ಬೆಂಗಳೂರು : ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೋ ಪ್ರಕರಣದಲ್ಲಿ ವಕೀಲ ದೇವರಾಜೇಗೌಡ ವಿರುದ್ಧವೂ ದೂರು ದಾಖಲಾಗಿದೆ. ಬಂಧನದ ಭೀತಿ ಎದುರಿಸುತ್ತಿರುವಂತ ಅವರು, ನಾಪತ್ತೆಯಾಗಿದ್ದಾರೆ ಎಂದು ಸುದ್ದಿ ಹರಿದಾಡಿತ್ತು. ಇದೀಗ ಅಜ್ಞಾತ ಸ್ಥಳದಲ್ಲಿರುವ ಅವರು ನಾನು ಎಲ್ಲಿಯೂ ಕಾಣೆಯಾಗಿಲ್ಲ ಮೂರು ದಿನ ರಜೆ ಇದ್ದ ಕಾರಣ ದೇವಾಲಯಕ್ಕೆ ಬಂದಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಸದ್ಯ ದೇವರಾಜೇಗೌಡ ಅಜ್ಞಾತ ಸ್ಥಳದಲ್ಲಿ ಇದ್ದು, ಅಲ್ಲಿಂದಲೇ ಮಾತನಾಡಿದ್ದು, ನಾನು ಎಲ್ಲೂ ಕಾಣೆಯಾಗಿಲ್ಲ. ಮೂರು ದಿನ ರಜೆ ಇದ್ದಿದ್ದರಿಂದ ದೇಗುಲಕ್ಕೆ ಬಂದಿದ್ದೇನೆ. ಕಾಣೆಯಾಗುವ ಪರಿಸ್ಥಿತಿ ನನಗೆ ಬಂದಿಲ್ಲ.3 ದಿನ ರಜೆ ಇದ್ದ ಕಾರಣ ಕುಟುಂಬದ ಸಮೇತ ದೇವಸ್ಥಾನಕ್ಕೆ ಬಂದಿದ್ದೇನೆ. ಹೀಗಾಗಿ ಆತಂಕ ಪಡುವ ಅಗತ್ಯವಿಲ್ಲ ಎಂದು ವಕೀಲ ದೇವರಾಜ ಗೌಡ ತಿಳಿಸಿದ್ದಾರೆ.

ಮತ್ತೆ 3 ಆಡಿಯೋ ಕ್ಲಿಪ್ ಬಿಡುಗಡೆ

ಇದೆ ವೇಳೆ ಪ್ರಜ್ವಲ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿ ದಂತೆ ಅಜ್ಞಾತ ಸ್ಥಳದಲ್ಲಿರುವ ವಕೀಲ ದೇವರಾಜಗೌಡ ಶಿವರಾಮೇಗೌಡ ಜೊತೆ ಮಾತನಾಡಿರುವ ಎರಡು ಆಡಿಯೋ ತುಣುಕುಗಳನ್ನು ಬಿಡುಗಡೆ ಮಾಡಿದ್ದಾರೆ.  ಹನಿ ಟ್ರ್ಯಾಪ್ ಸಂಬಂಧ ಮಹಿಳೆ ತನ್ನ ಗಂಡನ ಜೊತೆ ಮಾತನಾಡಿದ ಒಂದು ಆಡಿಯೋ ಹಾಗೂ ಶಿವರಾಮೇಗೌಡ ಜೊತೆ ಡಿಕೆ ವಿಚಾರ ಮಾತನಾಡುವ ಇನ್ನೊಂದು ಆಡಿಯೋವನ್ನು ಬಿಡುಗಡೆ ಮಾಡಿದ್ದಾರೆ.

ಏಪ್ರಿಲ್.23ರಂದು ಹಾಸನ ಪೆನ್ ಡ್ರೈವ್ ಕೇಸ್ ಸಂಬಂಧ ಹಾಸನ ಸೈಬರ್ ಪೊಲೀಸ್ ಠಾಣೆಗೆ ಚುನಾವಣಾ ಏಜೆಂಟ್ ಪೂರ್ಣಚಂದ್ರ ತೇಜಸ್ವಿ ದೂರು ನೀಡಿದ್ದರು. ಈ ದೂರನ್ನು ಆಧರಿಸಿ ಇದೀಗ ಪ್ರಜ್ವಲ್ ಮಾಜಿ ಕಾರು ಚಾಲಕ ಕಾರ್ತಿಕ್ ಹಾಗೂ ವಕೀಲ ದೇವರಾಜೇಗೌಡ ವಿರುದ್ಧ ಕೇಸ್ ದಾಖಲಾಗಿತ್ತು. ಈ ಹಿನ್ನಲೆಯಲ್ಲಿ ಅವರಿಗೆ ನೋಟಿಸ್ ನೀಡಲಾಗಿದೆ.

ಒಂದರಲ್ಲಿ ಶಿವರಾಮೇಗೌಡ ಜೊತೆಗೆ ಮಾತನಾಡಿರುವಂತ ಆಡಿಯೋ ಇದ್ದರೇ, ಮತ್ತೊಂದರಲ್ಲಿ ಹನಿಟ್ರ್ಯಾಪ್ ಸಂಬಂಧ ಮಹಿಳೆ ಗಂಡನ ಜೊತೆ ಮಾತನಾಡಿರುವಂತ ಆಡಿಯೋವಾಗಿದೆ. ಮಗದೊಂದು ಶಿವರಾಮೇಗೌಡ ಜೊತೆ ಡಿಕೆ ವಿಚಾರ ಮಾತನಾಡುತ್ತಾ, ಎಸ್ಐಟಿ ವಿಚಾರಣೆಯಲ್ಲಿ ಡಿಕೆ ಶಿವಕುಮಾರ್ ಹೆಸರು ಹೇಳದಂತೆ ಶಿವರಾಮೇಗೌಡ ಸೂಚಿಸಿರೋ ಆಡಿಯೋ ತುಣುಕು ಎಂಬುದಾಗಿ ತಿಳಿದು ಬಂದಿದೆ. ಈ ಮೂಲಕ ಪ್ರಜ್ವಲ್ ಅಶ್ಲೀಲ ಕೇಸ್ ಮತ್ತೊಂದು ಟ್ವಿಸ್ಟ್ ಪಡೆದಂತೆ ಆಗಿದೆ.

Share.
Exit mobile version