ಸುಭಾಷಿತ :

Saturday, December 7 , 2019 6:56 PM

ಈ ಫೆಂಗ್‌ ಫೂ ವಿಧಾನ ಬಳಸಿದ್ರೆ ನೂರಾರು ಸಮಸ್ಯೆಗಳೆಲ್ಲಾ ದೂರ…


Sunday, December 1st, 2019 10:26 am

ಸ್ಪೆಷಲ್ ಡೆಸ್ಕ್ : ಚೀನಾದ ಒಂದು ಪ್ರಸಿದ್ಧ ಸಾಂಪ್ರದಾಯಿಕ ಮಸಾಜ್ ಮಾಡುವ ವಿಧಾನ ಎಂದರೆ ಕುತ್ತಿಗೆಯಾ ಹಿಂದಿನ ಭಾಗದಲ್ಲಿ ಕೆಳಗೆ ಐಸ್ ಕ್ಯೂಬ್ ಇಟ್ಟು ಮಸಾಜ್ ಮಾಡುವುದು. ಚೀನಾದಲ್ಲಿ ಇದನ್ನು ‘ಫೆಂಗ್‌ ಫೂ’ ಎನ್ನಲಾಗುತ್ತದೆ. ಇದನ್ನು ಮಾಡಿದರೆ ಹಲವು ಸಮಸ್ಯೆಗಳಿಗೆ ಶೀಘ್ರ ಪರಿಣಾಮ ದೊರೆಯುತ್ತದೆ.

ಯಾವೆಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ?
ಫೆಂಗ್‌ ಫೂ ವಿಧಾನದಿಂದ ಸ್ಟ್ರೆಸ್‌ ದೂರವಾಗುತ್ತದೆ. ಇದರಿಂದ ರಾತ್ರಿ ಚೆನ್ನಾಗಿ ನಿದ್ರೆ ಬರುತ್ತದೆ.
ಥೈರಾಯ್ಡ್‌ಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳು ಕಂಟ್ರೋಲ್‌ ಆಗುತ್ತವೆ.
ಫೆಂಗ್‌ ಫೂ ವಿಧಾನದಿಂದ ಮಲಬದ್ಧತೆ ಮತ್ತು ಆಸಿಡಿಟಿ ಸಮಸ್ಯೆಗಳು ದೂರವಾಗುತ್ತವೆ.  ಜೀರ್ಣಕ್ರಿಯೆ
ಸುಧಾರಣೆಯಾಗುತ್ತದೆ.
ರೆಗ್ಯುಲರ್‌ ಆಗಿ ಫೆಂಗ್‌ ಫೂ ವಿಧಾನ ಮಾಡುವುದರಿಂದ ಗಂಟುಗಳಲ್ಲಿ ಕಾಣಿಸಿಕೊಳ್ಳುವ ನೋವಿನಿಂದ ಮುಕ್ತಿ ಸಿಗುತ್ತದೆ. ಇದರಿಂದ ಅರ್ಥಾರಾಯಿಟ್ಸ್‌ ಸಮಸ್ಯೆ ಕಂಟ್ರೋಲ್‌ ಆಗುತ್ತದೆ.
ಸರಿಯಾಗಿ ಉಸಿರಾಟ ಕ್ರಿಯೆ ನಡೆಸಲು ಸಾಧ್ಯವಿಲ್ಲದೆ ಇರುವವರಿಗೂ ಸಹ ಫೆಂಗ್‌ ಫೂ ವಿಧಾನ ಆರಾಮ ನೀಡುತ್ತದೆ. ಇದರಿಂದ ಅಸ್ತಮಾ ಸಮಸ್ಯೆ ದೂರವಾಗುತ್ತದೆ.
ಇದರಿಂದ ದೇಹದಲ್ಲಿ ರಕ್ತ ಸಂಚಾರ ಚೆನ್ನಾಗಿ ಆಗುತ್ತದೆ. ಇದರಿಂದ ದೇಹದ ಎಲ್ಲಾ ಅಂಗಗಳಿಗೆ, ಮಾಂಸಖಂಡಗಳಿಗೆ ರಿಲ್ಯಾಕ್ಸ್‌ ಸಿಗುತ್ತದೆ.
ಇದರಿಂದ ಮಹಿಳೆಯರಿಗೂ ಹಲವಾರು ಲಾಭವಿದೆ. ಈ ಮಸಾಜ್‌ ಮಾಡುತ್ತಿದ್ದರೆ ಇನ್‌ಫರ್ಟಿಲಿಟಿ ಸಮಸ್ಯೆ ನಿವಾರಣೆಯಾಗುತ್ತದೆ.
ಫೆಂಗ್‌ ಫೂ ವಿಧಾನದಿಂದ ಮಹಿಳೆಯರ ರಿಪ್ರೊಡಕ್ಟಿವ್‌ ಸಿಸ್ಟಮ್‌ ಸುಧಾರಣೆಯಾಗುತ್ತದೆ. ಇದರಿಂದ ಪಿಎಂಎಸ್‌ ಸಮಸ್ಯೆ ಕಡಿಮೆಯಾಗುತ್ತದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions