ವಿಜಯಪುರ: ಸಿದ್ದರಾಮಯ್ಯ ಏನು ಮಾಡಿದರು ಎಂದು ಕೆಲವರು ಟೀಕೆ ಮಾಡುತ್ತಾರೆ. ಆದರೆ ನಾನು ಇಂತಹ ಟೀಕೆಗಳಿಗೆ ಹೆದರುವುದಿಲ್ಲ. ಹೆದರಿಸಲು ಬಂದರೆ ನನಗೆ ತೊಡೆ ತಟ್ಟಿ ನಿಲ್ಲುವುದು ಗೊತ್ತಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ನಾನು ಮಾಡುವ ಕೆಲಸ ಸರಿಯಾಗಿ ನ್ಯಾಯಯುತವಾಗಿದ್ದರೆ ಯಾರಿಗೂ ಹೆದರಬೇಕಿಲ್ಲ. ಅಧಿಕಾರ ಬರುತ್ತದೆ, ಹೋಗುತ್ತದೆ. ನಾನು 13 ಚುನಾವಣೆ ಎದುರಿಸಿದ್ದೇನೆ, ಐದು ಚುನಾವಣೆಗಳಲ್ಲಿ ಸೋತಿದ್ದೇನೆ. ಸೋತು ಮನೆಯಲ್ಲಿ ಕುಳಿತಿರಲಿಲ್ಲ. ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದ್ದೇನೆ. ಯಾರಿಗೂ ಹೆದರುವ ಗಿರಾಕಿ ಅಲ್ಲ ನಾನು ಎಂದರು.
ಕುರುಬರನ್ನು ಎಸ್ಟಿಗೆ ಸೇರಿಸುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿನ್ನೆ ಹೇಳಿದ್ದಾರೆ. ಆದರೆ ಇದನ್ನು ಮಾಡುವವರು ಇವರಲ್ಲ , ಕೇಂದ್ರ ಸರ್ಕಾರದವರು. ನಿಮ್ಮದು ಡಬಲ್ ಇಂಜಿನ್ ಸರ್ಕಾರ ಅಂತಾರೆ. ಹಾಗಿದ್ದರೆ ಕುರುಬರನ್ನು ಎಸ್ಟಿಗೆ ಸೇರಿಸಿ ಎಂದು ಸವಾಲು ಹಾಕಿದ್ದಾರೆ
ಇವರು ಮೂಗಿಗೆ ತುಪ್ಪ ಹಚ್ಚುವವರಲ್ಲ, ಹಣೆಗೆ ತುಪ್ಪ ಹಚ್ಚುವವರು. ಇವರ ವಿರುದ್ಧ ನೀವೆಲ್ಲಾ ಧ್ವನಿ ಎತ್ತಬೇಕು. ಆರ್ಥಿಕವಾಗಿ ಹಿಂದುಳಿದವರಿಗೆ, ಮೇಲ್ಜಾತಿಯವರಿಗೆ ಮೀಸಲಾತಿ ಕೊಡಬೇಕು ಅಂತ ಸಂವಿಧಾನದಲ್ಲಿ ಎಲ್ಲಿದೆ ತೋರಿಸಿ? ಇದ್ದರೆ ಹೇಳಿ ಬಿಡಿ ನೋಡೋಣ, ನಾನು ನನ್ನ ರಾಜಕೀಯ ಜೀವನಕ್ಕೆ ರಾಜೀನಾಮೆ ಕೊಟ್ಟು ಬಿಡುತ್ತೇನೆ ಎಂದು ಹೇಳಿದ್ದಾರೆ.
ಹೋಟೆಲ್ ರೂಮ್ ಗಳಲ್ಲಿ ಯಾಕೆ ಬಿಳಿ ಬೆಡ್ ಶೀಟ್ ಗಳನ್ನು ಬಳಸುತ್ತಾರೆ ಗೊತ್ತಾ? ಇಲ್ಲಿದೆ ಮಾಹಿತಿ
BREAKING NEWS : ರಾಮನಗರದಲ್ಲಿ ಘೋರ ಘಟನೆ : ‘ಸೆಲ್ಫಿ’ ವಿಡಿಯೋ ಮಾಡಿ ವ್ಯಕ್ತಿ ಆತ್ಮಹತ್ಯೆ