ಕೇದಾರನಾಥ: 2018 ರಲ್ಲಿ ಅಪಘಾತಕ್ಕೀಡಾದ ‘IAF’ ಚಾಪರ್‌ನ ಅವಶೇಷ ಹೊತ್ತೊಯ್ದ ಚಿನೂಕ್ ಹೆಲಿಕಾಪ್ಟರ್ – Kannada News Now


India

ಕೇದಾರನಾಥ: 2018 ರಲ್ಲಿ ಅಪಘಾತಕ್ಕೀಡಾದ ‘IAF’ ಚಾಪರ್‌ನ ಅವಶೇಷ ಹೊತ್ತೊಯ್ದ ಚಿನೂಕ್ ಹೆಲಿಕಾಪ್ಟರ್

ಡಿಜಿಟಲ್ ಡೆಸ್ಕ್ :  2018 ರಲ್ಲಿ ಕೇದಾರನಾಥ ದೇವಸ್ಥಾನದ ಬಳಿ ಅಪಘಾತಕ್ಕೀಡಾದ ಭಾರತೀಯ ವಾಯುಪಡೆಯ ಎಂಐ -17 ಹೆಲಿಕಾಪ್ಟರ್‌ನ ಅವಶೇಷಗಳನ್ನು ಚಿನೂಕ್ ಹೆಲಿಕಾಪ್ಟರ್ ಶನಿವಾರ ತೆಗೆದಿದೆ.

ವರದಿಯ ಪ್ರಕಾರ 2018 ರಲ್ಲಿ ಕೇದಾರನಾಥ ದೇವಸ್ಥಾನದ ಬಳಿಯ ಹೆಲಿಪ್ಯಾಡ್‌ಗೆ ಇಳಿಯುವಾಗ ಕಬ್ಬಿಣದ ಗಿರ್ಡರ್‌ಗೆ ಡಿಕ್ಕಿ ಹೊಡೆದ ಹಿನ್ನೆಲೆಯಲ್ಲಿ ಎಂಐ -17 ಹೆಲಿಕಾಪ್ಟರ್‌ಗೆ ಬೆಂಕಿ ಕಾಣಿಸಿಕೊಂಡಿತ್ತು. ಐಎಎಫ್ ಹಾನಿಗೊಳಗಾದ ಎಂಐ -17 ಅನ್ನು ಅಲ್ಲಿಯೇ ಬಿಟ್ಟಿತ್ತು. ಈ ವೇಳೆ ಚಾಪರ್‌ನ ಪೈಲಟ್‌ಗೆ ಸಣ್ಣಪುಟ್ಟ ಗಾಯಗಳಾಗಿತ್ತು.

ಇದರ ನಡುವೆ ಚಿನೂಕ್ ಹೆಲಿಕಾಪ್ಟರ್ ನ್ನು ಕೇದಾರನಾಥದಲ್ಲಿ ನಿರ್ಮಾಣ ಕಾರ್ಯವನ್ನು ವೇಗಗೊಳಿಸಲು ಬಳಸಲಾಗುತ್ತದೆ. ಪುನರ್ನಿರ್ಮಾಣ ಕಾರ್ಯಕ್ಕೆ ಬಳಸುವ ಭಾರೀ ಯಂತ್ರಗಳನ್ನು ಸಾಗಿಸಲು ಭಾರತೀಯ ವಾಯುಪಡೆಯ ಭಾರೀ ಮಿಲಿಟರಿ ಹೆಲಿಕಾಪ್ಟರ್ ಚಿನೂಕ್ ಅನ್ನು ಬಳಸಲಾಗುತ್ತಿದೆ.

ಇನ್ಮುಂದೆ ‘ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗ’ಕ್ಕೆ ಆನ್ ಲೈನ್ ಮೂಲಕವೂ ದೂರು ಸಲ್ಲಿಸಬಹುದು
error: Content is protected !!