ಸುಭಾಷಿತ :

Monday, February 24 , 2020 1:47 AM

ವಿಶ್ವದ ಅತ್ಯಂತ ‘ಕ್ರಿಯಾತ್ಮಕ ನಗರ’ ಪಟ್ಟಿ ರಿಲೀಸ್ : ಬೆಂಗಳೂರು ಹಿಂದಿಕ್ಕಿದ ‘ಹೈದರಾಬಾದ್ ಫಸ್ಟ್’


Sunday, January 19th, 2020 8:11 pm

ನವದೆಹಲಿ : ವಿಶ್ವದ 130 ನಗರಗಳ ಪೈಕಿ ಹೈದರಾಬಾದ್ ವಿಶ್ವದ ಅತ್ಯಂತ ಕ್ರಿಯಾತ್ಮಕ ನಗರವೆಂಬ ಪಟ್ಟಿಯಲ್ಲಿ ಮೊದಲ ಸ್ಥಾವನ್ನು ಪಡೆದಿದೆ. ಇಂತಹ ಸ್ಥಾನದಲ್ಲಿ ಮೊದಲಿದ್ದ ಬೆಂಗಳೂರು ಎರಡನೇ ಸ್ಥಾನಕ್ಕೆ ಇಳಿಯುವ ಮೂಲಕ ಮುತ್ತಿನ ನಗರಿ, ಸಿಲಿಕಾನ್ ಸಿಟಿಯನ್ನು ಹಿಂದಿಕ್ಕಿ ಮುಂದೆ ಸಾಗಿದೆ.

ಜಾಗತೀಕ ಆಸ್ತಿ ಸಲಹಾ ಸಂಸ್ಥೆ ಜೆಎಲ್ ಎಲ್ ಇಂಡಿಯಾ ನಡೆಸಿದ ವಿಶ್ವದ ಅತ್ಯಂತ ಕ್ರಿಯಾತ್ಮಕ ನಗರ ಪಟ್ಟಿಯನ್ನು ಇದೀಗ ಬಿಡುಗಡೆ ಮಾಡಿದೆ. ವಿಶ್ವದ 130 ನಗರಗಳ ಪಟ್ಟಿಯಲ್ಲಿ ಆರ್ಥಿಕ ಮಂದಗತಿಯ ಹೊರತಾಗಿಯೂ, ಏಳು ಭಾರತೀಯ ನಗರಗಳು 2019ನೇ ವರ್ಷದ ಶ್ರೇಯಾಂಕದಲ್ಲಿ ಅಗ್ರ 20 ಸ್ಥಾನಗಳನ್ನು ಪಡೆದುಕೊಂಡಿವೆ.

ಅಂದಹಾಗೇ ವಿಶ್ವದ ಅತ್ಯಂತ ಕ್ರಿಯಾತ್ಮಕ ನಗರಗಳನ್ನು ಗುರ್ತಿಸಲು ಸಾಮಾಜಿಕ-ಆರ್ಥಿಕ, ವಾಣಿಜ್ಯ ಆಸ್ತಿ ಮಾಪನಗಳ ಮಾನದಂಡಗಳನ್ನು ಇಟ್ಟುಕೊಂಡು ಸರ್ವೆ ನಡೆಸಿತ್ತು. ಇಂತಹ ಸಿಟಿ ಮೊಮೆಂಟಮ್ ಇಂಡೆಕ್ಸ್ ಪ್ರಕಾರ ವಿಶ್ವದ 130 ನಗರಗಳ ಪಟ್ಟಿಯಲ್ಲಿ ಹೈದರಾಬಾದ್ ಮೊದಲ ಸ್ಥಾನ ಗಳಿಸಿದರೇ, 2ನೇ ಸ್ಥಾನವನ್ನು ಬೆಂಗಳೂರು ಪಡೆದುಕೊಂಡಿದೆ. ಚೈನ್ನೈ 5ನೇ ಸ್ಥಾನ, ದೆಹಲಿ 6ನೇ ಸ್ಥಾನ ಗಳಿಸಿದೆ. ಪುಣೆ, ಕೋಲ್ಕತ್ತಾ, ಮುಂಬೈ 12, 16, ಮತ್ತು 20ನೇ ಸ್ಥಾನದಲ್ಲಿವೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions