ನನ್ನ ವಿರುದ್ಧ ಬರೆದರೂ ಚಿಂತೆಯಿಲ್ಲ, ಸತ್ಯಾಂಶ ಶೋಧಿಸಿ ಬರೆಯಿರಿ: ಡಿಸಿಎಂ ಡಿ.ಕೆ. ಶಿವಕುಮಾರ್

ಬೆಂಗಳೂರು : “ಮಾಧ್ಯಮಗಳು ನನ್ನ ವಿರುದ್ಧ ಬರೆದರೂ ಚಿಂತೆಯಿಲ್ಲ. ಆದರೆ ಸತ್ಯಾಂಶ ಶೋಧಿಸಿ ಬರೆಯಿರಿ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾಧ್ಯಮಗಳಿಗೆ ಕಿವಿಮಾತು ಹೇಳಿದರು. ಬೆಂಗಳೂರು ಪ್ರೆಸ್ ಕ್ಲಬ್ ಶನಿವಾರದಂದು ಏರ್ಪಡಿಸಿದ್ದ ‘ಪ್ರೈಡ್ ಆಫ್ ಕರ್ನಾಟಕ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶಿವಕುಮಾರ್ ಅವರು ಮಾತನಾಡಿದರು. “ನಾನು ಚುನಾವಣಾ ರಾಜಕೀಯಕ್ಕೆ ಬಂದು 40 ವರ್ಷಗಳು ಕಳೆದಿವೆ. ಆದರೆ ಒಂದು ದಿನವೂ ಪ್ರೆಸ್ ಕ್ಲಬ್ ಗೆ ಕಾಲಿಟ್ಟಿರಲಿಲ್ಲ. ಕಳೆದ ವರ್ಷ ನನ್ನನ್ನು ಕರೆಸಿ ವರ್ಷದ ವ್ಯಕ್ತಿ ಪ್ರಶಸ್ತಿ ಕೊಟ್ಟಿದ್ದೀರಿ” ಎಂದರು. … Continue reading ನನ್ನ ವಿರುದ್ಧ ಬರೆದರೂ ಚಿಂತೆಯಿಲ್ಲ, ಸತ್ಯಾಂಶ ಶೋಧಿಸಿ ಬರೆಯಿರಿ: ಡಿಸಿಎಂ ಡಿ.ಕೆ. ಶಿವಕುಮಾರ್