ಮಂಡ್ಯ: ರಾಜ್ಯದ ಪ್ರತಿಷ್ಠಿತ ಕ್ಷೇತ್ರ ಮಂಡ್ಯದ ಜೆಡಿಎಸ್-ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರ ಹೆಸರು ನಿಕ್ಕಿಯಾದ ಮೇಲೆ ಇಂದಿಲ್ಲಿ ನಡೆದ ಎರಡೂ ಪಕ್ಷಗಳ ಕಾರ್ಯಕರ್ತರು, ಮುಖಂಡರ ಸಮನ್ವಯ ಸಮಿತಿ ಸಭೆ ಅತ್ಯಂತ ಯಶಸ್ವಿಯಾಗಿ ನಡೆಯಿತು.

ಕುಮಾರಸ್ವಾಮಿ ಅವರು ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಸಮ್ಮುಖದಲ್ಲಿ ನಡೆದ ಈ ಸಭೆಯಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ಅವರನ್ನು ಪ್ರಧಾನಮಂತ್ರಿ ಮಾಡುವ ನಿಟ್ಟಿನಲ್ಲಿ ಎರಡೂ ಪಕ್ಷಗಳ ಕಾರ್ಯಕರ್ತರು ಹೆಚ್‌ಡಿಕೆ ಅವರನ್ನು ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸಲು ಶಪಥ ಮಾಡಿದರು.

ಸುಮಲತಾ ನನಗೆ ಆಶೀರ್ವಾದ ಮಾಡುವ ವಿಶ್ವಾಸವಿದೆ

ಸುಮಲತಾ ಅವರ ಬಗ್ಗೆ ಮಾತನಾಡಿದ ಕುಮಾರಸ್ವಾಮಿ ಅವರು; ನಾನು ಮತ್ತು ಅಂಬರೀಶ್ ಸ್ನೇಹಿತರು. ಅದೂ ಎಲ್ಲರಿಗೂ ತಿಳಿದಿರುವ ವಿಚಾರವೇ. ಸುಮಲತಾ ಅವರು ನನಗೆ ಅಂಬರೀಶ್‌ ಅವರೊಂದಿಗೆ ಊಟ ಬಡಿಸಿದ್ದಾರೆ. ನಾವು ಶತ್ರುಗಳಲ್ಲ. ಅವರು ನನಗೆ ಆಶೀರ್ವಾದ ಮಾಡುವ ವಿಶ್ವಾಸವಿದೆ. ಅವರು ನಿರ್ಧಾರ ಮಾಡಿ ಘೋಷಣೆ ಮಾಡುತ್ತಾರೆ ಎಂದರಲ್ಲದೆ; ಮತ್ತೊಬ್ಬ ಡಾ.ಸಿ.ಎನ್.ಮಂಜುನಾಥ್ ಅವರ ಬಗ್ಗೆಯೂ ಇದೇ ರೀತಿಯ ಚೇಷ್ಟೇ ಮಾಡುತ್ತಿದ್ದಾರೆ. ಅದೇನೂ ವರ್ಕೌಟ್ ಆಗಲ್ಲ. ಮಂಜುನಾಥ್ ಜನಸಾಮಾನ್ಯರ ಅಭ್ಯರ್ಥಿ. ಏನು ಕುತಂತ್ರ ಮಾಡಿದರು ಪ್ರಯೋಜನವಿಲ್ಲ. ಡಿ.ಕೆ.ಸುರೇಶ್ ಕೆಲಸ ಮಾಡಿದ್ದೀವಿ, ಕೂಲಿ ಕೇಳ್ತಿದ್ದೀವಿ ಅನ್ನೋ ವಿಚಾರ.
ನಾವೇನೂ ದರೋಡೆ ಮಾಡಿದ್ದೀವಾ? ರಾಮನಗರ ಜಿಲ್ಲೆಗೆ ನಾನು ಕಾಲಿಡುವ ಮುಂಚೆ ಯಾವ ಪರಿಸ್ಥಿತಿ ಇತ್ತು ಎಂದರು.

ನಾನು ಕಾಲಿಟ್ಟ ಬಳಿಕ ಯಾವ ಪರಿಸ್ಥಿತಿ ಇದೆ. ಯಾವ ರೀತಿ ಕಾರ್ಯಕ್ರಮ ಕೊಟ್ಟಿದ್ದೀವಿ. ನಾನು ಮತ್ತು ಯಡಿಯೂರಪ್ಪ ಇದ್ದ ವೇಳೆ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಮಾಡಿದಿವಿ. ಇದಕ್ಕೆ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಸಾಕ್ಷಿ ಇದ್ದಾರೆ ಎಂದು ಡಿಕೆ ಸುರೇಶ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರುಯ.

ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ.ವಿಜಯೇಂದ್ರ, ಮಾಜಿ ಉಪ ಮುಖ್ಯಮಂತ್ರಿಗಳಾದ ಡಾ.ಸಿ.ಎನ್.ಅಶ್ವತ್ಥನಾರಾಯಣ, ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷರಾದ ಜಿ.ಟಿ.ದೇವೇಗೌಡ, ಮಾಜಿ ಸಚಿವರುಗಳಾದ ಸಿ.ಎಸ್ ಪುಟ್ಟರಾಜು, ಸಾ.ರಾ.ಮಹೇಶ್, ಡಾ.ನಾರಾಯಣ ಗೌಡ, ಎಸ್.ಎ.ರಾಮದಾಸ್, ಶಾಸಕ ಹೆಚ್.ಟಿ.ಮಂಜುನಾಥ್, ಮಾಜಿ ಶಾಸಕರುಗಳಾದ ಸುರೇಶ್ ಗೌಡ, ರವೀಂದ್ರ ಶ್ರೀಕಂಠಯ್ಯ, ಡಾ.ಕೆ.ಅನ್ನದಾನಿ, ಕೆ.ಟಿ.ಶ್ರೀಕಂಠೇಗೌಡ, ಬಿಜೆಪಿಯ ಶರಣು ತಳ್ಳೀಕೇರಿ, ಜೆಡಿಎಸ್ ಜಿಲ್ಲಾಧ್ಯಕ್ಷ ರಮೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಇಂದ್ರೇಶ್, ಬಿ.ಆರ್‌.ರಾಮಚಂದ್ರ, ಕೆ.ಎಸ್.ವಿಜಯ್ ಆನಂದ್ ಸೇರಿದಂತೆ ಎರಡೂ ಪಕ್ಷಗಳ ಅನೇಕ ಮುಖಂಡರು, ಕಾರ್ಯಕರ್ತರು ದೊಡ್ಡ ಸಂಖ್ಯೆಯಲ್ಲಿ ನೆರೆದಿದ್ದರು.

BREAKING : ಬಾಗಲಕೋಟೆ : ಚಲಿಸುತ್ತಿದ್ದ ‘KSRTC’ ಬಸ್ ನಿಂದ ಬಿದ್ದು ‘ವಿದ್ಯಾರ್ಥಿನಿ’ ಸಾವು

ಭಾರತದ ಹೊಸ ಫೈಟರ್ ಜೆಟ್ ‘ತೇಜಸ್ MK-1A’ ಮೊದಲ ಹಾರಾಟ ಯಶಸ್ವಿ : ಹಿಂದಿನ ವಿಮಾನಕ್ಕಿಂತ ಹೆಚ್ಚು ಸುಧಾರಿತ, ಮಾರಕ

Share.
Exit mobile version