IBM layoffs : 7 ನಿಮಿಷದ ಸಭೆಯಲ್ಲಿ ಉದ್ಯೋಗ ಕಡಿತ ಘೋಷಿಸಿದ ‘ಟೆಕ್ ದೈತ್ಯ IBM’

ನವದೆಹಲಿ : ಇಂಟರ್ನ್ಯಾಷನಲ್ ಬಿಸಿನೆಸ್ ಮೆಷಿನ್ಸ್ ಕಾರ್ಪೊರೇಷನ್ (IBM) ನಿರ್ದಿಷ್ಟ ಸಂಖ್ಯೆಯ ಉದ್ಯೋಗ ಕಡಿತದ ಬಗ್ಗೆ ಮಾಹಿತಿ ನೀಡದೆ ವಜಾಗೊಳಿಸುವುದಾಗಿ ಘೋಷಿಸಿದೆ ಎಂದು ವರದಿಯಾಗಿದೆ. ಐಬಿಎಂ ಕಂಪನಿಯ ಮಾರ್ಕೆಟಿಂಗ್ ಮತ್ತು ಸಂವಹನ ವಿಭಾಗದ ಉದ್ಯೋಗಿಗಳನ್ನ ವಜಾಗೊಳಿಸಿದೆ ಎಂದು ವರದಿಯಾಗಿದೆ. ಐಬಿಎಂನ ಮುಖ್ಯ ಸಂವಹನ ಅಧಿಕಾರಿ ಜೊನಾಥನ್ ಅಡಾಶೆಕ್ ಅವರು ಇಲಾಖೆಯ ಉದ್ಯೋಗಿಗಳೊಂದಿಗೆ ಏಳು ನಿಮಿಷಗಳ ಸಭೆಯಲ್ಲಿ ವಜಾಗೊಳಿಸುವ ನಿರ್ಧಾರವನ್ನ ಬಹಿರಂಗಪಡಿಸಿದರು. ಕಂಪನಿಯು ಅಧಿಕೃತವಾಗಿ ಮಾಹಿತಿಯನ್ನ ಬಿಡುಗಡೆ ಮಾಡದಿದ್ದರೂ, ಅನಾಮಧೇಯ ಮೂಲಗಳನ್ನ ಉಲ್ಲೇಖಿಸಿ ಐಬಿಎಂ ವಜಾಗೊಳಿಸಿದೆ ಎಂದು ವರದಿಯಾಗಿದೆ. … Continue reading IBM layoffs : 7 ನಿಮಿಷದ ಸಭೆಯಲ್ಲಿ ಉದ್ಯೋಗ ಕಡಿತ ಘೋಷಿಸಿದ ‘ಟೆಕ್ ದೈತ್ಯ IBM’