ರೀಂ ಕೋರ್ಟ್ ನ ಸಿಐಜೆ ನೇತೃತ್ವದ ತ್ರಿಸದಸ್ಯ ನ್ಯಾಯಪೀಠಕ್ಕೆ ವರ್ಗಾವಣೆಗೊಂಡ ಕಾರಣ, ಕೋರ್ಟ್ ಹಾಲ್ 1ರಲ್ಲಿ ಪ್ರಸ್ತಾಪಿಸಲು ಕರ್ನಾಟಕ ಸರ್ಕಾರದ ಪರ ವಕೀಲ ತುಷಾರ್ ಮೆಹ್ತಾ, ವಕ್ಫ್ ಬೋರ್ಡ್ ಪರವಾಗಿ ಕಪಿಲ್ ಸಿಬಲ್ ಆಗಮಿಸಿದ್ದಾರೆ. ಕೆಲವೇ ಕ್ಷಣಗಳಲ್ಲಿ ಸುಪ್ರೀಂ ಕೋರ್ಟ್ ನ ಸಿಐಜೆ ನ್ಯಾಯಪೀಠದಲ್ಲಿ ಈದ್ಗಾ ಮೈದಾನ ವಿವಾದ ವಿಚಾರಣೆ ಆರಂಭಗೊಳ್ಳಲಿದೆ ಎನ್ನಲಾಗುತ್ತಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.

BREAKING NEWS : ಉತ್ತರಾಖಂಡ್ ಟ್ರಾನ್ಸಿಟ್ ಕ್ಯಾಂಪ್‌ನಲ್ಲಿ ‘ಗ್ಯಾಸ್ ಸೋರಿಕೆ’ ; 20ಕ್ಕೂ ಹೆಚ್ಚು ಜನ ಆಸ್ಪತ್ರೆಗೆ ದಾಖಲು |Gas Leak

Share.
Exit mobile version