ಬೆಂಗಳೂರು: ನಾನು ಯಾವತ್ತೂ ಜಾತಿ ರಾಜಕಾರಣ ಮಾಡಿಲ್ಲ. ಸಾರ್ವಜನಿಕರಿಂದ ಅಹವಾಲು ಕೇಳುವಾಗಲೂ ಜಾತಿ ಕೇಳಿಲ್ಲ. ನಾನು ಯಾವತ್ತೂ ಜಾತಿ ರಾಜಕಾರಣಕ್ಕೆ ಪ್ರಾಶಸ್ತ್ಯವನ್ನು ನೀಡಿಲ್ಲ. ಯಾವುದೇ ಸಮುದಾಯಕ್ಕೂ ನಾನು ಅವಮಾನ ಮಾಡಿಲ್ಲ ಎಂಬುದಾಗಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ( Farmer CM HD Kumaraswamy ) ಸ್ಪಷ್ಟ ಪಡಿಸಿದ್ದಾರೆ.
ನಗರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು, ಬಿಜೆಪಿ ನಾಯಕರ ( BJP Leader ) ಟೀಕೆಯನ್ನು ನಾನು ಗಮನಿಸಿದ್ದೇನೆ. ನಾನು ಸಿಟಿ ರವಿ ವಿಚಾರಕ್ಕೆ ಹೋಗಿಲ್ಲ, ಆದರೂ ನನ್ನ ಬಗ್ಗೆ ಟೀಕೆ ಮಾಡ್ತಾರೆ. ಸಿಟಿ ರವಿ ಇತಿಹಾಸ ಏನು ಅಂತ ರಾಜ್ಯದ ಜನರಿಗೆ ಗೊತ್ತಿದೆ ಎಂದರು.
ನಾನು ಯಾವತ್ತೂ ಜಾತಿ ರಾಜಕಾರಣ ಮಾಡಿಲ್ಲ. ಸಾರ್ವಜನಿಕರಿಂದ ಅಹವಾಲು ಕೇಳುವಾಗಲೂ ಜಾತಿ ಕೇಳಿಲ್ಲ. ಎಲ್ಲರೂ ಪರಿಶುದ್ಧವಾದ ಶಾಸಕರಿದ್ದಾರಾ ಎಂದು ಪ್ರಶ್ನಿಸಿದರು. ಅಲ್ಲದೇ ಮೀಸಲಾತಿ ವಿಚಾರದಲ್ಲಿ ಗೊಂದಲ ಸೃಷ್ಠಿ ಮಾಡಿದ್ದಾರೆಂದು ವಾಗ್ಧಾಳಿ ನಡೆಸಿದರು.
ನಾನು ಯಾವತ್ತೂ ಜಾತಿ ರಾಜಕಾರಣಕ್ಕೆ ಪ್ರಾಶಸ್ತ್ಯ ನೀಡಿದನವಲ್ಲ. ಯಾವುದೇ ಸಮುದಾಯಕ್ಕೂ ನಾನು ಅವಮಾನ ಮಾಡಿಲ್ಲ. ಈ ಬಗ್ಗೆ ಈಗಾಗಲೇ ನಾನು ಸ್ಪಷ್ಟವಾಗಿ ಹೇಳಿದ್ದೇನೆ ಎಂದರು.
ಕರ್ನಾಟಕಕ್ಕೂ ವಿ ಡಿ ಸಾರ್ವರ್ಕರ್ ಗೂ ಸಂಬಂಧವೇನು.? ಕರ್ನಾಟಕ ( Karnataka ) ರಾಜ್ಯಕ್ಕೂ ಗೋಡ್ಸೆಗೂ ಸಂಬಂಧವೇನು.? ಇವರೆಲ್ಲಾ ಮಹಾತ್ಮಗಾಂಧಿ ಹತ್ಯೆ ಮಾಡಿ ರಾಜ್ಯಕ್ಕೆ ಬಂದಗಿದ್ದಾರೆ. ಭಯದಿಂದ ನಮ್ಮ ರಾಜ್ಯಕ್ಕೆ ಬಂದಿದ್ದಾರೆ. ಸಮಾಜ ಒಡೆಯುವ ಕೆಲಸಕ್ಕೆ ಬಿಜೆಪಿಯವರು ಕೈಹಾಕಿದ್ದಾರೆ ಎಂದು ಕಿಡಿಕಾರಿದರು.
ರಾಜ್ಯದ ಬ್ರಾಹ್ಮಣರು ಸುಸಂಸ್ಕೃತಿಯಿಂದ ಜೀವನ ಮಾಡ್ತಿದ್ದಾರೆ. ಯಾವುದೇ ಸಮಾಜದ ಮನಸ್ಸಿಗೆ ನೋವಾಗಬೇಕೆಂದು ಹೇಳಿಕೆ ಕೊಟ್ಟಿಲ್ಲ. ರಾಜ್ಯದಲ್ಲಿ ಬೆಂಕಿ ಹಚ್ಚಬೇಕೆಂದು ನಾನು ಹೇಳಿಕೆ ನೀಡಿಲ್ಲ. ನಮ್ಮ ರಾಜ್ಯ ಸರ್ವ ಜನಾಂಗದ ಶಾಂತಿಯ ತೋಟ ಆಗಬೇಕು. ನಾನು ಪ್ರಹ್ಲಾದ್ ಜೋಶಿ ಸಿಎಂ ಆಗಬಾರದು ಅಂತ ನಾನು ಹೇಳಿಲ್ಲ. ಆದ್ರೇ ಡಿಎನ್ಎ ಅವರ ಹಿನ್ನೆಲೆ ಏನು ಅಂತ ಹೇಳಿದ್ದೇನೆ ಎಂದರು.
ಎಚ್ಚರ..! ಎಷ್ಟು ನೀರು ಕುಡಿದರೂ, ಬಾಯಾರಿಕೆ ನೀಗಿಸುವುದಿಲ್ಲವೇ? ಇದು ಗಂಭೀರ ರೋಗದ ಲಕ್ಷಣ!?