ಕಲಬುರಗಿ : ನಾನು ಹಿಂದೂ ಧರ್ಮದವನು , ಹಿಂದು ಧರ್ಮದ ಬಗ್ಗೆ ನಾನು ಮಾತನಾಡಿಯೇ ಇಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ಕಲಬುರಗಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ ನಾನು ಎಂದಿಗೂ ಕೂಡ ಹಿಂದೂ ಧರ್ಮವನ್ನು ವಿರೋಧ ಮಾಡಿಲ್ಲ, ನಾನು ಕೂಡ ಹಿಂದೂ ಎಂದು ಹೇಳಿದ್ದಾರೆ.
ಯಾವ ಧರ್ಮದಲ್ಲೂ ಕೂಡ ಕೊಲೆ ಮಾಡಿ, ಹಿಂಸೆ ಮಾಡಿ ಎಂದು ಹೇಳಿಲ್ಲ. ನಾವೆಲ್ಲಾ ಹಿಂದು ಧರ್ಮ ಪಾಲನೆ ಮಾಡುವವರು ಅಲ್ವಾ..? ನಮಗೆ ಎಲ್ಲೂ ಕೂಡ ಕ್ರೌರ್ಯಕ್ಕೆ , ಹಿಂಸೆಗೆ ಅವಕಾಶ ಇಲ್ಲ ಎಂದು ಹೇಳಿದೆ ಅಷ್ಟೇ ಎಂದು ಹೇಳಿದರು.
ನಮ್ಮ ಅಧಿಕಾರದ ಅವಧಿಯಲ್ಲಿ ಹಿಂದೂಗಳಷ್ಟೇ ಅಲ್ಲ, ಮುಸ್ಲಿಮರ ಕೊಲೆಗಳೂ ಆಗಿವೆ. ಈ ಕೊಲೆಗಳಿಗೆ ಆರ್ ಎಸ್ಎಸ್ ಮತ್ತು ಬಿಜೆಪಿಯವರೇ ಕಾರಣ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಅಧಿಕಾರದ ಅವಧಿಯಲ್ಲಿ ಹಿಂದೂಗಳಷ್ಟೇ ಅಲ್ಲ, ಮುಸ್ಲಿಂರ ಕೊಲೆಗಳೂ ಆಗಿವೆ. ಈ ಎಲ್ಲಾ ಕೊಲೆಗಳಿಗೆ ಆರ್ ಎಸ್ಎಸ್, ಬಿಜೆಪಿಯವರೇ ಕಾರಣ, ಪರೇಶ್ ಮೇಸ್ತ ಕೊಲೆಯ ಬಳಿಕ ದೊಡ್ಡ ಗಲಾಟೆ ಮಾಡಿದರು. ಆಮೇಲೆ ಏನಾಯ್ತು ಎಂದು ಎಲ್ಲಾರಿಗೂ ಗೊತ್ತು. ನಾನು ಯಾವತ್ತೂ ಹಿಂದೂ ಧರ್ಮದ ವಿರೋಧ ಮಾಡಿಲ್ಲ. ಸಾಮಾರಸ್ಯವನ್ನು ಹಾಳು ಮಾಡುವುದ ಬಿಜೆಪಿ ನಾಯಕರ ಕೆಲಸ ಎಂದು ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಪಾಕ್ ನಲ್ಲಿ ಸ್ಪರ್ಧೆ ಮಾಡಿದ್ರೆ 150ಸ್ಥಾನ ಗೆಲ್ಲುತ್ತೆ ಎಂಬ ಸಿ.ಟಿ. ರವಿ ಹೇಳಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, ಸಿ.ಟಿ.ರವಿ ಆರ್ ಎಸ್ಎಸ್ ಗಿರಾಕಿ, ಅವರಿಗೆ ಸುಳ್ಳು ಹೇಳುವುದೇ ಕೆಲಸ. ಕರ್ನಾಟಕ ಪಾಕಿಸ್ತಾನದಲ್ಲಿ ಇದೆಯಾ? ಭಾರತದಲ್ಲಿ ಇದೆಯಾ? ಚುನಾವಣೆ ನಡೆಯುತ್ತಿರುವುದು ಪಾಕಿಸ್ತಾನದಲ್ಲಾ? ಕರ್ನಾಟಕದಲ್ಲಾ? ಪೆದ್ದು, ಪೆದ್ದಾಗಿ ಮಾತನಾಡುತ್ತೀರಾ ಅಂತಾ ಸಿ.ಟಿ. ರವಿ ವಿರುದ್ಧ ಕಿಡಿಕಾರಿದ್ದಾರೆ.
GOOD NEWS : ಬೆಂಗಳೂರಿನಲ್ಲಿ ಉಚಿತ ಸೇವೆ ನೀಡುವ 108 ‘ನಮ್ಮ ಕ್ಲಿನಿಕ್’ ಆರಂಭ
ಅರಣ್ಯ ಹಕ್ಕು ಕಾಯ್ದೆಯಡಿ ಸಲ್ಲಿಕೆಯಾಗಿರುವ ಅರ್ಜಿ ಮರು ಪರಿಶೀಲಿಸಿ ವರದಿ ನೀಡಿ : ಕೊಡಗು ಡಿಸಿ ಸತೀಶ್ ಸೂಚನೆ