ಫ್ಲೋರಿಡಾ: ಯುನೈಟೆಡ್ ಸ್ಟೇಟ್ಸ್‌ಗೆ ಅಪ್ಪಳಿಸಿದ ಅತ್ಯಂತ ಶಕ್ತಿಶಾಲಿ ಚಂಡಮಾರುತಗಳಲ್ಲಿ ಒಂದಾದ ಇಯಾನ್ ಚಂಡಮಾರುತಕ್ಕೆ ಬಲಿಯಾದವರ ಸಂಖ್ಯೆ ಶನಿವಾರ 40 ಕ್ಕಿಂತ ಹೆಚ್ಚಾಗಿದೆ. ಈ ಹಿನ್ನೆಲೆ, ಅಧ್ಯಕ್ಷ ಜೋ ಬೈಡೆನ್ ವಾರದ ನಂತರ ವಿನಾಶದ ಸಮೀಕ್ಷೆಗಾಗಿ ಫ್ಲೋರಿಡಾಕ್ಕೆ ತೆರಳಲಿದ್ದಾರೆ.

ಬುಧವಾರ ಫ್ಲೋರಿಡಾಗೆ ಅಪ್ಪಳಿಸಿದ ಪ್ರಬಲ ಚಂಡಮಾರುತ ಇಲ್ಲಿಯವರೆಗೂ 40ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿವೆ. ಇನ್ನೂ ಕೆಲವರು ನಾಪತ್ತೆಯಾಗಿದ್ದಾರೆ. ಅವರ ಪತ್ತೆಗಾಗಿ ರಕ್ಷಣಾ ಕಾರ್ಯ ಮುಂದುವರೆದಿದೆ. ಚಂಡಮಾರುತದ ಅಬ್ಬರಕ್ಕೆ ನೂರಾರು ಮನೆಗಳು, ರೆಸ್ಟೋರೆಂಟ್‌ಗಳು ಹಾನಿಗೊಳಗಾಗಿದ್ದು, ಜನರ ಜೀವನ ಅಸ್ತವ್ಯಸ್ತವಾಗಿದೆ ಎಂದು ಅಲ್ಲಿನ ಮಾಧ್ಯಮಗಳು ಶನಿವಾರ ವರದಿ ಮಾಡಿವೆ.

ಜೋ ಬೈಡೆನ್ ಮತ್ತು ಅವರ ಪತ್ನಿ ಜಿಲ್ ಬುಧವಾರ ಫ್ಲೋರಿಡಾಕ್ಕೆ ಭೇಟಿ ನೀಡಲಿದ್ದು, ಪರಿಶೀಲನೆ ನಡೆಸಲಿದ್ದಾರೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೀನ್ ಜೀನ್-ಪಿಯರ್ ಟ್ವೀಟ್ ಮಾಡಿ ತಿಳಿಸಿದ್ದಾರೆ.

BREAKING NEWS: ನಟ ಧ್ರುವ ಸರ್ಜಾ-ಪ್ರೇರಣಾ ದಂಪತಿಗೆ ಹೆಣ್ಣು ಮಗು | Actor Dhruva Sarja

WATCH VIEDO: ರೈಲ್ವೆ ನಿಲ್ದಾಣದಲ್ಲಿ ಹಠಾತ್​ ಹೃದಯಾಘಾತ, ಯಮರಾಜನಿಗೆ ಸೆಡ್ಡು ಹೊಡೆದು ಪ್ರಾಣ ಉಳಿಸಿದ ಅಧುನಿಕ ಸತಿ ಸಾವಿತ್ರಿ

ಇಂಡೋನೇಷ್ಯಾದಲ್ಲಿ ಫುಟ್ಬಾಲ್ ಪಿಚ್‌ಗೆ ನುಗ್ಗಿದ ಅಭಿಮಾನಿಗಳು, ಕಾಲ್ತುಳಿತಕ್ಕೆ 127 ಮಂದಿ ಬಲಿ… ಘಟನೆಯ ಹಿಂಸಾತ್ಮಕ ದೃಶ್ಯಾವಳಿ ಇಲ್ಲಿದೆ

Share.
Exit mobile version