ಹರಿಹರ ಪಂಚಮಸಾಲಿ ಪೀಠದಲ್ಲಿ ಹೈಡ್ರಾಮಾ: ನಿಷೇಧಾಜ್ಞೆ ಜಾರಿ, ಸಭೆ ನಡೆಸದಂತೆ ಸ್ವಾಮೀಜಿ-ಟ್ರಸ್ಟಿಗಳಿಗೆ ನೋಟಿಸ್!

ದಾವಣಗೆರೆ: ಹರಿಹರ ಪಂಚಮಸಾಲಿ ಪೀಠದಲ್ಲಿ ವಚನಾನಂದ ಸ್ವಾಮೀಜಿ ಹಾಗೂ ಮಠದ ಟ್ರಸ್ಟಿಗಳ ನಡುವಿನ ಸಂಘರ್ಷ ತಾರಕಕ್ಕೇರಿದೆ. ಮಠದ ಆವರಣದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಇಡೀ ಮಠದ ಆವರಣದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದೆ. ಬಿಎನ್​​ಎಸ್ 163 ಅಡಿ ನಿಷೇಧಾಜ್ಞೆ ಮಠದಲ್ಲಿ ನಡೆಯುತ್ತಿರುವ ಸರಣಿ ಗಲಾಟೆಗಳು ಮತ್ತು ಪ್ರಚೋದನಕಾರಿ ಹೇಳಿಕೆಗಳಿಂದ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯಾಗುವ ಸಂಭವವಿರುವ ಕಾರಣ, ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಅವರು ಮೇ 1 ರಿಂದ ಮೇ 30ರ ವರೆಗೆ ಮಠದ ಆವರಣದಲ್ಲಿ … Continue reading ಹರಿಹರ ಪಂಚಮಸಾಲಿ ಪೀಠದಲ್ಲಿ ಹೈಡ್ರಾಮಾ: ನಿಷೇಧಾಜ್ಞೆ ಜಾರಿ, ಸಭೆ ನಡೆಸದಂತೆ ಸ್ವಾಮೀಜಿ-ಟ್ರಸ್ಟಿಗಳಿಗೆ ನೋಟಿಸ್!