ನವದೆಹಲಿ : ಭಾರತದ ಮಾಜಿ ಮತ್ತು ಪ್ರಸ್ತುತ ನಾಯಕರಾದ ವಿರಾಟ್ ಕೊಹ್ಲಿ(Virat Kohli) ಮತ್ತು ರೋಹಿತ್ ಶರ್ಮಾ(Rohit Sharma) ಅವ್ರು ಐಸಿಸಿ ಪುರುಷರ ಏಕದಿನ ಆಟಗಾರರ ಶ್ರೇಯಾಂಕ(ICC ODI Rankings)ದಲ್ಲಿ ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನವನ್ನ ಕಾಯ್ದುಕೊಂಡಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ನವೀಕರಿಸಿದ ಶ್ರೇಯಾಂಕಗಳ ಪ್ರಕಾರ, ದಕ್ಷಿಣ ಆಫ್ರಿಕಾ ಬ್ಯಾಟರ್ʼಗಳಾದ ಕ್ವಿಂಟನ್ ಡಿ ಕಾಕ್(Quinton de Kock) ಮತ್ತು ರಾಸ್ಸೀ ವ್ಯಾನ್ ಡೆರ್ ಡುಸೆನ್(Rassie van der Dussen) ಅವರು ಭಾರತದ ವಿರುದ್ಧ ಸ್ಮರಣೀಯ 3-0 ಸರಣಿ ಗೆಲುವು ಪೂರ್ಣಗೊಳಿಸಲು ತಮ್ಮ ತಂಡಕ್ಕೆ ಸಹಾಯ ಮಾಡಿದ ನಂತ್ರ ಚಾರ್ಟ್ʼನಲ್ಲಿ ಭಾರಿ ಲಾಭ ಗಳಿಸಿದ್ದಾರೆ.
ಕೇಪ್ ಟೌನ್ʼನಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಪಂದ್ಯ ವಿಜೇತ 124 ರನ್ʼಗಳನ್ನ ಒಳಗೊಂಡ 229 ರನ್ʼಗಳನ್ನು ಒಟ್ಟುಗೂಡಿಸಿದ ನಂತ್ರ ಡಿ ಕಾಕ್ 2019ರ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ನಂತರ ಮೊದಲ ಐದು ಸ್ಥಾನಗಳಲ್ಲಿದ್ದಾರೆ. ಇನ್ನು ವಿಕೆಟ್ ಕೀಪರ್-ಬ್ಯಾಟರ್ ತಮ್ಮ ಪ್ಲೇಯರ್ ಆಫ್ ದಿ ಸೀರೀಸ್ ಪ್ರಯತ್ನದ ನಂತ್ರ ನಾಲ್ಕು ಸ್ಥಾನ ಮೇಲೇರಿದ್ದಾರೆ.
218 ರನ್ ಗಳಿಸಿದ ವ್ಯಾನ್ ಡೆರ್ ಡೆನ್ 10 ಸ್ಥಾನ ಮುನ್ನಡೆದು ವೃತ್ತಿಜೀವನದ ಅತ್ಯುತ್ತಮ 10ನೇ ಸ್ಥಾನವನ್ನು ತಲುಪಿದ್ದಾರೆ. ನಾಯಕ ತೆಂಬಾ ಬಾವುಮಾ ಕೂಡ ಭಾರಿ ಪ್ರಗತಿ ಸಾಧಿಸಿದ್ದಾರೆ. ಇತ್ತೀಚಿನ ಸಾಪ್ತಾಹಿಕ ನವೀಕರಣಕ್ಕೆ ಮೊದಲು 80ನೇ ಸ್ಥಾನದಿಂದ ವೃತ್ತಿಜೀವನದ ಅತ್ಯುತ್ತಮ 59ನೇ ಸ್ಥಾನವನ್ನ ತಲುಪಿದ್ದಾರೆ. ಇದು ಆಫ್ಘಾನಿಸ್ತಾನ-ನೆದರ್ಲ್ಯಾಂಡ್ಸ್ ಸರಣಿ ಮತ್ತು ಶ್ರೀಲಂಕಾ-ಜಿಂಬಾಬ್ವೆ ಸರಣಿಯ ಕೊನೆಯ ಪಂದ್ಯವನ್ನ ಸಹ ಒಳಗೊಂಡಿದೆ.
ದಕ್ಷಿಣ ಆಫ್ರಿಕಾ ವಿರುದ್ಧ 169 ರನ್ʼಗಳೊಂದಿಗೆ ಭಾರತದ ಪರ ಪ್ರಮುಖ ಸ್ಕೋರರ್ ಆಗಿರುವ ಆರಂಭಿಕ ಆಟಗಾರ ಶಿಖರ್ ಧವನ್ ಒಂದು ಸ್ಥಾನ ಮೇಲಕ್ಕೆ ಜಿಗಿದಿದ್ದಾರೆ. ಇನ್ನು ರಿಷಬ್ ಪಂತ್ ಐದು ಸ್ಥಾನ ಮೇಲೇರಿ 82ನೇ ಸ್ಥಾನದಲ್ಲಿದ್ದಾರೆ.
ಅನ್ನದಾತರೇ, ನೀವು ಈ 6 ತಿಂಗಳ ಬೆಳೆ ಬೆಳೆದ್ರೆ, 70% ರಿಂದ 80% ಲಾಭ ಪಡೆಯ್ಬೋದು.. ಸರ್ಕಾರವೂ ಸಬ್ಸಿಡಿ ನೀಡುತ್ತೆ.!!