ಪೊಲೀಸ್ ಗೌರವಗಳೊಂದಿಗೆ IAS ಅಧಿಕಾರಿ ಮಹಾಂತೇಶ್ ಬೀಳಗಿ ಅಂತ್ಯಕ್ರಿಯೆ: ಪ್ರಾಮಾಣಿಕ ಅಧಿಕಾರಿ ಇನ್ನೂ ನೆನಪು ಮಾತ್ರ

ಬೆಳಗಾವಿ: ನಿನ್ನೆ ಕಲಬುರ್ಗಿಯ ಜೇವರ್ಗಿ ಬಳಿಯಲ್ಲಿ ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸಾವನ್ನಪ್ಪಿದ್ದರು. ಅವರೊಂದಿಗೆ ಅವರ ಸಹೋದರರು ಸಾವನ್ನಪ್ಪಿದ್ದರು. ಪೊಲೀಸ್ ಗೌರವಗಳೊಂದಿಗೆ ಮಹಾಂತೇಶ್ ಬೀಳಗಿ ಅವರನ್ನು ರಾಮದುರ್ಗದ ಬಳಿ ಇರುವಂತ ಜಮೀನಿನಲ್ಲಿ ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು. ಬೆಳಗಾವಿ ಜಿಲ್ಲಯೆ ರಾಮದುರ್ಗದಲ್ಲಿ ಇರುವಂತ ಜಮೀನಿನಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿದಂತೆ ನಾಲ್ವರನ್ನು ಏಕಕಾಲಕ್ಕೆ ಅಂತ್ಯಕ್ರಿಯೆ ನೆರವೇರಿಸಲಾಯಿತು. ಮಹಾಂತೇಶ್ ಬೀಳಗಿ, ಸಹೋದರರಾದ ಶಂಕರ್, ಈರಣ್ಣ, ಸ್ನೇಹಿತ ಈರಣ್ಣ ಶರಸಂಗಿ ಅಂತ್ಯಕ್ರಿಯೆಯನ್ನು ಮಾಡಲಾಯಿತು.