ಕೆಎನ್‌ಎನ್‌ಡಿಜಿಟಲ್‌ ಡೆಸ್ಕ್‌ : ಟೀಂ ಇಂಡಿಯಾ ಬ್ಯಾಟ್ಸ್ ಮ್ಯಾನ್ ರಿಷಬ್ ಪಂತ್ ಇತ್ತೀಚಿನ ಐಸಿಸಿ ಟೆಸ್ಟ್ ಶ್ರೇಯಾಂಕವನ್ನ ಗೆದ್ದಿದ್ದಾರೆ. ಹೌದು, ಐದು ಸ್ಥಾನ ಮೇಲೇರಿ ಐದನೇ ಸ್ಥಾನಕ್ಕೆ ಜಿಗಿದಿದ್ದಾರೆ. ಇಂಗ್ಲೆಂಡ್ ವಿರುದ್ಧ ಎಡ್ಜ್‌ಬಾಸ್ಟನ್‌ನಲ್ಲಿ ಮರುನಿಗದಿಯಾಗಿದ್ದ ಟೆಸ್ಟ್‌ನಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಪಂಥ್ ಅದ್ಭುತ ಪ್ರದರ್ಶನ ತೋರಿದ್ದು ಗೊತ್ತೇ ಇದೆ. ಅದ್ರಂತೆ ಪಂಥ್ ಮೊದಲ ಇನ್ನಿಂಗ್ಸ್‌ನಲ್ಲಿ ಶತಕ (146 ರನ್) ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ ಅರ್ಧ ಶತಕ (57 ರನ್) ಗಳಿಸಿದರು.

ಈ ಕ್ರಮದಲ್ಲಿ ತಮ್ಮ ಖಾತೆಯಲ್ಲಿ 801 ಅಂಕ ಗಳಿಸಿದ ಪಂತ್ ಟಾಪ್-5ರೊಳಗೆ ಜಿಗಿದಿದ್ದಾರೆ. ಮತ್ತೊಂದೆಡೆ, ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅಗ್ರ-10ರಲ್ಲಿರುವ ಏಕೈಕ ಭಾರತೀಯ ಆಟಗಾರರಾಗಿದ್ದಾರೆ. ಅಂದ್ಹಾಗೆ, ಈ ಪಂದ್ಯದಲ್ಲಿ ವಿಫಲರಾಗಿದ್ದ ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ನಾಲ್ಕು ಸ್ಥಾನ ಕುಸಿದು 13ನೇ ರ‍್ಯಾಂಕ್‌ಗೆ ತಲುಪಿದ್ದಾರೆ.

ಏತನ್ಮಧ್ಯೆ, ಎಡ್ಜ್‌ಬಾಸ್ಟನ್‌ನಲ್ಲಿ ಧೂಳೆಬ್ಬಿಸಿದ ಇಂಗ್ಲೆಂಡ್ ಟೆಸ್ಟ್ ತಂಡದ ಮಾಜಿ ನಾಯಕ ಜೋ ರೂಟ್ 923 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ. ಶತಕದ ಮೂಲಕ ಮೋಡಿ ಮಾಡಿದ ಜಾನಿ ಬೈರ್‌ಸ್ಟೋವ್ 11 ಸ್ಥಾನ ಮೇಲಕ್ಕೇರಿದ್ದಾರೆ. ಅವರು ಹತ್ತನೇ ರ್ಯಾಂಕ್ ಪಡೆದರು. ಟೀಂ ಇಂಡಿಯಾ ವಿರುದ್ಧದ ಮರು ನಿಗದಿತ ಟೆಸ್ಟ್ʼನಲ್ಲಿ ಇಂಗ್ಲೆಂಡ್ ಏಳು ವಿಕೆಟ್ʼಗಳ ಜಯ ಸಾಧಿಸಿದ್ದು ಗೊತ್ತೇ ಇದೆ. ಇದರೊಂದಿಗೆ ಐದು ಪಂದ್ಯಗಳ ಟೆಸ್ಟ್ ಸರಣಿ 2-2ರಲ್ಲಿ ಸಮಬಲ ಸಾಧಿಸಿದೆ.

Share.
Exit mobile version