ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಜಿಂಬಾಬ್ವೆ ತಂಡವನ್ನ ಬಗ್ಗು ಬಡೆಯುವ ಮೂಲಕ ಭಾರತ ಟಿ20 ವಿಶ್ವಕಪ್’ನಲ್ಲಿ ಸೆಮಿಫೈನಲ್’ಗೆ ಎಂಟ್ರಿಯಾಗಿದೆ. ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಭಾರತ 71 ರನ್‌ಗಳ ಜಯ ಸಾಧಿಸುವ ಮೂಲಕ ಭಾರತ ಹೆಚ್ಚು ಅಂಕಗಳನ್ನ ಗಳಿಸಿ ಸೆಮಿಫೈನಲ್ ತಲುಪಿದೆ.

ಜಿಂಬಾಬ್ವೆ ವಿರುದ್ಧದ ಭಾರತ ಪಂದ್ಯವು ಆಸ್ಟ್ರೇಲಿಯಾದ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯಿತು. ಇದರಲ್ಲಿ ಕೆಎಲ್ ರಾಹುಲ್ ಮತ್ತು ಸೂರ್ಯಕುಮಾರ್ ಯಾದವ್ ಅವರ ಅರ್ಧಶತಕಗಳ ಬಲದಿಂದ ಭಾರತ ಸ್ಕೋರ್‌ಬೋರ್ಡ್‌ನಲ್ಲಿ 186 ರನ್ ಗಳಿಸಿತು. ಅದರ ನಂತರ ಭಾರತ ಅದ್ಭುತವಾಗಿ ಬೌಲಿಂಗ್ ಮಾಡಿ ಜಿಂಬಾಬ್ವೆಯನ್ನ ಕೇವಲ 115 ರನ್‌ಗಳಿಗೆ ಆಲೌಟ್ ಮಾಡಿ 71 ರನ್‌ಗಳಿಂದ ಗೆದ್ದಿತು. ಈ ಗೆಲುವಿನೊಂದಿಗೆ ಭಾರತವು ಪಾಯಿಂಟ್ ಪಟ್ಟಿಯಲ್ಲಿ 8 ಅಂಕಗಳನ್ನ ಹೊಂದಿದೆ. ಈ ಮೂಲಕ ಭಾರತವು ಎರಡೂ ಗುಂಪುಗಳ ತಂಡಗಳಲ್ಲಿ ಹೆಚ್ಚಿನ ಅಂಕಗಳನ್ನ ಹೊಂದಿದೆ. ಭಾರತವು ಕೇವಲ ಒಂದು ಲೀಗ್ ಪಂದ್ಯದಲ್ಲಿ (ದಕ್ಷಿಣ ಆಫ್ರಿಕಾ ವಿರುದ್ಧ) ಸೋತಿದ್ರೆ, ಉಳಿದೆಲ್ಲಾ ಪಂದ್ಯಗಳನ್ನ ಗೆದ್ದಿದೆ.

 

HAIR CARE TIPS: ಚಳಿಗಾಲದಲ್ಲಿ ಕಾಡುವ ‘ತಲೆಹೊಟ್ಟಿನ’ ಸಮಸ್ಯೆಗೆ ಇಲ್ಲಿವೆ ಸಿಂಪಲ್ ಮನೆಮದ್ದುಗಳು| Dandruff

‘I’ve Made This Gujarat’ ; ಗುಜರಾತ್ನಲ್ಲಿ ‘ಹೊಸ ಚುನಾವಣಾ ಘೋಷಣೆ’ಗೆ ಪ್ರಧಾನಿ ಮೋದಿ ಚಾಲನೆ

BREAKING NEWS : ನಾಳೆಯಿಂದ ಬಿಜೆಪಿ ‘ಜನಸಂಕಲ್ಪ ಯಾತ್ರೆ’ ಆರಂಭ ; ಈ ಜಿಲ್ಲೆಗಳಲ್ಲಿ ಮೂರು ದಿನ ಮೊಳಗಿಲಿದೆ ‘ಕೇಸರಿ ಕಹಳೆ’

Share.
Exit mobile version