ನವದೆಹಲಿ: ನಾನು ಇಂದು ಲೋಕಸಭಾ ಚುನಾವಣಾ ಪ್ರಚಾರ ಭಾಷಣದ ವೇಳೆಯಲ್ಲಿ ಬಿಸಿಲ ಶಾಖದಿಂದ ಪ್ರಜ್ಞೆ ತಪ್ಪಿ ಬಿದ್ದು, ಅಸ್ವಸ್ಥಗೊಂಡಿದ್ದೆ. ಚಿಕಿತ್ಸೆ, ವಿಶ್ರಾಂತಿಯ ಬಳಿಕ ಆರೋಗ್ಯವಾಗಿದ್ದೇನೆ. ಯಾರೂ ಆತಂಕ ಪಡಬೇಡಿ ಎಂಬುದಾಗಿ ಕೇಂದ್ರ ಸಚಿವ ನಿತಿನ್ ಗಡ್ಕರ್ ತಿಳಿಸಿದ್ದಾರೆ.

ಈ ಬಗ್ಗೆ ಎಕ್ಸ್ ಮಾಡಿರುವಂತ ಅವರು, ಮಹಾರಾಷ್ಟ್ರದ ಪುಸಾದ್ನಲ್ಲಿ ನಡೆದ ರ್ಯಾಲಿಯಲ್ಲಿ, ಶಾಖದಿಂದಾಗಿ ನನಗೆ ಅಹಿತಕರ ಅನುಭವವಾಯಿತು. ಆದರೆ ಈಗ ನಾನು ಸಂಪೂರ್ಣವಾಗಿ ಆರೋಗ್ಯವಾಗಿದ್ದೇನೆ ಮತ್ತು ಮುಂದಿನ ಸಭೆಯಲ್ಲಿ ಭಾಗವಹಿಸಲು ವರುದ್ ಗೆ ತೆರಳುತ್ತಿದ್ದೇನೆ. ನಿಮ್ಮ ಪ್ರೀತಿ ಮತ್ತು ಶುಭ ಹಾರೈಕೆಗಳಿಗೆ ಧನ್ಯವಾದಗಳು ಅಂತ ಹೇಳಿದ್ದಾರೆ.

ಅಂದಹಾಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ಮತ್ತು ಭಾರತೀಯ ಜನತಾ ಪಕ್ಷದ (ಬಿಜೆಪಿ) ಹಿರಿಯ ಮುಖಂಡ ನಿತಿನ್ ಗಡ್ಕರಿ ಬುಧವಾರ ಮಹಾರಾಷ್ಟ್ರದ ಯವತ್ಮಾಲ್ನಲ್ಲಿ ಲೋಕಸಭಾ ಚುನಾವಣಾ ರ್ಯಾಲಿಯಲ್ಲಿ ಭಾಷಣ ಮಾಡುವಾಗ ಪ್ರಜ್ಞೆ ಕಳೆದುಕೊಂಡಿದ್ದರು.

ಮೂಲಗಳು ಮತ್ತು ದೃಶ್ಯಗಳ ಪ್ರಕಾರ, ಗಡ್ಕರಿ ಭಾಷಣ ಮಾಡುವಾಗ ಇದ್ದಕ್ಕಿದ್ದಂತೆ ತಲೆತಿರುಗಲು ಪ್ರಾರಂಭಿಸಿದರು ಮತ್ತು ಕೆಳಗೆ ಬಿದ್ದರು. ಅವರ ಪಕ್ಷದ ಕಾರ್ಯಕರ್ತರು ಅವರ ಮುಖದ ಮೇಲೆ ನೀರು ಚಿಮುಕಿಸಿ ವೇದಿಕೆಯಿಂದ ಕರೆದೊಯ್ದರು. ಚಿಕಿತ್ಸೆ, ವಿಶ್ರಾಂತಿಯ ಬಳಿಕ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ.

“ಅಮೆರಿಕಕ್ಕೆ ಮೋದಿಯಂತಹ ನಾಯಕನ ಅಗತ್ಯವಿದೆ” : ‘ನಮೋ’ ಶ್ಲಾಘಿಸಿದ ‘ಜೆಪಿ ಮೋರ್ಗಾನ್ CEO’

WhatsApp Updates:ಶೀಘ್ರದಲ್ಲೇ ವಾಟ್ಸಪ್ ನಲ್ಲಿ ಮೊಬೈಲ್ ಸಂಖ್ಯೆಯನ್ನು ಉಳಿಸದೆ ಕರೆ ಮಾಡುವ ಸೌಲಭ್ಯ

Share.
Exit mobile version