ಬೆಂಗಳೂರು : ನಾನು ಸೋಶಿಯಲ್‌ ಮೀಡಿಯಾ ನೋಡುವುದಿಲ್ಲ. ಮೊಬೈಲ್‌ ನೋಡುವುದನ್ನೇ ಬಿಟ್ಟಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಬೆಂಗಳೂರಿನ ಪ್ರೆಸ್‌ ಕ್ಲಬ್‌ ನಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಾನು ಮೊಬೈಲ್‌ ಬಳಸುವುದಿಲ್ಲ. ಸೋಶಿಯಲ್‌ ಮೀಡಿಯಾ ನೋಡುವುದನ್ನೇ ಬಿಟ್ಟಿದ್ದೇನೆ. ಸರ್ಕಾರದ ಬಗ್ಗೆ ಹೀಗೆ ಬರೆದಿದ್ದಾರೆ ನೋಡಿ ಅಂತ ನನ್ನ ಮಗ ತೋರಿಸುತ್ತಾನೆ. ನಾನು ಆರು ತಿಂಗಳು ಮೊಬೈಲ್‌ ಬಳಕೆ ಮಾಡಿದ್ದೆ ಎಂದು ಹೇಳಿದ್ದಾರೆ.

ನಾನು ಮೊಬೈಲ್‌ ಬಳಕೆ ಮಾಡುವ ವೇಳೆ ರಾತ್ರಿ ಹೊತ್ತು ಫೋನ್‌ ಬರುತ್ತಿತ್ತು. ನಿದ್ದೆ ಮಾಡೋಕೆ ಆಗುತ್ತಿರಲಿಲ್ಲ. ನಮ್ಮ ಗನ್‌ ಮ್ಯಾನ್‌ ಗೆ ಕರೆ ಮಾಡಿದ ಬಳಿಕ ನಾನು ಮಾತನಾಡುತ್ತೇನೆ. ಸೋಶಿಯಲ್‌ ಮೀಡಿಯಾ ಬಗ್ಗೆ ಅಷ್ಟೋಂದು ನನಗೆ ಆಸಕ್ತಿ ಇಲ್ಲ ಎಂದು ತಿಳಿಸಿದ್ದಾರೆ.

Share.
Exit mobile version