ಬೆಂಗಳೂರು : ಪುನೀತ್ ರಾಜ್ಕುಮಾರ್ ಆಭಿನಯದ ರಾಜಕುಮಾರ ಚಿತ್ರದಲ್ಲಿ ನಾಯಕಿ ನಟಿಯಾಗಿ ಆಭಿನಯಿಸಿದ್ದ ಪ್ರಿಯಾ ಆನಂದ್ ತನ್ನ ಮದುವೆಯಾಗುವ ಬಗ್ಗೆ ಸ್ಪೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ. ಇದೀಗ ಭಾರೀ ಚರ್ಚೆಗೆ ಗ್ರಾಸವಾಗುತ್ತಿದೆ.
ಹಾಗಾದ್ರೆ ಸಿನಿ ರಸಿಕರಿಗೆ ಪ್ರಿಯಾ ಆನಂದ್ ಮದುವೆ ಯಾಗೋ ಹುಡುಗ ಯಾರು ಅನ್ನೋದರ ಕುತೂಹಲ ಮೂಡುವುದು ಸಹಜ ಈ ಕುರಿತ ಕಂಪ್ಲೀಟ್ ಮಾಹಿತಿ ಇಲ್ಲಿದೆ ಓದಿ
ರಾಜಕುಮಾರ ಚಿತ್ರದಲ್ಲಿ ನಾಯಕಿ ನಟಿ ಪ್ರಿಯಾ ಆನಂದ್ ಮಾದ್ಯಮಗಳ ಸಂದರ್ಶನ ಮಾಡುವ ವೇಳೆ ಬಹಿರಂಗವಾಗಿ” ನಾನು ನಿತ್ಯಾನಂದ ಸ್ವಾಮೀಜಿಯನ್ನೇ ಮದ್ವೆ ಆಗುವೆ”ಎಂದು ತಿಳಿಸಿದ್ದಾರೆ ಎಂಬ ಮಾಹಿತಿ ಕೆಲ ಮೂಲಗಳಿಂದ ಬಹಿರಂಗವಾಗಿದೆ.
ನಿತ್ಯನಂದ ಸ್ವಾಮೀಜಿ ಅವರು ಬೆಂಗಳೂರು ಬಳಿಯ ಬಿಡದಿ ಆಶ್ರಮದಿಂದ ಪರಾರಿಯಾಗಿ ಗುಪ್ತವಾಗಿರುವ ಭೂ ಭಾಗವೊಂದರಲ್ಲಿ ಕೈಲಾಸ ಎಂಬ ತನ್ನದೇ ಆದ ದೇಶವೊಂದನ್ನು ಸ್ಥಾಪಿಸಿಕೊಂಡಿರುವುದಾಗಿ ನಿತ್ಯಾನಂದ ಕೆಲವು ತಿಂಗಳುಗಳ ಹಿಂದೆ ಹೇಳಿಕೊಂಡಿದ್ದಾರೆ.