ನವದೆಹಲಿ: ಮಾರ್ಚ್ 4 ಮತ್ತು ಏಪ್ರಿಲ್ 3ರ ನಡುವೆ ನ್ಯೂಜಿಲ್ಯಾಂಡ್ ನಲ್ಲಿ ನಡೆಯಲಿರುವ ಐಸಿಸಿ ಮಹಿಳಾ ವಿಶ್ವಕಪ್ 2022ಕ್ಕೆ ( ICC Women’s World Cup 2022 ) 15 ಸದಸ್ಯರ ತಂಡವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (Board of Control for Cricket in India – BCCI) ಗುರುವಾರ ಪ್ರಕಟಿಸಿದೆ. ಮಿಥಾಲಿ ರಾಜ್ ( Mithali Raj ) ಭಾರತವನ್ನು ಮುನ್ನಡೆಸಲಿದ್ದು, ಹರ್ಮನ್ ಪ್ರೀತ್ ಕೌರ್ ( Harmanpreett Kaur ) ವಿಶ್ವಕಪ್ ನಲ್ಲಿ ( World Cup ) ಅವರು ಉಪನಾಯಕರಾಗಿ ತಂಡದಲ್ಲಿದ್ದಾರೆ.
ಅಖಿಲ ಭಾರತ ಮಹಿಳಾ ಹಿರಿಯ ಆಯ್ಕೆ ಸಮಿತಿಯು ಬುಧವಾರ ನ್ಯೂಜಿಲ್ಯಾಂಡ್ ಪ್ರವಾಸ ಮತ್ತು ಶೋಪೀಸ್ ಕಾರ್ಯಕ್ರಮಕ್ಕೆ ತಂಡಗಳನ್ನು ಆಯ್ಕೆ ಮಾಡಿದೆ ಎಂದು ಬಿಸಿಸಿಐ ಹೇಳಿಕೆ ತಿಳಿಸಿದೆ.
ತಂಡದಿಂದ ಗೈರುಹಾಜರಾದ ವರಲ್ಲಿ ವೇಗದ ಬೌಲರ್ ಶಿಖಾ ಪಾಂಡೆ ಮತ್ತು ಫಾರ್ಮ್ ನಲ್ಲಿರುವ ಬ್ಯಾಟರ್ ಜೆಮಿಮಾ ರೊಡ್ರಿಗಸ್ ಸೇರಿದ್ದಾರೆ. ವಿಶ್ವಕಪ್ ಗೆ ಹೋಗುವ ತಂಡವು ಫೆಬ್ರವರಿಯಲ್ಲಿ ನ್ಯೂಜಿಲ್ಯಾಂಡ್ ನಲ್ಲಿ 5 ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ.
ಭಾರತವು ಮಾರ್ಚ್ 6 ರಂದು ಮೌಂಟ್ ಮೌಂಗನುಯಿಯಲ್ಲಿರುವ ಬೇ ಓವಲ್ ನಲ್ಲಿ ಬದ್ಧ ವೈರಿಗಳಾದ ಪಾಕಿಸ್ತಾನದ ವಿರುದ್ಧ ವಿಶ್ವಕಪ್ ಪಂದ್ಯಾವಳಿಯನ್ನು ಪ್ರಾರಂಭಿಸಲಿದೆ. ಪಂದ್ಯಾವಳಿಯ ನಾಕೌಟ್ ಹಂತಗಳಿಗೆ ಮೊದಲು ಭಾರತವು ರೌಂಡ್-ರಾಬಿನ್ ಸ್ವರೂಪದಲ್ಲಿ 7 ಪಂದ್ಯಗಳನ್ನು ಆಡಲಿದೆ. ಗಮನಾರ್ಹವಾಗಿ, ಮಿಥಾಲಿ ರಾಜ್ 2017 ರಲ್ಲಿ ನಡೆದ ಹಿಂದಿನ ಮಹಿಳಾ ವಿಶ್ವಕಪ್ ನ ಫೈನಲ್ ಗೆ ಭಾರತವನ್ನು ಮುನ್ನಡೆಸಿದರು. ಸೆಮಿ ಫೈನಲ್ ನಲ್ಲಿ ಪವರ್ ಹೌಸ್ ಆಸ್ಟ್ರೇಲಿಯಾವನ್ನು ಸೋಲಿಸಿದ ನಂತರ ಭಾರತ ಫೈನಲ್ ನಲ್ಲಿ ಇಂಗ್ಲೆಂಡ್ ವಿರುದ್ಧ ಸೋತಿತು.
ಹೀಗಿದೆ.. ನ್ಯೂಜಿಲ್ಯಾಂಡ್ ಏಕದಿನ ಮತ್ತು ಮಹಿಳಾ ವಿಶ್ವಕಪ್ 2022ರ ಭಾರತ ತಂಡ ಪಟ್ಟಿ
ಮಿಥಾಲಿ ರಾಜ್ (ನಾಯಕ), ಹರ್ಮನ್ ಪ್ರೀತ್ ಕೌರ್ (ಉಪನಾಯಕ), ಸ್ಮೃತಿ ಮಂಧಾನಾ, ಶಫಾಲಿ ವರ್ಮಾ, ಯಾಸ್ತಿಕಾ ಭಾಟಿಯಾ, ದೀಪ್ತಿ ಶರ್ಮಾ, ರಿಚಾ ಘೋಷ್ (ವಿಕೆಟ್ ಕೀಪರ್), ಸ್ನೇಹ್ ರಾಣಾ, ಜುಲನ್ ಗೋಸ್ವಾಮಿ, ಪೂಜಾ ವಸ್ತ್ರಕರ್, ಮೇಘನಾ ಸಿಂಗ್, ರೇಣುಕಾ ಸಿಂಗ್ ಠಾಕೂರ್, ತನಿಯಾ ಭಾಟಿಯಾ (ವಿಕೆಟ್ ಕೀಪರ್), ರಾಜೇಶ್ವರಿ ಗಾಯಕವಾಡ್, ಪೂನಮ್ ಯಾದವ್.
ಸ್ಟ್ಯಾಂಡ್ ಬೈ ಆಟಗಾರರು: ಎಸ್. ಮೇಘನಾ, ಏಕ್ತಾ ಬಿಷ್ಟ್, ಸಿಮ್ರಾನ್ ದಿಲ್ ಬಹದ್ದೂರ್.
ನ್ಯೂಜಿಲ್ಯಾಂಡ್ ನಲ್ಲಿ ನಡೆದ ಟಿ20 ಪಂದ್ಯಗಳಿಗೆ ಭಾರತ ತಂಡ
ಹರ್ಮನ್ ಪ್ರೀತ್ ಕೌರ್ (ನಾಯಕ), ಸ್ಮೃತಿ ಮಂಧಾನಾ (ಉಪನಾಯಕ), ಶಫಾಲಿ ವರ್ಮಾ, ಯಾಸ್ತಿಕಾ ಭಾಟಿಯಾ, ದೀಪ್ತಿ ಶರ್ಮಾ, ರಿಚಾ ಘೋಷ್ (ವಿಕೆಟ್ ಕೀಪರ್), ಸ್ನೇಹ್ ರಾಣಾ, ಪೂಜಾ ವಸ್ತ್ರಕರ್, ಮೇಘನಾ ಸಿಂಗ್, ರೇಣುಕಾ ಸಿಂಗ್ ಠಾಕೂರ್, ತನಿಯಾ ಭಾಟಿಯಾ (ವಿಕೆಟ್ ಕೀಪರ್), ರಾಜೇಶ್ವರಿ ಗಾಯಕ್ ವಾಡ್, ಪೂನಮ್ ಯಾದವ್, ಏಕ್ತಾ ಬಿಷ್ಟ್, ಎಸ್.ಮೇಘನಾ, ಸಿಮ್ರಾನ್ ದಿಲ್ ಬಹದ್ದೂರ್.