ಟ್ರಿನಿಡಾ:ಭಾರತದ ಆರಂಭಿಕರಾದ ಅಂಗ್ಕ್ರಿಶ್ ರಘುವಂಶಿ ಮತ್ತು ರಾಜ್ ಬಾವಾ ಅವರು ಐಸಿಸಿ U19 ವಿಶ್ವಕಪ್ 2022 ರಲ್ಲಿ ಉಗಾಂಡಾ ವಿರುದ್ಧ ಭಾರತ U19 ಬೃಹತ್ ಮೊತ್ತವನ್ನು ಗಳಿಸಲು ಸಹಾಯ ಮಾಡಿದರು.ಈ ಮೂಲಕ ಉಗಾಂಡದ ವಿರುದ್ದ ಭಾರತ ಗೆಲುವು ಸಾಧಿಸಿತು.
ಟ್ರಿನಿಡಾದ ಬ್ರಿಯಾನ್ ಲಾರಾ ಸ್ಟೇಡಿಯಂನಲ್ಲಿ ಇಲ್ಲಿ ನಡೆದ ಐಸಿಸಿ U19 ವಿಶ್ವಕಪ್ 2022 ರ 22 ನೇ ಪಂದ್ಯದಲ್ಲಿ ಅಂಗ್‌ಕ್ರಿಶ್ ರಘುವಂಶಿ ಮತ್ತು ರಾಜ್ ಬಾವಾ ಅವರ ಶತಕಗಳ ನೆರವಿನಿಂದ ಮತ್ತು ನಾಯಕ ನಿಶಾಂತ್ ಸಿಂಧು ಅವರ ಉತ್ತಮ ಬೌಲಿಂಗ್ ನಿಂದ ಭಾರತ U19 326 ರನ್‌ಗಳಿಂದ ಉಗಾಂಡಾವನ್ನು ಸೋಲಿಸಿತು.
ಆರಂಭಿಕ ಬ್ಯಾಟ್ಸ್‌ಮನ್ ರಘುವಂಶಿ 120 ಎಸೆತಗಳಲ್ಲಿ 22 ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳ ಸಹಾಯದಿಂದ 144 ರನ್ ಗಳಿಸಿದರೆ, ಬಾವಾ ಕೇವಲ 102 ಎಸೆತಗಳಲ್ಲಿ 162 ರನ್ ಗಳಿಸಿದರು. ಅವರು ತಮ್ಮ ಇನ್ನಿಂಗ್ಸ್‌ನಲ್ಲಿ 14 ಬೌಂಡರಿಗಳು ಮತ್ತು ಎಂಟು ಸಿಕ್ಸರ್ ಗಳನ್ನು ಹೊಡೆದರು.