ಬೆಂಗಳೂರು : ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಬಿಜೆಪಿ ಪಕ್ಷದ ಹಲವು ಮಾಜಿ ಹಾಗೂ ಹಾಲಿ ಸಚಿವರು ಶಾಸಕರು ಕಸರತ್ತು ನಡೆಸುತ್ತಿದ್ದು, ಅದರಲ್ಲಿ ತುಮಕೂರು ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿರುವ ವಿ ಸೋಮಣ್ಣ ಕೂಡ ಇದ್ದಾರೆ. ಇದೀಗ ಹೈಕಮಾಂಡ್ ನನ್ನ ಗುರುತಿಸಿ ಟಿಕೆಟ್ ನೀಡಿದರೆ ನಾನು ಜನರ ಬಳಿ ಹೋಗುತ್ತೇನೆ ಎಂದು ತಿಳಿಸಿದ್ದಾರೆ.

ಬೆಂಗಳೂರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಹೈಕಮಾಂಡ್ ಬಳಿ ತುಮಕೂರು ಲೋಕಸಭೆ ಟಿಕೆಟ್ ಕೇಳಿದ್ದೇನೆ ಎಂದು ಬೆಂಗಳೂರು ನಗರದಲ್ಲಿ ಮಾಜಿ ಸಚಿವ ವಿ ಸೋಮಣ್ಣ ತಿಳಿಸಿದರು.ನನ್ನನ್ನು ಗುರುತಿಸಿ ಟಿಕೆಟ್ ಕೊಟ್ಟರೆ ಜನರ ಬಳಿ ಹೋಗುತ್ತೇನೆ ನಾನು 365 ದಿನವೂ ಚುನಾವಣೆ ಮಾಡುವುದು ಎಂದು ತಿಳಿಸಿದರು.

ಗೆದ್ದಾಗಲೂ ಸುಮ್ಮನೆ ಕೂತಿಲ್ಲ. ಇದು ನನ್ನ ದೈನಂದಿನ ಕೆಲಸವಾಗಿದೆ. ಚುನಾವಣೆಯಲ್ಲಿ ಸೋತಿದ್ದೇನೆಂದು ಸ್ವಲ್ಪ ಸೋಮಾರಿಯಾಗಿದ್ದೇನೆ ಮೋದಿ ಪ್ರಧಾನಿ ಆಗುತ್ತಾರೆ ಅಂದರೆ ನಮ್ಮ ಅಳಿಲು ಸೇವೆ ಇರಬೇಕಲ್ವಾ ತುಮಕೂರು ನನಗೆ ಹೊಸದಲ್ಲ ಅಲ್ಲಿ ಮನೆ ನೋಡುವ ಅಗತ್ಯವಿಲ್ಲ.ನನಗೆ ಬೆಂಗಳೂರು ಹೇಗೂ ತುಮಕೂರು ಕೂಡ ಹಾಗೆ ಇದೆ ನನಗೂ ತುಮಕೂರಿಗೂ ಅವಿಣಾಭಾವ ಸಂಬಂಧವಿದೆ ಎಂದು ಬೆಂಗಳೂರು ನಗರದಲ್ಲಿ ಮಾಜಿ ಸಚಿವ ವಿ. ಸೋಮಣ್ಣ ತಿಳಿಸಿದರು.

‘ಬೈವೋಲ್ಟಿನ್ ರೇಷ್ಮೆ ಗೂಡುಗಳಿಗೆ’ ನೀಡುತ್ತಿರುವ ಪ್ರೋತ್ಸಾಹಧನ ಪ್ರತಿ ಕೆಜಿಗೆ ₹ 30 ಕ್ಕೆ ಹೆಚ್ಚಳ : ಸಿಎಂ ಸಿದ್ದರಾಮಯ್ಯ ಘೋಷಣೆ | Budget 2024

ಸಾರ್ವಜನಿಕರೇ ಗಮನಿಸಿ: ಪಿಎಂ ವಿಶ್ವಕರ್ಮ ಯೋಜನೆಯಲ್ಲಿ ಸಾಲ ಪಡೆಯೋದು ಹೇಗೆ? ಸಂಪೂರ್ಣ ಮಾಹಿತಿ ಇಲ್ಲಿದೆ!

ರಾಜ್ಯದಲ್ಲಿ ಮತ್ತೊಂದು ಅಮಾನವೀಯ ಘಟನೆ : ಆಸ್ತಿಗಾಗಿ ಹೆತ್ತತಾಯಿಯನ್ನೇ ಗೃಹಬಂಧನದಲ್ಲಿಟ್ಟಿದ್ದ ಮಗ, ಸೊಸೆ!

Share.
Exit mobile version