ನವದೆಹಲಿ : ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ (CISCE) ICSE 10 ನೇ ತರಗತಿ ಫಲಿತಾಂಶಗಳನ್ನು ಇಂದು ಸಂಜೆ 5 ಗಂಟೆಗೆ ಪ್ರಕಟಿಸಲಿದೆ.

ಫಲಿತಾಂಶ ಪ್ರಕಟಿಸುವುದಾಗಿ ಮಂಡಳಿಯ ಕಾರ್ಯದರ್ಶಿ ಗೆರ್ರಿ ಅರಾಥೂನ್ ಶನಿವಾರ ಮಾಹಿತಿ ನೀಡಿದ್ದರು.

ವಿದ್ಯಾರ್ಥಿಗಳು ಮಂಡಳಿಯ ಅಧಿಕೃತ ವೆಬ್‌ಸೈಟ್ www.cisce.org ಅಥವಾ www.results.cisce.org ಗೆ ಭೇಟಿ ನೀಡುವ ಮೂಲಕ ಫಲಿತಾಂಶವನ್ನು ನೋಡಬಹುದು.

ಅಧಿಕೃತ ವೆಬ್‌ಸೈಟ್‌ನ ಹೊರತಾಗಿ, ವಿದ್ಯಾರ್ಥಿಗಳು ತಮ್ಮ 10 ನೇ ತರಗತಿಯ ಫಲಿತಾಂಶಗಳನ್ನು ಇಲ್ಲಿ ಸಹ ಪರಿಶೀಲಿಸಬಹುದು: results.cisce.org, results.nic.in.

ಸಿಐಎಸ್‌ಇ ತರಗತಿ 10ನೇ ತರಗತಿ ಫಲಿತಾಂಶ ಪರಿಶೀಲಿಸುವುದು ಹೇಗೆ..?

ಹಂತ 1: ಕೌನ್ಸಿಲ್‌ನ ವೆಬ್ಸೈಟ್‌ ಮುಖಪುಟದಲ್ಲಿ, ‘ಫಲಿತಾಂಶಗಳು 2022’ ಲಿಂಕ್ ಕ್ಲಿಕ್ ಮಾಡಿ
ಹಂತ 2: ಐಸಿಎಸ್ಇ / ಐಎಸ್ಸಿ ವರ್ಷ 2022 ರ ಪರೀಕ್ಷಾ ಫಲಿತಾಂಶಗಳನ್ನ ಪ್ರವೇಶಿಸಲು, ಅಭ್ಯರ್ಥಿಯು ಕೋರ್ಸ್ ಆಯ್ಕೆಯಿಂದ ಅನ್ವಯವಾಗುವಂತೆ ಐಸಿಎಸ್ಇ ಆಯ್ಕೆ ಮಾಡಬೇಕು.
ಹಂತ 3: ಐಸಿಎಸ್ಇ ವರ್ಷ 2022ರ ಪರೀಕ್ಷಾ ಫಲಿತಾಂಶಗಳನ್ನ ಪ್ರವೇಶಿಸಲು, ಅಭ್ಯರ್ಥಿಯು ಅವನ / ಅವಳ ವಿಶಿಷ್ಟ ಐಡಿ, ಸೂಚ್ಯಂಕ ಸಂಖ್ಯೆಯನ್ನ ನಮೂದಿಸಬೇಕು. ನಂತ್ರ ಪರದೆಯ ಮೇಲೆ ತೋರಿಸಿರುವಂತೆ ಕ್ಯಾಪ್ಚಾ ನಮೂದಿಸಿ.
ಹಂತ 4: ಈಗ ಪರದೆಯ ಮೇಲೆ ಫಲಿತಾಂಶ ಕಾಣಿಸುತ್ತೆ.

ನಿಮ್ಮ ಮೊಬೈಲ್‌ನಲ್ಲಿ ICSE ಫಲಿತಾಂಶ 2022 ನೋಡಲಿ ಹೀಗೆ ಮಾಡಿ…

ನಿಮ್ಮ ಮೊಬೈಲ್‌ನಲ್ಲಿ ICSE<Space><Unique Id> ಗೆ 09248082883 ಟೈಪ್‌ ಮಾಡುವ ಮೂಲಕ ನೋಡಬಹುದು.

BREAKING NEWS : ಮಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು : ಪೊಲೀಸರಿಂದ ನಟೋರಿಯಸ್ ರೌಡಿಶೀಟರ್ ಮೇಲೆ ಫೈರಿಂಗ್!

BIGG BREAKING NEWS : ದೇಶದಲ್ಲಿ ಮತ್ತೆ ಕೊಂಚ ಏರಿಕೆ ಕಂಡ ಕೊರೊನಾ : 24 ಗಂಟೆಯಲ್ಲಿ 20,528 ಕೇಸ್ ಪತ್ತೆ

Share.
Exit mobile version